ನವದೆಹಲಿ: ಮುಂಬೈನ ನೇವಿ ಚಿಲ್ಡ್ರನ್ ಸ್ಕೂಲ್ (ಎನ್ಸಿಎಸ್) ನ ಏಳನೇ ತರಗತಿ ವಿದ್ಯಾರ್ಥಿನಿ ಕಾಮ್ಯ ಕಾರ್ತಿಕೇಯನ್ ದಕ್ಷಿಣ ಅಮೆರಿಕದ ಅತ್ಯುನ್ನತ ಶಿಖರವಾದ ಮೌಂಟ್ ಅಕೋನ್ಕಾಗುವಾದ ತುತ್ತ ತುದಿಯನ್ನು ಏರಿದ ವಿಶ್ವದ ಅತ್ಯಂತ ಕಿರಿಯ ಬಾಲಕಿಯಾಗಿ ಹೊರಹೊಮ್ಮಿದ್ದಾಳೆ ಎಂದು ನೌಕಾಪಡೆಯ ಅಧಿಕಾರಿಗಳು ಭಾನುವಾರ ತಿಳಿಸಿದ್ದಾರೆ.
ಮೌಂಟ್ ಅಕೋನ್ಕಾಗುವಾ 6962 ಮೀಟರ್ ಎತ್ತರದ ಶಿಖರವಾಗಿದೆ. ಇದು ಏಷ್ಯಾದ ಹೊರಗಿರುವ ಅತ್ಯುನ್ನತ ಶಿಖರವಾಗಿದೆ.
ಕಾಮ್ಯ ಕಾರ್ತಿಕೇಯನ್ ಫೆಬ್ರವರಿ 1 ರಂದು ಈ ಶಿಖರವನ್ನು ಏರಿ ಅದರ ತುದಿಯಲ್ಲಿ ತ್ರಿವರ್ಣ ಧ್ವಜವನ್ನು ಹಾರಿಸಿದ್ದಾರೆ.
ಕಾಮ್ಯ ಕೆಲವು ವರ್ಷಗಳಿಂದ ದೈಹಿಕ ಮತ್ತು ಮಾನಸಿಕ ತಯಾರಿಗಳನ್ನು ಇದಕ್ಕಾಗಿ ನಡೆಸುತ್ತಾ ಬಂದಿದ್ದಾಳೆ, ಆಕೆ ನಿಯಮಿತವಾಗಿ ಸಾಹಸ ಕ್ರೀಡೆಗಳಲ್ಲೂ ಭಾಗವಹಿಸುತ್ತಿದ್ದಳು. ಇದು ಆಕೆಗೆ ಮೌಂಟ್ ಅಕೋನ್ಕಾಗುವಾವನ್ನು ಯಶಸ್ವಿಯಾಗಿ ಏರಲು ಸಹಾಯವಾಯಿತು ಎಂದು ನೌಕಾ ಪಡೆಯ ಅಧಿಕಾರಿಗಳು ತಿಳಿಸಿದ್ದಾರೆ.
ಈ ಅಪರೂಪದ ಸಾಧನೆಯನ್ನು ಸಾಧಿಸಲು ಯುವತಿ ಅನೇಕ ಆಡಳಿತಾತ್ಮಕ ಅಡೆತಡೆಗಳನ್ನು ಮತ್ತು ತೀವ್ರ ಹವಮಾನ ಪರಿಸ್ಥಿತಿಗಳನ್ನು ಎದುರಿಸಿದ್ದಾಳೆ ಎಂದು ಅಧಿಕಾರಿಗಳು ಹೇಳಿದ್ದಾರೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.