ನವದೆಹಲಿ: ಗಣರಾಜ್ಯೋತ್ಸವದಂದು ಭಾರತೀಯ ಸೇನೆಯ ಪ್ಯಾರಾಚೂಟ್ ರೆಜಿಮೆಂಟ್ ವಿಶೇಷ ಪಡೆಗಳ ಮೆರವಣಿಗೆಗೆ ಮೇಜರ್ ನಿಖಿಲ್ ಮೌರ್ಯ ಮತ್ತು ಮೇಜರ್ ತರುಣ್ ರಥೀ ನೇತೃತ್ವವನ್ನು ವಹಿಸಲಿದ್ದಾರೆ.
ಈ ಬಗ್ಗೆ ಮಾತನಾಡಿದ ಮೇಜರ್ ನಿಖಿಲ್ ಮೌರ್ಯ, “ಜೋಶ್ ಯಾವಾಗಲೂ ಹೈ ಅಲ್ಲೇ ಇರುತ್ತದೆ. ನಾವು ಈ ಹಿಂದೆ 2016 ರಲ್ಲಿ ಕೂಡ ಭಾಗವಹಿಸಿದ್ದೆವು. ನಮ್ಮ ಯಾವಾಗಲೂ ಉತ್ಸಾಹ ಯಾವಾಗಲೂ ಹೆಚ್ಚಿರುತ್ತದೆ” ಎಂದು ಹೇಳಿದ್ದಾರೆ.
“ಇದು ತುಂಬಾ ಘನತೆಯ ಕಾರ್ಯವಾಗಿದೆ ಮತ್ತು ನಾನು ಈ ಬಗ್ಗೆ ತುಂಬಾ ಸಂತೋಷವಾಗಿದ್ದೇನೆ. ಇದು ನನ್ನ ಕುಟುಂಬಕ್ಕೆ ಹೆಮ್ಮೆಯ ಕ್ಷಣವಾಗಿದೆ ಮತ್ತು ನನ್ನ ಘಟಕಕ್ಕೆ ಹೆಮ್ಮೆಯ ಕ್ಷಣವಾಗಿದೆ. ಪ್ಯಾರಾಚೂಟ್ ರೆಜಿಮೆಂಟ್ ದಳವನ್ನು ಮುನ್ನಡೆಸುವುದು ನನಗೆ ಸಿಕ್ಕ ಒಂದು ಭಾಗ್ಯವಾಗಿದೆ” ಎಂದಿದ್ದಾರೆ.
ಮೇಜರ್ ಮೌರ್ಯ ಲಕ್ನೋದವರು, 11 ಪ್ಯಾರಾ ವಿಶೇಷ ಪಡೆಗಳಿಗೆ ಸೇರಿದವರು. 2010 ರಲ್ಲಿ ನಿಯೋಜಿತರಾದ ಅವರು ಅಂದಿನಿಂದ ಘಟಕದಲ್ಲಿ ಸೇವೆ ಸಲ್ಲಿಸುತ್ತಿದ್ದಾರೆ.
ಮೇಜರ್ ರಥಿ ಹರಿಯಾಣಕ್ಕೆ ಸೇರಿದವರು. ರಾಜ್ಪಾತ್ನಲ್ಲಿ ಮೆರವಣಿಗೆಯಲ್ಲಿ ಅವರು ಭಾಗವಹಿಸುತ್ತಿರುವುದು ಇದೇ ಮೊದಲು.
“ಇದು ನನಗೆ ಮತ್ತು ನನ್ನ ಕುಟುಂಬಕ್ಕೆ ಹೆಮ್ಮೆಯ ಕ್ಷಣವಾಗಿದೆ. ಸೇನಾ ದಿನದಿಂದಲೇ ಶುಭಾಶಯಗಳು ಬರಲಾರಂಭಿಸಿದವು ಮತ್ತು ಎಲ್ಲಾ ಶುಭಾಶಯಗಳು ನನ್ನೊಂದಿಗಿದೆ. ಎಲ್ಲಾ ಸಂಬಂಧಿಕರು ಮತ್ತು ಸ್ನೇಹಿತರು ನನ್ನನ್ನು ಹಾರೈಸುತ್ತಿದ್ದಾರೆ” ಎಂದು ರಥಿ ಹೇಳಿದ್ದಾರೆ.
ರೆಜಿಮೆಂಟ್ನ ಪ್ರೇರಣೆಯ ಬಗ್ಗೆ ಮಾತನಾಡಿದ ಮೇಜರ್ ರಥಿ, “ಪ್ಯಾರಚೂಟ್ ರೆಜಿಮೆಂಟ್ನಲ್ಲಿನಲ್ಲಿನ ಸೈನಿಕರನ್ನು ಪ್ರೇರೇಪಿಸುವ ಅಗತ್ಯವಿಲ್ಲ, ಏಕೆಂದರೆ ಪ್ರೇರೇಪಿತ ಸೈನಿಕರು ಮಾತ್ರ ಇಲೈಟ್ ಪ್ಯಾರಚೂಟ್ ರೆಜಿಮೆಂಟ್ಗೆ ಸೇರುತ್ತಾರೆ. ನಾವು ಇದನ್ನು ಹೆಲ್ ಮಾರ್ಚ್ ಎಂದು ಕರೆಯುತ್ತೇವೆ. 10 ಕಿ.ಮೀವರೆಗೆ ಇದನ್ನು ನಡೆಸಬೇಕಾಗಿರುವುದರಿಂದ ದೈಹಿಕವಾಗಿ ತುಂಬಾ ಕಠಿಣವಾಗಿರಬೇಕಾಗುತ್ತದೆ” ಎಂದಿದ್ದಾರೆ.
ಈ ವರ್ಷದ ಗಣರಾಜ್ಯೋತ್ಸವದ ಮೆರವಣಿಗೆಯಲ್ಲಿ, ಮೊದಲ ಬಾರಿಗೆ ಪ್ರಧಾನಿ ನರೇಂದ್ರ ಮೋದಿ ಅವರು ಮೆರವಣಿಗೆಗೂ ಮುನ್ನ ರಾಷ್ಟ್ರೀಯ ಯುದ್ಧ ಸ್ಮಾರಕಕ್ಕೆ ಮಾಲಾರ್ಪಣೆ ಮಾಡಲಿದ್ದಾರೆ.
ರಕ್ಷಣಾ ಪಡೆಗಳ ಮುಖ್ಯಸ್ಥ ಜನರಲ್ ಬಿಪಿನ್ ರಾವತ್ ಗಣರಾಜ್ಯೋತ್ಸವದ ಮೆರವಣಿಗೆಯಲ್ಲಿ ಪಾಲ್ಗೊಳ್ಳಲಿದ್ದಾರೆ ಮತ್ತು ಮೂವರು ರಕ್ಷಣಾ ಮುಖ್ಯಸ್ಥರೊಂದಿಗೆ ಪ್ರಧಾನಿಯನ್ನು ಸ್ವಾಗತಿಸಲಿದ್ದಾರೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.