ನವದೆಹಲಿ: DefExpo -2020 ಅನ್ನು ‘ಐತಿಹಾಸಿಕ ಯಶಸ್ಸು’ ಎಂದು ಕರೆದಿರುವ ರಕ್ಷಣಾ ಸಚಿವ ರಾಜನಾಥ್ ಸಿಂಗ್ ಅವರು, 200 ಕ್ಕೂ ಹೆಚ್ಚು ಜ್ಞಾಪಕ ಪತ್ರಗಳಿಗೆ (ಎಂಒಯು) ಸಹಿ ಮತ್ತು ಎಕ್ಸ್ಪೋದಲ್ಲಿ ತಂತ್ರಜ್ಞಾನ ಒಪ್ಪಂದಗಳ ವರ್ಗಾವಣೆಯನ್ನು ಮಾಡುವುದಾಗಿ ಶುಕ್ರವಾರ ಘೋಷಣೆ ಮಾಡಿದ್ದಾರೆ.
13 ಉತ್ಪನ್ನಗಳ ಬಿಡುಗಡೆಯ ಹೊರತಾಗಿ, ಆರು ಪ್ರಮುಖ ಪ್ರಕಟಣೆಗಳು, 18 ತಂತ್ರಜ್ಞಾನ ಒಪ್ಪಂದಗಳ ವರ್ಗಾವಣೆ ಮತ್ತು 71 ಒಪ್ಪಂದಗಳನ್ನು ಶುಕ್ರವಾರ ಸಹಿ ಮಾಡಲಾಗಿದೆ. ಎಕ್ಸ್ಪೋದ ಸೈಡ್ಲೈನ್ನಲ್ಲಿ 100 ಕ್ಕೂ ಹೆಚ್ಚು ಒಪ್ಪಂದಗಳಿಗೆ ಸಹಿ ಹಾಕಲಾಗಿದ್ದು, ಇದು ಒಟ್ಟು ಒಪ್ಪಂದಗಳ ಸಂಖ್ಯೆಯನ್ನು 200ಕ್ಕೆ ಏರಿಸಿದೆ.
ಈ ಒಪ್ಪಂದಗಳು ಉತ್ತರಪ್ರದೇಶದ ಎಕ್ಸ್ಪ್ರೆಸ್ವೇ ಕೈಗಾರಿಕಾ ಅಭಿವೃದ್ಧಿ ಪ್ರಾಧಿಕಾರ (ಯುಪಿಇಡಿಎ)ನೊಂದಿಗೆ 23 ಒಪ್ಪಂದಗಳೂ ಸೇರಿವೆ. ಉತ್ತರಪ್ರದೇಶದ ರಕ್ಷಣಾ ಕಾರಿಡಾರ್ ಯೋಜನೆಯಲ್ಲಿ ಸುಮಾರು 50,000 ಕೋಟಿ ರೂ. ಹೂಡಿಕೆಯನ್ನು ಈ ಒಪ್ಪಂದ ಒಳಗೊಂಡಿದೆ.
“ನಮ್ಮ ಸರ್ಕಾರ ಅನೇಕ ಸುಧಾರಣೆಗಳನ್ನು ಮಾಡಿದೆ. ನಾವು ಉದ್ಯಮ ಪರವಾನಗಿ ಪ್ರಕ್ರಿಯೆಯನ್ನು ಸರಾಗಗೊಳಿಸಿದ್ದೇವೆ. ನಾವು ವಿದೇಶಿ ನೇರ ಹೂಡಿಕೆ (ಎಫ್ಡಿಐ) ಅನ್ನು ಹೆಚ್ಚಿಸಿದ್ದೇವೆ. ನಾವು ರಕ್ಷಣಾ ಆಫ್ಸೆಟ್ ನೀತಿಯನ್ನು ಸುವ್ಯವಸ್ಥಿತಗೊಳಿಸಿದ್ದೇವೆ ಮತ್ತು ಅದನ್ನು ಇನ್ನಷ್ಟು ಸುವ್ಯವಸ್ಥಿತಗೊಳಿಸಲು ಕಾರ್ಯೋನ್ಮುಖಗೊಂಡಿದ್ದೇವೆ” ಎಂದು ಉತ್ಪನ್ನ ಬಿಡುಗಡೆ, ಹೊಸ ಪ್ರಕಟಣೆಗಳು, ತಂತ್ರಜ್ಞಾನದ ವರ್ಗಾವಣೆ ಮತ್ತು ಒಪ್ಪಂದಗಳಿಗೆ ಸಹಿ ಹಾಕಲು ಆಯೋಜಿಸಿದ್ದ ‘ಬಂಧನ್ ’ ಸಮಾರಂಭದಲ್ಲಿ ಮಾತನಾಡಿದ ಸಂದರ್ಭದಲ್ಲಿ ರಾಜನಾಥ್ ಸಿಂಗ್ ಹೇಳಿದರು.
‘ಇನ್ನೋವೇಟಿವ್ ಫಾರ್ ಡಿಫೆನ್ಸ್ ಇಂಟರ್ನ್ಶಿಪ್’ ಯೋಜನೆಯಡಿ 50 ಎಂಜಿನಿಯರಿಂಗ್ ಕಾಲೇಜುಗಳ ವಿದ್ಯಾರ್ಥಿಗಳಿಗೆ ರಕ್ಷಣಾ ಕ್ಷೇತ್ರದ ಹೊಸತನವನ್ನು ಕಲಿಸಿಕೊಡಲಾಗುತ್ತದೆ ಎಂದು ಸಚಿವರು ಘೋಷಿಸಿದರು.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.