ಪ್ಲಾಸ್ಟಿಕ್ ಸಮಸ್ಯೆಯನ್ನು ಹೋಗಲಾಡಿಸುವುದು ಪ್ರಸ್ತುತ ಜಗತ್ತಿನ ಮುಂದೆ ಇರುವ ಅತೀದೊಡ್ಡ ಸವಾಲಾಗಿದೆ. ನಮ್ಮ ಭೂಮಿಯನ್ನು ಸಂರಕ್ಷಣೆ ಮಾಡುವುದಕ್ಕಾಗಿ ಪ್ಲಾಸ್ಟಿಕ್ಗೆ ಪರಿಸರ ಸ್ನೇಹಿ ಪರ್ಯಾಯವನ್ನು ಹುಡುಕುವುದು ಅತೀ ಮುಖ್ಯವಾಗಿದೆ.
ನಾವು ಯಥೇಚ್ಛವಾಗಿ ಬಳಕೆ ಮಾಡವ ಪ್ಲಾಸ್ಟಿಕ್ ವಸ್ತು ಎಂದರೆ ಸ್ಟ್ರಾ. ಸುಮಾರು 8.3 ಬಿಲಿಯನ್ ಸ್ಟ್ರಾಗಳು ಜಗತ್ತಿನ ಬೀಚ್ಗಳನ್ನು ಮಲಿನಗೊಳಿಸುತ್ತಿವೆ. ಅಮೆರಿಕಾದಲ್ಲಿ ಸುಮಾರು 500 ಮಿಲಿಯನ್ ಸ್ಟ್ರಾಗಳನ್ನು ಪ್ರತಿದಿನ ಬಳಕೆ ಮಾಡಲಾಗುತ್ತದೆ.
ಇಷ್ಟೊಂದು ಪ್ರಮಾಣದಲ್ಲಿ ಬಳಕೆ ಮಾಡುವ ಸ್ಟ್ರಾಗಳಿಗೆ ಪರಿಸರಸ್ನೇಹಿ ಪರ್ಯಾಯ ಕಂಡು ಹಿಡಿಯುವುದು ಅತೀ ಮುಖ್ಯವಾಗಿದೆ. ಸ್ಟ್ರಾ ಇಲ್ಲದೆ ಪಾನೀಯ ಕುಡಿಯುವುದು ಹಲವರಿಗೆ ಹಿತವೆನಿಸುವುದಿಲ್ಲ, ಹೀಗಾಗಿ ಪರ್ಯಾಯ ಬೇಕೇ ಬೇಕಾಗುತ್ತದೆ. ಕೆಲವರು ದಪ್ಪ ಕಾಗದದಿಂದ ಸ್ಟ್ರಾಗಳನ್ನು ರಚನೆ ಮಾಡಿ ಅದನ್ನು ಬಳಸುತ್ತಿದ್ದಾರೆ. ಇದು ಭಾಗಶಃ ಯಶಸ್ಸಾಗಿದೆ. ಆದರೆ ಕೆಲವೊಂದು ಬಾರಿ ಇದು ಅಷ್ಟಾಗಿ ವರ್ಕ್ಔಟ್ ಆಗಿಲ್ಲ. ಆದರೆ ವಿಯೆಟ್ನಾಂನ ಟ್ರಾನ್ ಮಿನ್ಹ್ ಟೀನ್ ಈ ಸಮಸ್ಯೆಗೆ ಒಂದು ಪರಹಾರವನ್ನು ಕಂಡುಹಿಡಿದಿದ್ದಾರೆ.
ಅವರು ಹುಲ್ಲಿನಿಂದ ಸ್ಟ್ರಾಗಳನ್ನು ತಯಾರಿಸಿದ್ದಾರೆ, ಇದು ಕಾಗದದ ಸ್ಟ್ರಾಗಳಿಗೆ ಉತ್ತಮ ಪರ್ಯಾಯವಾಗಿರುವುದು ಮಾತ್ರವಲ್ಲದೇ ಸಂಪೂರ್ಣವಾಗಿ ಜೈವಿಕ ವಿಘಟನೀಯವಾಗಿದೆ ಅವರು ಲೆಪಿರೋನಿಯಾ ಆರ್ಟಿಕ್ಯುಲಾಟಾ ಪ್ರಭೇದದ ಹುಲ್ಲನ್ನು ಬಳಸಿ ಸ್ಟ್ರಾ ತಯಾರಿಸಿದ್ದಾರೆ. ಈ ಹುಲ್ಲನ್ನು ಸಾಮಾನ್ಯವಾಗಿ ವಿಯೆಟ್ನಾಂನ ಮೆಕಾಂಗ್ ಡೆಲ್ಟಾ ಪ್ರದೇಶದಲ್ಲಿ ‘ಕೋ ಬ್ಯಾಂಗ್’ ಎಂದೂ ಕರೆಯುತ್ತಾರೆ.
ಈ ಸ್ಟ್ರಾಗಳು ರಾಸಾಯನಿಕ ಮುಕ್ತ ಮಾತ್ರವಲ್ಲ, ಖಾದ್ಯಕ್ಕೂ ಬಳಕೆಯಾಗುತ್ತದೆ. ವಾಸ್ತವವಾಗಿ, ಊಟದ ನಂತರ ಇದನ್ನು ಜಗಿಯುದರಿಂದ ಹಲ್ಲು ಮತ್ತು ಒಸಡುಗಳನ್ನು ಸ್ವಚ್ಛಗೊಳಿಸಲು ಸಹಾಯ ಮಾಡುತ್ತದೆ.
ಈ ಹುಲ್ಲನ್ನು ಬಳಸಿ ಅವರು ಎರಡು ಬಗೆಯ ಸ್ಟ್ರಾಗಳನ್ನು ತಯಾರಿಸಿದ್ದಾರೆ. ಒಂದು ತಾಜಾ ರೀತಿಯ ಮತ್ತು ಒಣ ರೀತಿಯ ಸ್ಟ್ರಾ. ಎರಡಕ್ಕೂ, ಹುಲ್ಲನ್ನು ಮೊದಲು ಕೊಯ್ದು ತೊಳೆದು ಸ್ಟ್ರಾ ಗಾತ್ರದ ಪೈಪ್ ತರ ಕತ್ತರಿಸಲಾಗುತ್ತದೆ, ಇದು ಸುಮಾರು 20 ಸೆಂಟಿಮೀಟರ್ ಉದ್ದವಿರುತ್ತದೆ. ನಂತರ ಅವರು ಕಬ್ಬಿಣದ ರಾಡ್ ಅನ್ನು ಬಳಸಿ ಅದಕ್ಕೆ ಆಕಾರ ಮತ್ತು ಅದರ ಒಳ ಪದರವನ್ನು ಸ್ವಚ್ಛಗೊಳಿಸುತ್ತಾರೆ. ಅಂತಿಮ ಬಾರಿ ತೊಳೆದ ಬಳಿಕ ಅದು ಬಳಕೆಗೆ ಸಿದ್ಧವಾಗುತ್ತದೆ.
ಒಣಗಿದ ಸಂದರ್ಭದಲ್ಲಿ, ಒಣಹುಲ್ಲಿನನ್ನು ಎರಡು ಮೂರು ದಿನಗಳವರೆಗೆ ಸೂರ್ಯನ ಕೆಳಗೆ ಬಿಡಲಾಗುತ್ತದೆ ಮತ್ತು ನಂತರ ಒಲೆಯಲ್ಲಿ ಬೇಯಿಸಲಾಗುತ್ತದೆ. ತಾಜಾ ಒಣಹುಲ್ಲಿನ ರೆಫ್ರಿಜರೇಟರ್ನಲ್ಲಿ ಸುಮಾರು ಎರಡು ವಾರಗಳವರೆಗೆ ಇರುತ್ತದೆ, ಆದರೆ ಒಣಗಿದ ಆರು ತಿಂಗಳವರೆಗೆ ಇರುತ್ತದೆ.
ಸ್ಟ್ರಾಗಳನ್ನು 100 ಬ್ಯಾಚ್ನಲ್ಲಿ ಮಾರಾಟ ಮಾಡಲಾಗುತ್ತದೆ. ತಾಜಾ ಸ್ಟ್ರಾಗಳ ಬೆಲೆ 600 (ಅಂದಾಜು ರೂ. 1.84 ಪೈಸೆ) ವಿಯೆಟ್ನಾಮೀಸ್ ಡಾಂಗ್ಗಳು ಆದರೆ ಒಣಗಿದವುಗಳಿಗೆ 1000 ವಿಯೆಟ್ನಾಮೀಸ್ ಡಾಂಗ್ಗಳು (ಅಂದಾಜು 3 ರೂ.) ಆಗಿದೆ.
ಭಾರತದಲ್ಲೂ ಪಪ್ಪಾಯಿ ಮರದ ಪೈಪ್ ಮಾದರಿಯ ದಂಟನ್ನು ಬಳಸಿ ಸ್ಟ್ರಾಗೆ ಪರ್ಯಾಯವಾಗಿ ಬಳಕೆ ಮಾಡಲಾಗುತ್ತಿದೆ. ತಮಿಳುನಾಡಿನಲ್ಲಿ ವ್ಯಾಪಾರಿಯೊಬ್ಬರು ಈ ಮಾದರಿಯನ್ನು ಅನುಸರಿಸಿ ಎಲ್ಲರ ಮೆಚ್ಚುಗೆಗೆ ಪಾತ್ರರಾಗಿದ್ದಾರೆ ಎಂಬುದನ್ನು ಇಲ್ಲಿ ಸ್ಮರಿಸಬಹುದು.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.