ನವದೆಹಲಿ: ಭಾರತೀಯ ರೈಲ್ವೆಯ ಪಶ್ಚಿಮ ರೈಲ್ವೆ ವಲಯವು ಒಂದೇ ದಿನದಲ್ಲಿ 5.5 ಲಕ್ಷ ಡಿಜಿಟಲ್ ಟಿಕೆಟ್ಗಳನ್ನು ಅನ್ರಿಸರ್ವ್ಡ್ ಟಿಕೆಟಿಂಗ್ ಸಿಸ್ಟಮ್ (ಯುಟಿಎಸ್) ಮೊಬೈಲ್ ಆ್ಯಪ್ ಮೂಲಕ ಮಾರಾಟ ಮಾಡಿದೆ. ಈ ಮೂಲಕ ಅದು ಡಿಜಿಟಲೀಕರಣದತ್ತ ದೊಡ್ಡ ಹೆಜ್ಜೆ ಮುಂದಿಟ್ಟಿದೆ.
ಪಶ್ಚಿಮ ರೈಲ್ವೆ ಬಿಡುಗಡೆ ಮಾಡಿದ ಹೇಳಿಕೆಯಲ್ಲಿ, 2020 ರ ಫೆಬ್ರವರಿ 3 ರಂದು 5.5 ಲಕ್ಷ ಪ್ರಯಾಣಿಕರು ಯುಟಿಎಸ್ ಆ್ಯಪ್ ಮೂಲಕ ಟಿಕೆಟ್ ಕಾಯ್ದಿರಿಸಿದ್ದಾರೆ, ಅದು ಆ ದಿನ ಪ್ರಯಾಣಿಸಿದ ಒಟ್ಟು ಉಪನಗರ ಪ್ರಯಾಣಿಕರಲ್ಲಿ 11.03% ರಷ್ಟಾಗಿದೆ, ಅದರ ಉಪನಗರ ವಿಭಾಗದಲ್ಲಿ ಪ್ರಯಾಣಿಸಿದ ಒಟ್ಟು ಪ್ರಯಾಣಿಕರ ಸಂಖ್ಯೆ 50,28,043.
ರೈಲ್ವೆ ಪ್ರಯಾಣಿಕರಲ್ಲಿ ಯುಟಿಎಸ್ ಮೊಬೈಲ್ ಅಪ್ಲಿಕೇಶನ್ ಜನಪ್ರಿಯವಾಗುತ್ತಿದೆ, ಹೆಚ್ಚಿನ ಜನರು ಇದನ್ನು ಬಳಸುತ್ತಿದ್ದಾರೆ ಎಂಬುದನ್ನು ಅಂಕಿಅಂಶಗಳೇ ತೋರಿಸುತ್ತಿದೆ.
2018 ರ ನವೆಂಬರ್ ತಿಂಗಳಲ್ಲಿ ದಿನಕ್ಕೆ ಸರಾಸರಿ ಸಕ್ರಿಯ ಬಳಕೆದಾರರು 1.24 ಲಕ್ಷ ಆಗಿದ್ದರು ಮತ್ತು ಈಗ ಅದು 2020 ರ ಜನವರಿಯಲ್ಲಿ 3.39 ಲಕ್ಷಕ್ಕೆ ಏರಿದೆ ಎಂದು ಪಶ್ಚಿಮ ರೈಲ್ವೆಯ ಅಧಿಕೃತ ವಕ್ತಾರರು ತಿಳಿಸಿದ್ದಾರೆ.
ಯುಟಿಎಸ್ ಮೊಬೈಲ್ ಅಪ್ಲಿಕೇಶನ್ ಅನ್ನು ಪರಿಚಯಿಸುವ ಉದ್ದೇಶ ಡಿಜಿಟಲ್ ಟಿಕೆಟಿಂಗ್ ಮೋಡ್ ಅನ್ನು ಪ್ರೋತ್ಸಾಹಿಸುವುದು, ಸ್ವಯಂ-ಟಿಕೆಟಿಂಗ್ ಅನ್ನು ಉತ್ತೇಜಿಸುವುದು ಮತ್ತು ಪ್ರಯಾಣಿಕರು ಕ್ಯೂಗಳನ್ನು ಎದುರಿಸದೆಯೇ ಟಿಕೆಟ್ ಖರೀದಿಸುವುದನ್ನು ಖಚಿತಪಡಿಸಿಕೊಳ್ಳುವುದು ಎಂದು ಅವರು ಹೇಳಿದ್ದಾರೆ.
ಯುಟಿಎಸ್ ಅಪ್ಲಿಕೇಶನ್ನ ಬಳಕೆಯನ್ನು ಜನಪ್ರಿಯಗೊಳಿಸುವ ಪ್ರಯತ್ನದಲ್ಲಿ ವೆಸ್ಟರ್ನ್ ರೈಲ್ವೆ ನಿಲ್ದಾಣಗಳಾದ್ಯಂತ ಅಭಿಯಾನಗಳನ್ನು ನಡೆಸಿದ್ದು, ಪ್ರಯಾಣಿಕರಿಗೆ ಉಪಯುಕ್ತತೆ ಮತ್ತು ಪ್ರಯೋಜನಗಳ ಬಗ್ಗೆ ತಿಳಿಸುತ್ತಿದೆ. ಯುಟಿಎಸ್ ಆ್ಯಪ್ ಬಗ್ಗೆ ಜಾಗೃತಿ ಮೂಡಿಸಲು ವಿವಿಧ ಕಾಲೇಜುಗಳ ವಿದ್ಯಾರ್ಥಿಗಳ ಸಹಾಯವನ್ನೂ ಪಡೆದುಕೊಳ್ಳಲಾಗುತ್ತಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.