ನವದೆಹಲಿ: ಯುನೈಟೆಡ್ ಪೇಮೆಂಟ್ ಇಂಟರ್ಫೇಸ್ (ಯುಪಿಐ) ಆಧಾರಿತ ಡಿಜಿಟಲ್ ಪಾವತಿ ಉಪಕ್ರಮವನ್ನು ಪ್ರಾರಂಭಿಸಲು ಬಯಸುತ್ತಿರುವ ಫೇಸ್ಬುಕ್ ಒಡೆತನದ ವಾಟ್ಸ್ಯಾಪ್ ಈ ನಿಟ್ಟಿನಲ್ಲಿ ಪ್ರಮುಖ ಮುನ್ನಡೆಯನ್ನು ಗಿಟ್ಟಿಸಿದೆ. ಈ ಸಂಸ್ಥೆಯು ತನ್ನ ಪಾವತಿ ಸೇವೆಗಳನ್ನು 10 ಮಿಲಿಯನ್ ಬಳಕೆದಾರರಿಗೆ ವಿಸ್ತರಿಸಲು ರಾಷ್ಟ್ರೀಯ ಪಾವತಿ ನಿಗಮದಿಂದ (ಎನ್ಪಿಸಿಐ) ನಿರ್ಣಾಯಕ ಅನುಮೋದನೆಯನ್ನು ಪಡೆದುಕೊಂಡಿದೆ.
ಐಐಟಿ ಇಂಡಸ್ಟ್ರಿ ಕಾನ್ಕ್ಲೇವ್ನಲ್ಲಿ ಮಾತನಾಡುವಾಗ ನಂದನ್ ನಿಲೇಕಣಿ ಅವರು ಈ ಪ್ರಮುಖ ಬೆಳವಣಿಗೆಯ ಬಗ್ಗೆ ಮಾಹಿತಿ ನೀಡಿದ್ದಾರೆ. ನಿಲೇಕಣಿ ಅವರನ್ನು ಆಧಾರ್ ಡೇಟಾಬೇಸ್ ಮತ್ತು ಯುಪಿಐನ ಶಿಲ್ಪಿ ಎಂದು ಕರೆಯಲಾಗುತ್ತದೆ.
ಸಾಮಾಜಿಕ ಮಾಧ್ಯಮ ದಿಗ್ಗಜ ಫೇಸ್ಬುಕ್ ತನ್ನ ವಾಟ್ಸಾಪ್ ಪೇ ಸೇವೆಯ ಪ್ರಯೋಗವನ್ನು ಭಾರತದಾದ್ಯಂತ ಒಂದು ಮಿಲಿಯನ್ ಬಳಕೆದಾರರೊಂದಿಗೆ ನಡೆಸುತ್ತಿದೆ ಎಂಬುದು ಗಮನಾರ್ಹವಾಗಿದೆ. ಆದರೂ, ಸಂಸ್ಥೆಯು ದೇಶಾದ್ಯಂತ ಪೂರ್ಣ ಪ್ರಮಾಣದ ಸೇವೆಗಳನ್ನು ಪ್ರಾರಂಭಿಸಲು ಪರವಾನಗಿ ಪಡೆಯಲು ಹೆಣಗಾಡುತ್ತಿದೆ.
ವಾಟ್ಸ್ಯಾಪ್ ಭಾರತದಲ್ಲಿ 400 ದಶಲಕ್ಷಕ್ಕೂ ಹೆಚ್ಚು ಬಳಕೆದಾರರನ್ನು ಹೊಂದಿದ್ದು, ಇದು ಮೆಸೇಜಿಂಗ್ ಸೇವೆಯನ್ನು ವಿಶ್ವದಾದ್ಯಂತ ಅತಿದೊಡ್ಡ ಮಾರುಕಟ್ಟೆಯನ್ನಾಗಿ ಮಾಡಿಕೊಂಡಿದೆ. ಒಮ್ಮೆ ಪೂರ್ಣ ಪ್ರಮಾಣದ ಆಧಾರದ ಮೇಲೆ ಈ ಮಾರುಕಟ್ಟೆಯಲ್ಲಿ ಪಾವತಿ ಸೇವೆ ಪ್ರಾರಂಭವಾದರೆ, ವಾಟ್ಸ್ಯಾಪ್ ಪೇ ಇತರ ದೈತ್ಯ ಸಂಸ್ಥೆಗಳಾದ ಅಲಿಬಾಬಾ ಬೆಂಬಲಿತ ಪೇಟಿಎಂ, ಗೂಗಲ್ನ ಜಿ-ಪೇ ಮತ್ತು ವಾಲ್ಮಾರ್ಟ್ ಒಡೆತನದ ಫೋನ್ಪೇ ವಿರುದ್ಧ ದೃಢವಾಗಿ ಸ್ಪರ್ಧಿಸಲಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.