ನವದೆಹಲಿ: ಗಾಯಕ ಅದ್ನಾನಿ ಸಾಮಿಗೆ ಪದ್ಮಶ್ರೀ ಪುರಸ್ಕಾರ ನೀಡಿದ್ದಕ್ಕೆ ಟೀಕಾಸ್ತ್ರ ಪ್ರಯೋಗಿಸುತ್ತಿರುವ ಕಾಂಗ್ರೆಸ್ ಪಕ್ಷಕ್ಕೆ ಬಿಜೆಪಿ ಮಾಸ್ಟರ್ ಸ್ಟ್ರೋಕ್ ನೀಡಿದೆ. ಸೋನಿಯಾ ಗಾಂಧಿ ಅವರ ತಂದೆ ಹಿಟ್ಲರ್ಗೆ ಸಂಬಂಧಿಸಿದವರು ಎಂದಿದೆ.
“ನಿಮಗೆ ಗೊತ್ತೆ? ಸೋನಿಯಾ ಗಾಂಧಿ ಅವರ ತಂದೆ ಹಿಟ್ಲರಿಗೆ ಸಂಬಂಧಿಸಿದವರು. ಆದರೆ ಆಕೆಯನ್ನು ಭಾರತೀಯಳನ್ನಾಗಿ ಮಾಡಿದಾಗ ಕಾಂಗ್ರೆಸ್ ಆಕೆಯ ತಂದೆಯನ್ನು ಆಕೆಯಿಂದ ಪ್ರತ್ಯೇಕಿಸುವ ಕಾರ್ಯ ಮಾಡಿತ್ತು. ಕುತೂಹಲಕಾರಿ ವಿಷಯವೆಂದರೆ, ಇವತ್ತು ಅವರು ಅದ್ನಾನ್ ಸಾಮಿಯನ್ನು ಅವರ ತಂದೆಯೊಂದಿಗೆ ಜೋಡಿಸುತ್ತಿದ್ದಾರೆ” ಎಂದು ಬಿಜೆಪಿ ವಕ್ತಾರ ಸಂಬಿತ್ ಪಾತ್ರ ಹೇಳಿದ್ದಾರೆ.
ಕೆಲವು ಬುದ್ಧಿಜೀವಿಗಳು ಸಂಸತ್ತು ದಾಳಿಕೋರ ಅಫ್ಜಲ್ ಗುರುವಿನಿಂದ ಆತನ ಮಗನನ್ನು ಪ್ರತ್ಯೇಕಿಸುವ ಕಾರ್ಯ ಮಾಡುತ್ತಿದ್ದಾರೆ, ಆದರೆ ಅದ್ನಾನ್ ಸಾಮಿ ಮತ್ತು ಆತನ ತಂದೆಗೆ ಲಿಂಕ್ ಮಾಡುತ್ತಿದ್ದಾರೆ ಎಂದಿದ್ದಾರೆ.
ಅದ್ನಾನ್ ಸಾಮಿಗೆ ಪದ್ಮಶ್ರೀ ಯಾಕೆ ನೀಡಿದಿರಿ, ಆತ ಪಾಕಿಸ್ಥಾನ ವಾಯುಸೇನೆಯ ಅಧಿಕಾರಿಯ ಮಗ ಎಂದು ಕಾಂಗ್ರೆಸ್ ಪ್ರಶ್ನಿಸಿತು. ಇದಕ್ಕೆ ಬಿಜೆಪಿ ಸೋನಿಯಾ ಗಾಂಧಿ ಮತ್ತು ಅವರ ತಂದೆಯ ಉದಾಹರಣೆಯನ್ನು ನೀಡಿದೆ.
ಸೋನಿಯಾ ಅವರ ತಂದೆ ಎರಡನೇ ಮಹಾಯುದ್ಧದಲ್ಲಿ ಈಸ್ಟರ್ನ್ ಫ್ರಾಂಟಿನಲ್ಲಿ ಹಿಟ್ಲರನ ವೆಹ್ರ್ಮಚ್ಟ್ ಪರವಾಗಿ ಸೋವಿಯತ್ ಮಿಲಿಟರಿಯ ವಿರುದ್ಧ ಹೋರಾಡಿದ್ದರು, ಬೆನಿಟೊ ಮುಸೊಲಿನಿ ಮತ್ತು ಇಟಲಿಯ ನ್ಯಾಷನಲ್ ಫ್ಯಾಸಿಸ್ಟ್ ಪಾರ್ಟಿಯ ನಿಷ್ಠಾವಂತ ಬೆಂಬಲಿಗರಾಗಿದ್ದರು ಎಂಬ ಮಾಹಿತಿ ವಿಕಿಪೀಡಿಯಾದಲ್ಲೂ ಲಭ್ಯವಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.