ನವದೆಹಲಿ: ಭಾರತದ ಮಹತ್ವಾಕಾಂಕ್ಷೆಯ ಮಾನವ ಸಹಿತ ಗಗನಯಾನಕ್ಕಾಗಿ ಸಿದ್ಧತೆಗಳು ಭರದಿಂದ ಸಾಗಿದೆ. ರಷ್ಯಾಗೆ ನಾಲ್ಕು ಭಾರತೀಯ ಗಗನಯಾತ್ರಿಗಳು ತೆರಳಿದ್ದು, ಅಲ್ಲಿ 12 ತಿಂಗಳ ಸುದೀರ್ಘ ತರಬೇತಿಯನ್ನು ಪಡೆದುಕೊಳ್ಳಲಿದ್ದಾರೆ. ಫೆ. 10 ರಿಂದಲೇ ತರಬೇತಿ ಕಾರ್ಯ ಪ್ರಾರಂಭವಾಗಿದೆ.
ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ ಇಸ್ರೋದ ಸಂಪೂರ್ಣ ಪ್ರಕ್ರಿಯೆಯ ನಂತರ ಆಯ್ಕೆಯಾದ ನಾಲ್ಕು ಭಾರತೀಯ ವಾಯುಪಡೆಯ ಫೈಟರ್ ಪೈಲೆಟ್ಗಳು ರಷ್ಯಾದ ಗಗಾರಿನ್ ರಿಸರ್ಚ್ ಆ್ಯಂಡ್ ಟೆಸ್ಟ್ ಕಾಸ್ಮೋನಟ್ ಟ್ರೈನಿಂಗ್ ಸೆಂಟರ್ (ಜಿಸಿಟಿಸಿ)ನಲ್ಲಿ ತಮ್ಮ ತರಬೇತಿಯನ್ನು ಪ್ರಾರಂಭಿಸಿದ್ದಾರೆ.
“ಗ್ಲ್ಯಾವ್ಕೋಸ್ಮೋಸ್, ಜೆಎಸ್ಸಿ (ರಾಜ್ಯ ಬಾಹ್ಯಾಕಾಶ ನಿಗಮದ ರೋಸ್ಕೋಸ್ಮೋಸ್ ನ ಭಾಗ) ಮತ್ತು ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆಯ (ಇಸ್ರೋ) ಮಾನವ ಬಾಹ್ಯಾಕಾಶ ಹಾರಾಟ ಕೇಂದ್ರದ ನಡುವಿನ ಒಪ್ಪಂದದಡಿಯಲ್ಲಿ ಬಾಹ್ಯಾಕಾಶ ಹಾರಾಟಕ್ಕಾಗಿ ಭಾರತೀಯ ಅಭ್ಯರ್ಥಿಗಳ ಯೋಜಿತ ತರಬೇತಿ ಕಾರ್ಯಕ್ರಮವನ್ನು ಜಿಸಿಟಿಸಿ ಪ್ರಾರಂಭಿಸಿದೆ” ಎಂದು ಗ್ಲಾವ್ಕೋಸ್ಮೋಸ್ ಹೇಳಿಕೆಯಲ್ಲಿ ತಿಳಿಸಿದೆ.
12 ತಿಂಗಳ ತರಬೇತಿಯು ಸಮಗ್ರ ಮತ್ತು ಬಯೋಮೆಡಿಕಲ್ ತರಬೇತಿಯನ್ನು ಒಳಗೊಂಡಿರುತ್ತದೆ, ಇದನ್ನು ನಿಯಮಿತ ದೈಹಿಕ ಅಭ್ಯಾಸಗಳೊಂದಿಗೆ ಸಂಯೋಜಿಸಲಾಗುತ್ತದೆ.
“ಇದಲ್ಲದೆ, ಅವರು ಸೋಯುಜ್ ಮಾನವಸಹಿತ ಆಕಾಶನೌಕೆಯ ವ್ಯವಸ್ಥೆಗಳನ್ನು ವಿವರವಾಗಿ ಅಧ್ಯಯನ ಮಾಡಲಿದ್ದಾರೆ, ಜೊತೆಗೆ ವಿಶೇಷ ಐಲ್ -76 ಎಂಡಿಕೆ ವಿಮಾನದಲ್ಲಿ ಅಲ್ಪಾವಧಿಯ ತೂಕವಿಲ್ಲದ ಕ್ರಮದಲ್ಲಿ ಅವರಿಗೆ ತರಬೇತಿ ನೀಡಲಾಗುವುದು” ಎಂದು ಗ್ಲಾವ್ಕೋಸ್ಮೋಸ್ ಹೇಳಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.