ನವದೆಹಲಿ: ಭಾರತ ಸರ್ಕಾರ ಶೀಘ್ರದಲ್ಲೇ ಒಂದು ರೂಪಾಯಿ ಮುಖಬೆಲೆಯ ಹೊಸ ಕರೆನ್ಸಿ ನೋಟುಗಳನ್ನು ಬಿಡುಗಡೆ ಮಾಡಲಿದೆ. ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ (ಆರ್ಬಿಐ) ಮುದ್ರಿಸಿರುವ ಇತರ ಮುಖಬೆಲೆಯ ನೋಟುಗಳಿಗಿಂತ ಭಿನ್ನವಾಗಿ ಈ ಒಂದು ರೂಪಾಯಿ ಮುಖಬೆಲೆಯ ನೋಟುಗಳನ್ನು ಹಣಕಾಸು ಸಚಿವಾಲಯ ಮುದ್ರಿಸುತ್ತಿದೆ.
“ಹೊಸ ಒಂದು ರೂಪಾಯಿ ಮುಖಬೆಲೆಯ ನೋಟುಗಳು ಅಧಿಕೃತ ಗೆಜೆಟ್ನಲ್ಲಿ ಪ್ರಕಟವಾದ ದಿನಾಂಕದಿಂದ ಜಾರಿಗೆ ಬರಲಿವೆ’ ಎಂದು 7 ಫೆಬ್ರವರಿ 2020 ರ ಇ-ಗೆಜೆಟ್ನಲ್ಲಿ ಉಲ್ಲೇಖಿಸಲಾಗಿದೆ. ಶೀಘ್ರದಲ್ಲಿಯೇ 1 ರೂ. ನೋಟುಗಳು ಚಲಾವಣೆಗೆ ಬರಲಿದೆ.
ಈ ಒಂದು ರೂಪಾಯಿ ಮುಖಬೆಲೆಯ ನೋಟಿನಲ್ಲಿ ‘ಗವರ್ನ್ಮೆಂಟ್ ಆಫ್ ಇಂಡಿಯಾ’ ಮೇಲ್ಭಾಗದಲ್ಲಿ ‘ಭಾರತ್ ಸರ್ಕಾರ್’ ಎಂದು ಬರೆಯಲಾಗಿದೆ. ಹಣಕಾಸು ಸಚಿವಾಲಯದ ಕಾರ್ಯದರ್ಶಿ ಅತನು ಚಕ್ರವರ್ತಿ ಅವರ ದ್ವಿಭಾಷಾ ಸಹಿ ಇದರಲ್ಲಿ ಇರಲಿದೆ. ಒಂದು ರೂಪಾಯಿ ನಾಣ್ಯದ ಚಿತ್ರ ಇದರಲ್ಲಿ ಇದ್ದು, ‘ಸತ್ಯಮೇಯ ಜನತೆ’ ಮತ್ತು ‘ಎಲ್’ ಎಂದು ಕ್ಯಾಪಿಟಲ್ ಲೆಟರ್ನಲ್ಲಿ ಬರೆಯಲಾಗಿದೆ.
ಹೊಸ ಒಂದು ರೂಪಾಯಿ ಕರೆನ್ಸಿ ನೋಟಿನ ಬಣ್ಣವು ಪ್ರಧಾನವಾಗಿ ಗುಲಾಬಿ ಹಸಿರು ಬಣ್ಣದ್ದಾಗಿರುತ್ತದೆ ಮತ್ತು ಇದು ಬಣ್ಣಗಳೊಂದಿಗೆ ಸಂಯೋಜಿತವಾಗಿರುತ್ತದೆ.
ಒಂದು ರೂಪಾಯಿ ಕರೆನ್ಸಿ ನೋಟುಗಳು ಆಯತಾಕಾರದ 9.7 x 6.3 ಸೆಮೀ ಗಾತ್ರದಲ್ಲಿರುತ್ತವೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.