ಬೆಂಗಳೂರು: ದೇಶದಾದ್ಯಂತ ಇರುವ ವಕ್ಫ್ ಆಸ್ತಿಗಳನ್ನು ಲೆಕ್ಕಹಾಕಲಾಗಿಲ್ಲ ಎಂದು ಆರೋಪಿಸಿ ಸುಪ್ರೀಂಕೋರ್ಟ್ಗೆ ಸಾರ್ವಜನಿಕ ಹಿತಾಸಕ್ತಿ ಅರ್ಜಿ ಸಲ್ಲಿಕೆಯಾಗಿದೆ. ಈ ನಡುವೆ ಮಾಧ್ಯಮವೊಂದು ಕಲೆ ಹಾಕಿದ ದತ್ತಾಂಶವು ವಿವಿಧ ರಾಜ್ಯ ವಕ್ಫ್ ಮಂಡಳಿಗಳು 6.1 ಲಕ್ಷಕ್ಕೂ ಹೆಚ್ಚು ಸ್ಥಿರ ಆಸ್ತಿಗಳನ್ನು ಹೊಂದಿದೆ ಎಂಬುದನ್ನು ತೋರಿಸಿದೆ. ಇದರಲ್ಲಿ ಕಾಲು ಭಾಗಕ್ಕಿಂತಲೂ ಹೆಚ್ಚು ಉತ್ತರ ಪ್ರದೇಶದಲ್ಲಿದೆ. ಭಾರತದಾದ್ಯಂತ ಸುಮಾರು ಶೇ. 3 ರಷ್ಟು ಆಸ್ತಿಗಳನ್ನು ಅತಿಕ್ರಮಣ ಮಾಡಲಾಗಿದೆ.
ನ್ಯಾಷನಲ್ ವಕ್ಫ್ ಮ್ಯಾನೇಜ್ಮೆಂಟ್ ಸಿಸ್ಟಮ್ ಆಫ್ ಇಂಡಿಯಾ (WAMSI)) ಯೋಜನೆಯ ಮಾಹಿತಿಯ ಪ್ರಕಾರ, ಜನವರಿ 31, 2020 ರಂತೆ ವಿವಿಧ ರಾಜ್ಯ ವಕ್ಫ್ ಮಂಡಳಿಗಳ ಒಡೆತನದಲ್ಲಿ 6,16,732 ಆಸ್ತಿಗಳಿವೆ.
ಈ ಪೈಕಿ ಯುಪಿಯಲ್ಲಿ 1.5 ಲಕ್ಷ ಸುನ್ನಿ ಮತ್ತು 12,229 ಶಿಯಾ ವಕ್ಫ್ ಆಸ್ತಿಗಳು ಇದ್ದರೆ, ಪಶ್ಚಿಮ ಬಂಗಾಳದಲ್ಲಿ 80,480 ಮತ್ತು ಕರ್ನಾಟಕದಲ್ಲಿ 54,194 ಆಸ್ತಿಗಳಿವೆ. ಯುಪಿಯಂತೆ ಅಲ್ಪಸಂಖ್ಯಾತ ವ್ಯವಹಾರಗಳ ಸಚಿವಾಲಯ ಮತ್ತು ಕೇಂದ್ರ ವಕ್ಫ್ ಕೌನ್ಸಿಲ್ ಇತರ ರಾಜ್ಯಗಳಲ್ಲಿ ಶಿಯಾ ಮತ್ತು ಸುನ್ನಿ ಮಾಲೀಕತ್ವವನ್ನು ಪ್ರತ್ಯೇಕಿಸಿಲ್ಲ.
ಯುಪಿ, ಪಶ್ಚಿಮಬಂಗಾಳ ಮತ್ತು ಕರ್ನಾಟಕ ಈ ಮೂರು ರಾಜ್ಯಗಳು ಭಾರತದ ಎಲ್ಲಾ ವಕ್ಫ್ ಆಸ್ತಿಗಳಲ್ಲಿ ಅರ್ಧದಷ್ಟು (49%) ಪಾಲನ್ನು ಹೊಂದಿವೆ. ತಮಿಳುನಾಡಿನಲ್ಲಿ (53,486) ಆಸ್ತಿಗಳು, ಕೇರಳದಲ್ಲಿ 42,348 ಆಸ್ತಿಗಳು ಇವೆ. ಇವು ಕ್ರಮವಾಗಿ ನಾಲ್ಕನೇ ಮತ್ತು ಐದನೇ ಸ್ಥಾನದಲ್ಲಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.