ನಾಗ್ಪುರ: ಭಾರತದಲ್ಲಿ ಪ್ರತಿಯೊಬ್ಬರಿಗೂ ಅತ್ಯಂತ ನೆಚ್ಚಿನ ಸ್ಟ್ರೀಟ್ ಫುಡ್ ಎಂದರೆ ಅದು ಪಾನಿಪುರಿ. ನಗರದ ಪ್ರತಿ ಬೀದಿಗಳಲ್ಲೂ ಪಾನಿಪುರಿ ಸಿಗುತ್ತದೆ. ಇದನ್ನು ಮುಗಿಬಿದ್ದು ಜನ ತಿನ್ನುತ್ತಾರೆ. ಕೆಲವೊಂದು ಕಡೆ ಇದಕ್ಕೆ ಗೋಲ್ಗೊಪ್ಪ ಎಂದು ಕರೆದರೆ, ಕೆಲವೊಂದು ಕಡೆ ಇದಕ್ಕೆ ಪುಚ್ಕಾ ಎಂದು ಕರೆಯುತ್ತಾರೆ. ಇದೀಗ ಮಹಾರಾಷ್ಟ್ರದ ನಾಗ್ಪುರದಲ್ಲಿ ಮೊದಲ ಸ್ವಯಂಚಾಲಿತ ಪಾನಿಪುರಿ ವೆಂಡಿಂಗ್ ವೆಶಿನ್ ಅನ್ನು ಅಳವಡಿಸಲಾಗಿದೆ. ಈಗಾಗಲೇ ಬೆಂಗಳೂರು ಮತ್ತು ಅಹ್ಮದಾಬಾದಿನಲ್ಲಿ ಈಗಾಗಲೇ ಪಾನಿಪುರಿ ವೆಂಡಿಂಗ್ ಮೆಶಿನ್ ಇದೆ.
ನಾಗ್ಪುರದಲ್ಲಿ ಅಳವಡಿಸಲಾದ ವೆಂಡಿಂಗ್ ಮೆಶಿನ್ 20 ರೂಪಾಯಿಗೆ ಒಂದು ಪ್ಲೇಟ್ ಪಾನಿಪುರಿ ಸಿಗಲಿದೆ. ಶಾಮಲ್ ಅನಾಸನೆ ಎಂಬುವವರು ಇದನ್ನು ಅಳವಡಿಸಿದ್ದಾರೆ. ಅಹ್ಮದಾಬಾದಿಗೆ ತೆರಳಿದಾಗ ಅಲ್ಲಿ ಅವರು ಪಾನಿಪುರಿ ವೆಂಡಿಂಗ್ ಮೆಶಿನ್ ನೋಡಿ ಅದನ್ನು ನಾಗ್ಪುರದಲ್ಲಿ ಅಳವಡಿಸಿದ್ದಾರೆ.
ನಾಗ್ಪುರದ ಈ ವೆಂಡಿಂಗ್ ಮೆಶಿನ್ ಅತ್ಯಂತ ನೈರ್ಮಲ್ಯದಿಂದ ಕೂಡಿದ್ದು, ಪಾನಿಪುರಿ ಪೂರೈಸುವುದು ಅತ್ಯಂತ ಸುಲಭ ಮತ್ತು ವಿಭಿನ್ನ ಶೈಲಿಯಾಗಿದೆ. ಯಶವಂತ್ ಸ್ಟೇಡಿಯಂನ ಧಂತೋಲಿಯ ಮೆಹದಿಯ ಸ್ಕ್ವೇರ್ನಲ್ಲಿ ವೆಂಡಿಂಗ್ ಮೆಶಿನ್ ಇದೆ. ಬೆಳಿಗ್ಗೆ 7 ರಿಂದ ರಾತ್ರಿ 11 ಗಂಟೆಯವರೆಗೆ ಇದು ತೆರೆದಿರುತ್ತದೆ. 6 ಬಗೆ ಫ್ಲೇವರ್ನಲ್ಲಿ ಪಾನಿಪುರಿಯನ್ನು ಇಲ್ಲಿ ನೀಡಲಾಗುತ್ತಿದೆ.
ಭಾರತದ ವಿವಿಧ ಖಾದ್ಯಗಳನ್ನು ಈಗ ವಿಭಿನ್ನವಾದ ರೀತಿಯಲ್ಲಿ ಪೂರೈಕೆ ಮಾಡುವ ವಿಧಾನಗಳು ಆರಂಭಗೊಂಡಿವೆ. ಪಾನಿಪುರಿ ಕೂಡ ಹೈಟೆಕ್ ಸ್ಪರ್ಶವನ್ನು ಪಡೆದುಕೊಂಡಿರುವುದು ಪಾನಿಪುರಿ ಪ್ರಿಯರಿಗೆ ಸಂತೋಷವನ್ನುಂಟು ಮಾಡಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.