ಶ್ರೀನಗರ: ಜಮ್ಮು ಮತ್ತು ಕಾಶ್ಮೀರದಿಂದ ಕಾಶ್ಮೀರಿ ಪಂಡಿತರು ಸಾಮೂಹಿಕವಾಗಿ ವಲಸೆ ಹೋದ 30 ವರ್ಷಗಳು ಸಂದ ಸಂದರ್ಭದಲ್ಲಿ, ಪಂಡಿತ ಸಮುದಾಯದ ಸದಸ್ಯರು ‘ಹಮ್ ಆಯೆಂಗೆ ಅಪ್ನಾ ವತನ್’ ಎಂಬ ಮುಂಬರುವ ‘ಶಿಖರ್’ ಚಲನಚಿತ್ರದ ಡೈಲಾಗ್ ಅನ್ನು ಬಳಸಿ ತಮ್ಮ ತಮ್ಮ ವಿಡಿಯೋಗಳನ್ನು ಸಾಮಾಜಿಕ ಜಾಲತಾಣಗಳಲ್ಲಿ ಪೋಸ್ಟ್ ಮಾಡಿದ್ದಾರೆ. ಒಂದಲ್ಲ ಒಂದು ದಿನ ನಾವು ನಮ್ಮ ತಾಯ್ನಾಡಿಗೆ ಹಿಂತಿರುಗುತ್ತೇವೆ ಎಂಬ ಭರವಸೆಯನ್ನು ವ್ಯಕ್ತಪಡಿಸಿದ್ದಾರೆ.
ಮುಸ್ಲಿಂ ಮೂಲಭೂತವಾದಿಗಳು ನಡೆಸಿದ ಜನಾಂಗೀಯ ಹತ್ಯಾಕಾಂಡದ ಹಿನ್ನಲೆಯಲ್ಲಿ ಜನವರಿ 9, 1990 ರಂದು ಐದು ಲಕ್ಷ ಕಾಶ್ಮೀರಿ ಪಂಡಿತರು ಜಮ್ಮು ಮತ್ತು ಕಾಶ್ಮೀರವನ್ನು ತೊರೆದು ದೇಶದ ನಾನಾ ಭಾಗದಲ್ಲಿ ಬಂದು ನೆಲೆಸಿದರು.
ಲೇಖಕ ರಾಹುಲ್ ಪಂಡಿತ್, ನಟ ಚಂದನ್ ಸಧು, ರೇಡಿಯೊ ಜಾಕಿ ಖಷ್ಬೂ ಮಟ್ಟು ಮತ್ತು ಬರಹಗಾರ ಅಖಿಲೇಶ್ ರೈನಾ ಸೇರಿದಂತೆ ಖ್ಯಾತ ಕಾಶ್ಮೀರಿ ಪಂಡಿತರು ವೀಡಿಯೋ ಮೂಲಕ “ತವರಿಗೆ ಮರಳುವ ಪ್ರತಿಜ್ಞೆ” ಯನ್ನು ಪೋಸ್ಟ್ ಮಾಡಿದ್ದಾರೆ.
ಈ ಸಂದರ್ಭದಲ್ಲಿ ಮಾತನಾಡಿರುವ ಬಿಜೆಪಿ ಮುಖಂಡ ಶಿವರಾಜ್ ಸಿಂಗ್ ಚೌಹಾಣ್ ಅವರು, ಕಾಶ್ಮೀರಿ ಪಂಡಿತ ಸಮುದಾಯವು ತಮ್ಮ ತಾಯ್ನಾಡಿಗೆ ಮರಳುವಂತೆ ಮಾಡಲು ಕೇಂದ್ರವು ಬದ್ಧವಾಗಿದೆ ಎಂದು ಹೇಳಿದ್ದಾರೆ.
“ನಮ್ಮ ಕಾಶ್ಮೀರಿ ಪಂಡಿತ ಸಹೋದರ ಸಹೋದರಿಯರಿಗೆ ಆಗಿರುವ ಅನ್ಯಾಯ, ಅವರ ಘನತೆಯ ಮೇಲೆ ನಡೆದ ದೌರ್ಜನ್ಯವನ್ನು ಎಂದಿಗೂ ಮರೆಯಲು ಸಾಧ್ಯವಿಲ್ಲ. ತಮ್ಮ ನೆಲದಲ್ಲಿಯೇ ನಿರಾಶ್ರಿತರಾಗಿರುವ ಅವರ ನೋವನ್ನು ನಾವು ತೊಡೆದುಹಾಕಲು ಸಾಧ್ಯವಿಲ್ಲ, ಆದರೆ ನಾವು ಕಾಶ್ಮೀರಿ ಪಂಡಿತರನ್ನು ಅವರ ತವರಿಗೆ ಹಿಂತಿರುಗುವಂತೆ ಮಾಡಬಹುದು, ಇದು ನಮ್ಮ ಸರ್ಕಾರದ ಭರವಸೆಯಾಗಿದೆ ಮತ್ತು ಅದು ಈಡೇರಲಿದೆ” ಎಂದು ಚೌಹಾನ್ ಅವರು ಟ್ವೀಟ್ ಮಾಡಿದ್ದಾರೆ.
As Kashmiri Pandits complete 30 years in exile this weekend, let our cry for justice be finally noticed. We have shown unimaginable resilience,
and today we resolve to return home.[Kashmiri Pandit friends: please record this video statement and put it up with #HumWapasAayenge pic.twitter.com/rUHTDlXLMZ
— Chandan Sadhu (@chandansadhu) January 17, 2020
Said this in a BBC interview three years back. And I am saying it again #HumWapasAayenge#Shikara pic.twitter.com/6lGveHjMmn
— Khushboo Mattoo (@MattLaemon) January 17, 2020
30 years of exile from Kashmir. Let us now pledge that we will return home.
[Kashmiri Pandit friends: please record this video statement and put it up with #HumWapasAayenge ] pic.twitter.com/d0PBXx7QRU
— Rahul Pandita (@rahulpandita) January 17, 2020
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.