ನವದೆಹಲಿ: ‘ನಾವು ಕಾಗದ ತೋರಿಸುವುದಿಲ್ಲ (ಹಮ್ ಕಾಗಝ್ ನಹೀ ದಿಕಾಯೇಂಗೆ)’ ಎಂದು ದೊಡ್ಡ ಮಟ್ಟದಲ್ಲಿ ಘೋಷಣೆ ಕೂಗುತ್ತಿದ್ದ ಶಹೀನ್ ಭಾಗ್ ಮತ್ತು ಜಾಮಿಯಾ ನಗರದ ಸಿಎಎ ವಿರೋಧಿ ಹೋರಾಟಗಾರರು ಇಂದು ದೆಹಲಿ ವಿಧಾನಸಭಾ ಚುನಾವಣೆಗೆ ಮತದಾನ ಮಾಡಲು ತಮ್ಮ ವೋಟರ್ ಐಡಿ ಹಿಡಿದು ಕ್ಯೂನಲ್ಲಿ ನಿಂತಿದ್ದರು.
ಭಾರೀ ಪ್ರಮಾಣದಲ್ಲಿ ಜಾಮಿಯಾ ನಗರ ನಿವಾಸಿಗಳು ಮತದಾನಕ್ಕಾಗಿ ಆಗಮಿಸಿದ್ದರು. ಓಕ್ಲಾ ಕ್ಷೇತ್ರದಲ್ಲಿ ಜಾಮಿಯಾ ನಗರವಿದೆ. ಇನ್ನು ಶಹೀನ್ ಭಾಗ್ ಪ್ರತಿಭಟನಾಕಾರರು ಕೂಡ ಅಗತ್ಯ ದಾಖಲೆಯನ್ನು ಹಿಡಿದುಕೊಂಡ ಮತದಾನ ಪ್ರಕ್ರಿಯೆಯಲ್ಲಿ ಭಾಗಿಯಾಗಿದ್ದಾರೆ.
ನಾವು ಎನ್ ಪಿ ಆರ್, ಎನ್ ಆರ್ ಸಿಗೆ ಯಾವುದೇ ದಾಖಲೆಗಳನ್ನು ನೀಡುವುದಿಲ್ಲ ಎಂದು ವಾದಿಸುತ್ತಾ, ‘ಹಮ್ ಕಾಗಝ್ ನಹೀ ದಿಕಾಯೇಂಗೆ’ ಎಂದು ಬೊಬ್ಬಿಡುತ್ತಿದ್ದರು. ಆದರೆ ಅದೇ ಕಾಗದವನ್ನು ತೋರಿಸಿ ಇಂದು ಅವರಗಳು ಮತದಾನ ಮಾಡಿದ್ದಾರೆ.
ಇಷ್ಟಕ್ಕೂ ಸಿಎಎ ಕಾಯ್ದೆಯಡಿ ಯಾವುದೇ ಭಾರತೀಯರಿಗೆ ಯಾವುದೇ ದಾಖಲೆಯನ್ನು ತೋರಿಸುವ ಪ್ರಶ್ನೆಯೇ ಉದ್ಭವಿಸುವುದಿಲ್ಲ, ಇನ್ನು ಎನ್ ಆರ್ ಸಿ ದೇಶದಲ್ಲಿ ಅನುಷ್ಠಾನಕ್ಕೆ ಬಂದೇ ಇಲ್ಲ. ಎನ್ ಪಿ ಆರ್ ಗೆ ಸಂಬಂಧಿಸಿದಂತೆ ಯಾವುದೇ ದಾಖಲೆಗಳನ್ನು ನಾಗರಿಕರು ನೀಡಬೇಕಾಗಿಲ್ಲ ಎಂದು ಕೇಂದ್ರ ಈಗಾಗಲೇ ಸ್ಪಷ್ಟಪಡಿಸಿದೆ.
ಒಟ್ಟಿನಲ್ಲಿ ‘ಕಾಗಝ್ ನಹೀ ದಿಕಾಯೇಂಗೆ’ ಗ್ಯಾಂಗ್ ಅಗತ್ಯ ಬಂದಾಗ ಕಾಗದ ತೋರಿಸುತ್ತೇವೆ ಎಂಬುದನ್ನು ಇಂದು ಸಾಬೀತುಪಡಿಸಿ ತೋರಿಸಿದ್ದಾರೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.