News13 ವಾಟ್ಸ್ಯಾಪ್‌ ಗ್ರೂಪ್‌ಗೆ ಸೇರಿ


×
Home About Us Advertise With s Contact Us

ಫೆ. 8 ರಂದು ಪೆರ್ಲದ ನಾಲಂದ ಮಹಾವಿದ್ಯಾಲಯದಲ್ಲಿ ವಿಶೇಷ ಕೃಷಿ ಮೇಳ

ಕಾಸರಗೋಡು : ನಾಲಂದ ಮಹಾವಿದ್ಯಾಲಯ ಪೆರ್ಲ ಇದರ ಆಶ್ರಯದಲ್ಲಿ ಫೆಬ್ರವರಿ 8 ರಂದು ಕ್ಯಾಂಪ್ಕೋ ನಿಯಮಿತ ಮಂಗಳೂರು ಹಾಗೂ ಎಲ್ಲಾ ಸೇವಾ ಸಹಕಾರಿ ಬ್ಯಾಂಕ್ ಸಹಯೋಗದೊಂದಿಗೆ ವಿಶೇಷ ಕೃಷಿ ಮೇಳವನ್ನು ಆಯೋಜಿಸಲಾಗಿದೆ. ಗಡಿನಾಡು ಹಾಗೂ ಕರಾವಳಿಯ ಭಾಗಗಳಲ್ಲಿ ಆಯೋಜಿಸಲ್ಪಡುವ ಈ ಮೇಳಗಳು ಕೃಷಿಕರಲ್ಲಿ ಹೊಸ ಹುರುಪನ್ನು ತುಂಬಿರುವುದಿಲ್ಲದೆ ಹೊಸ ಆವಿಷ್ಕಾರಗಳಿಗೆ ನಾಂದಿಯನ್ನು ಹಾಡಿದೆ. ರೈತಬಾಂಧವರು ಒಂದೇ ಸೂರಿನಡಿ ಸೇರಿ ತಮ್ಮ ಸಮಸ್ಯೆಗಳನ್ನು ಚರ್ಚಿಸುವುದಲ್ಲದೆ ಪ್ರಾಯೋಗಿಕವಾಗಿ ಸಮಸ್ಯೆಗಳಿಗೆ ಪರಿಹಾರವನ್ನು ಕಂಡುಕೊಳ್ಳಲು ಕೃಷಿ ಮೇಳಗಳು ಸಹಕಾರಿಯಾಗುತ್ತಿರುವುದು ಸಂತಸದ ವಿಚಾರ.

ಇವತ್ತಿನ ದಿನಗಳಲ್ಲಿ ರೈತರು ತಮ್ಮ ಸಮಸ್ಯೆಗಳಿಗೆ ಇತರರನ್ನು ಅವಲಂಬಿಸದೆ ಪರಿಹಾರಗಳನ್ನು ಕಂಡುಕೊಳ್ಳುತ್ತಿರುವುದಕ್ಕೆ ಇಂತಹ ಕೃಷಿ ಮೇಲೆ ಕಲೆ ಪ್ರೇರಣೆ ಕೃಷಿ ಮೇಳಗಳಲ್ಲಿ ಕೃಷಿಕರಿಗೆ ಹೊಸತನದ ಜೊತೆಗೆ ಮುಂದುವರಿದ ತಂತ್ರಜ್ಞಾನದ ವಿಸ್ತಾರವಾದ ಮಾಹಿತಿ ಒದಗುವುದರಿಂದ ಕಡಿಮೆ ಶ್ರಮದಲ್ಲಿ ಹೆಚ್ಚು ಇಳುವರಿ ಪಡೆಯುವತ್ತ ವಾಲಿರುವುದು ಬದಲಾವಣೆಯ ಸ್ಪಷ್ಟ ಉದಾಹರಣೆಯಾಗಿದೆ. ಕೃಷಿಕರಿಗೆ ತಂತ್ರಜ್ಞಾನದ ಪರಿಚಯವೂ ಉತ್ಕೃಷ್ಟ ಹಂತದಲ್ಲಿ ದೊರೆಯುತ್ತಿರುವುದರಿಂದ ಹೆಚ್ಚಿನ ಎಲ್ಲಾ ಮಾದರಿಯ ಕೃಷಿ ಯಂತ್ರೋಪಕರಣಗಳು ಹಾಗೂ ಸಲಕರಣೆಗಳು ಕೃಷಿಕರಿಂದ ಆವಿಷ್ಕರಿಸಲ್ಪಡುತ್ತದೆ. ಇಂತಹ ತಂತ್ರಜ್ಞಾನವನ್ನು ಕೃಷಿಕರಿಗೆ ತಲುಪಿಸಿ ತಮ್ಮ ಆವಿಷ್ಕಾರಗಳಿಗೆ ಹಾಗೂ ಪ್ರದರ್ಶನಕ್ಕೆ ಉತ್ತಮ ವೇದಿಕೆಯನ್ನು ಒದಗಿಸಿಕೊಡುವ ಪ್ರತಿಷ್ಠಿತ ಸಂಸ್ಥೆಗಳಾದ ಕ್ಯಾಂಪ್ಕೋ ನಿಯಮಿತ ಮಂಗಳೂರು ಹಾಗೂ ವಿವೇಕಾನಂದ ವಿದ್ಯಾವರ್ಧಕ ಸಂಘದ ಕಾರ್ಯವು ಅತ್ಯಂತ ಶ್ಲಾಘನೀಯ.

ಪ್ರಸ್ತುತ ಕೃಷಿ ಮೇಳವು ಕರಾವಳಿ ಭಾಗದ ಕಾಸರಗೋಡು ಹಾಗೂ ಮಂಜೇಶ್ವರ ತಾಲೂಕಿನ ಕೃಷಿಕರು ಹಾಗೂ ಕೃಷಿ ಕಾರ್ಮಿಕರಿಗೆ ಉಪಯೋಗವಾಗುವಂತಹ ಕೃಷಿ ಸಂಬಂಧಿತ ಯಂತ್ರೋಪಕರಣಗಳಾದ ಅಡಿಕೆ ಸುಲಿಯುವ ಯಂತ್ರಗಳು, ಔಷಧ ಸಿಂಪಡನೆ ಯಂತ್ರಗಳು, ಮರ ಹತ್ತುವ ಯಂತ್ರಗಳು, ಕೃಷಿ ಸಲಕರಣೆಗಳು, ಗೋ ಉತ್ಪನ್ನಗಳು, ನರ್ಸರಿ ಗಿಡಗಳು, ವಿವಿಧ ಬಗೆಯ ಕೃಷಿ ಸಂಬಂಧಿತ ಗ್ರಂಥಭಂಡಾರ, ಆಯುರ್ವೇದ ಉತ್ಪನ್ನಗಳು, ನವೀನ ಮಾದರಿಯ ಬಯೋಗ್ಯಾಸ್ ಘಟಕದ ಪ್ರಾತ್ಯಕ್ಷತೆ, ಸಾವಯವ ರಸಗೊಬ್ಬರಗಳು, ರಬ್ಬರ್ ಸಂಬಂಧಿತ ಸಲಕರಣೆಗಳು, ಯಂತ್ರೋಪಕರಣಗಳು, ನೀರಾವರಿ ಸಂಬಂಧಿತ ಯಂತ್ರೋಪಕರಣಗಳು, ವಿವಿಧ ತಳಿಯ ತರಕಾರಿ ಬೀಜಗಳು, ಸರಳ ಮಳೆಕೊಯ್ಲು ವಿಧಾನದ ಪ್ರಾತ್ಯಕ್ಷಿಕೆ, ಪರಿಸರಸ್ನೇಹಿ ಇಟ್ಟಿಗೆಗಳು, ಕಾಡು ಪ್ರಾಣಿಗಳ ಹಾವಳಿಯನ್ನು ತಡೆಗಟ್ಟುವ ವಿಧಾನದ ಪ್ರಾತ್ಯಕ್ಷಿಕೆ, ಕಾಡ್ ಉತ್ಪನ್ನಗಳು, ಸಾವಯವ ಉತ್ಪನ್ನಗಳು, ಹಳೆಯ ಉಪಉತ್ಪನ್ನಗಳು, ಸರಳ ಗೃಹೋಪಯೋಗಿ ವಸ್ತುಗಳು, ಹೈನುಗಾರಿಕಾ ಯಂತ್ರೋಪಕರಣಗಳು, ಅಲ್ಲದೆ ಇತರ ಗೃಹಪಯೋಗಿ ವಸ್ತುಗಳು ಪ್ರದರ್ಶನ ಹಾಗೂ ಮಾರಾಟ ವ್ಯವಸ್ಥೆಯನ್ನು ನಾಲಂದ ಮಹಾವಿದ್ಯಾಲಯ ಪೆರ್ಲ ಇದರ ಆವರಣದಲ್ಲಿ ಆಯೋಜಿಸಲಾಗಿದೆ.

ಕೃಷಿಕರ ಸೃಜನಾತ್ಮಕ ಆಲೋಚನೆಗಳನ್ನು ಸಮಾಜಕ್ಕೆ ತಲುಪಿಸುವ ಗುರಿಯನ್ನು ಹೊಂದಿರುವ ಈ ಕೃಷಿ ಮೇಳದಲ್ಲಿ ಸಂವಾದದ ಮುಖಾಂತರ ಕೃಷಿಕರು ತಮ್ಮ ಸಮಸ್ಯೆಗಳನ್ನು ಪ್ರಸ್ತುತ ಪಡಿಸಿ ಪರಿಹಾರವನ್ನು ಕಂಡುಕೊಳ್ಳುವ ನಿಟ್ಟಿನಲ್ಲಿ ಅಡಿಕೆ ಕೃಷಿಯಲ್ಲಿ ಆಧುನಿಕತೆ, ಕೊಕ್ಕೊ ಕೃಷಿ ಸವಾಲುಗಳು ಹಾಗೂ ಕೈತೋಟ ಕೃಷಿಯಲ್ಲಿ ಮಹಿಳೆಯರ ಪಾತ್ರ ಎಂಬ ವಿಷಯಗಳಲ್ಲಿ ವಿವಿಧ ಸಂಪನ್ಮೂಲ ವ್ಯಕ್ತಿಗಳ ಮುಖಾಂತರ ಕೃಷಿ ವಿಚಾರ ಗೋಷ್ಠಿಗಳನ್ನು ಹಮ್ಮಿಕೊಳ್ಳಲಾಗಿದೆ.

ಸದ್ರಿ ಕೃಷಿಮೇಳಕ್ಕೆ ಸಹಕಾರಿ ಸಂಸ್ಥೆಗಳು ಕೈಜೋಡಿಸಿರುವುದು ಕೃಷಿಯ ಭವಿಷ್ಯವನ್ನು ಬಿಂಬಿಸುತ್ತದೆ. ಕಾಸರಗೋಡು ಜಿಲ್ಲೆಯ ಪ್ರತಿಷ್ಠಿತ ಸಹಕಾರಿ ಸಂಸ್ಥೆಗಳಾದ ಬಾಯಾರು ಸೇವಾ ಸಹಕಾರಿ ಬ್ಯಾಂಕ್ ನಿಯಮಿತ, ಕುಂಬದಾಜೆ ಸೇವಾ ಸಹಕಾರಿ ಬ್ಯಾಂಕ್ ನಿಯಮಿತ, ಕಾಸರಗೋಡು ಸೇವಾ ಸಹಕಾರಿ ಬ್ಯಾಂಕ್ ನಿಯಮಿತ, ಎಡನಾಡು -ಕಣ್ಣೂರು ಸೇವಾ ಸಹಕಾರಿ ಬ್ಯಾಂಕ್, ಪೆರ್ಲ ಸೇವಾ ಸಹಕಾರಿ ಬ್ಯಾಂಕ್ ನಿಯಮಿತ, ಬೆಳ್ಳೂರು ಸೇವಾ ಸಹಕಾರಿ ಬ್ಯಾಂಕ್ ನಿಯಮಿತ, ಪೆರಡಾಲ ಸೇವಾ ಸಹಕಾರಿ ಬ್ಯಾಂಕ್ ನಿಯಮಿತ ಹಾಗೂ ಮಧೂರ್ ಸೇವಾ ಸಹಕಾರಿ ಬ್ಯಾಂಕ್ ನಿಯಮಿತ ಸಂಸ್ಥೆಗಳು ಪ್ರಸ್ತುತ ಕೃಷಿಮೇಳಕ್ಕೆ ತಮ್ಮ ಸಹಕಾರವನ್ನು ಒದಗಿಸುತ್ತಿವೆ.

ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.

News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.

Recent News

Back To Top