ಜನವರಿ 15 ರಂದು, ಮಧ್ಯಪ್ರದೇಶದ ಕಾಂಗ್ರೆಸ್ ಸರ್ಕಾರವು ರತ್ನಂ ಜಿಲ್ಲೆಯ ಸರ್ಕಾರಿ ಪ್ರೌಢ ಶಾಲೆಯೊಂದರ ಪ್ರಾಂಶುಪಾಲರು ವೀರ ಸಾವರ್ಕರ್ ಚಿತ್ರ ಹೊಂದಿದ್ದ ನೋಟು ಪುಸ್ತಕವನ್ನು ಮಕ್ಕಳಿಗೆ ಹಂಚಿದರು ಎಂಬ ಕಾರಣಕ್ಕೆ ಅವರನ್ನು ಅಮಾನತುಗೊಳಿಸಿತು. ಕಳೆದ ಕೆಲವು ತಿಂಗಳುಗಳಿಂದ ವೀರ ಸಾವರ್ಕರ್ ಅವರ ವ್ಯಕ್ತಿತ್ವದ ವಿರುದ್ಧ ಕಾಂಗ್ರೆಸ್ ನೇತೃತ್ವದ ರಾಜ್ಯ ಸರ್ಕಾರ ತೀವ್ರ ಅಸಹಿಷ್ಣುತೆಯನ್ನು ತೋರಿಸುತ್ತಿದೆ.
ಕೆಲವೇ ದಿನಗಳ ಹಿಂದೆ, ಮುಂಬಯಿ ವಿಶ್ವವಿದ್ಯಾನಿಲಯದ ಪ್ರಾಧ್ಯಾಪಕರೊಬ್ಬರನ್ನು ರಾಹುಲ್ ವಿರುದ್ಧ ಮಾತನಾಡಿದ್ದಕ್ಕಾಗಿ ಅಮಾನತುಗೊಳಿಸಲಾಗಿದೆ. “ನೀವು ಹೇಳಿದ್ದು ಸರಿ, ನೀವು ಸಾವರ್ಕರ್ ಅಲ್ಲ. ನಿಮ್ಮಲ್ಲಿ ಅವರ ವ್ಯಕ್ತಿತ್ವದ ಒಂದಂಶವೂ ಇಲ್ಲ, ಅವರ ಸಮರ್ಪಣೆ, ಅವರ ತ್ಯಾಗ, ಅವರ ಶೌರ್ಯ ಯಾವುದೂ ಇಲ್ಲ. ಗಾಂಧಿ ಎಂದು ಕರೆಸಿಕೊಳ್ಳಲೂ ನಿಮಗೆ ಏನೂ ಅರ್ಹತೆ ಇಲ್ಲ. ನಿಮ್ಮ ಪಪ್ಪುಗಿರಿಯನ್ನು ನಾನು ಖಂಡಿಸುತ್ತೇನೆ” ಎಂದು ಪ್ರಾಧ್ಯಾಪಕರು ಹೇಳಿದ್ದರು. ಇದಕ್ಕಾಗಿ ಅವರನ್ನು ಅಮಾನತು ಮಾಡಲಾಗಿತ್ತು.
ಸಾವರ್ಕರ್ ದೇಶದಲ್ಲಿ, ವಿಶೇಷವಾಗಿ ಮಹಾರಾಷ್ಟ್ರ ಮತ್ತು ಮಧ್ಯಪ್ರದೇಶದಂತಹ ರಾಜ್ಯಗಳಲ್ಲಿ ಸಾರ್ವಜನಿಕ ಮೇರು ವ್ಯಕ್ತಿತ್ವವಾಗಿದ್ದಾರೆ. ಮಹಾರಾಷ್ಟ್ರದಲ್ಲಿ, ಎನ್ಸಿಪಿ ಸಹ ಸಾವರ್ಕರ್ ಅವರನ್ನು ಪೂಜಿಸುತ್ತದೆ, ಸ್ವಾತಂತ್ರ್ಯ ಹೋರಾಟಗಾರನ ಪರವಾದ ಭಾವನೆಯನ್ನು ಅದು ಹೊಂದಿದೆ.
ಸಾವರ್ಕರ್ ಯಾವಾಗಲೂ ನಾಯಕ, ಸ್ವಾತಂತ್ರ್ಯ ಹೋರಾಟಗಾರ ಮತ್ತು ಸಾರ್ವಜನಿಕ ಜಾನಪದದ ರಾಷ್ಟ್ರೀಯವಾದಿ ಕವಿಯಾಗಿದ್ದಾರೆ. ಆದರೆ, ಕಾಂಗ್ರೆಸ್ ಸರ್ಕಾರಗಳು-ರಾಜ್ಯದಲ್ಲಿ ಮತ್ತು ಕೇಂದ್ರದಲ್ಲಿ ಸಾವರ್ಕರ್ ಆಚರಣೆಯ ಅವಕಾಶಗಳನ್ನು ತಪ್ಪಿಸಿದವು.
ದೇಶದ ಜನಸಾಮಾನ್ಯರಿಗೆ ವೀರನಾಗಿರುವ ಸಾವರ್ಕರ್ ಅವರಿಗೆ ಬಿಜೆಪಿ ಅಧಿಕಾರಕ್ಕೆ ಬಂದಾಗಿನಿಂದ ಅಧಿಕೃತ ಮಾನ್ಯತೆ ಸಿಕ್ಕಿದೆ. ಸಾವರ್ಕರ್ ಅವರ ಎರಡು ಜೀವನಚರಿತ್ರೆಗಳನ್ನು ವಿಕ್ರಮ್ ಸಂಪತ್ ಮತ್ತು ವೈಭವ್ ಪುರಂದರೆ ಅವರು ಒಂದು ವರ್ಷಕ್ಕಿಂತ ಕಡಿಮೆ ಅಂತರದಲ್ಲಿ ಪ್ರಕಟಿಸಿದ್ದಾರೆ. ಇದಕ್ಕಾಗಿ ಅವರುಗಳು ಮೆಚ್ಚುಗೆಯನ್ನೂ ಗಳಿಸಿದ್ದಾರೆ ಮತ್ತು ರಾಜಕೀಯದ ವಿವಿಧ ಕಡೆಯ ವಿಮರ್ಶಕರಿಂದಲೂ ಉತ್ತಮ ಪ್ರತಿಕ್ರಿಯೆ ಪಡೆದುಕೊಂಡಿದ್ದಾರೆ.
ಜನಮಾನಸದಲ್ಲಿ ವೀರನಾಗಿರುವ ಸಾವರ್ಕರ್ ಅವರ ಶೌರ್ಯವು ಇಲ್ಲಿಯವರೆಗೆ ಬೌದ್ಧಿಕ ಬೆಂಬಲವನ್ನು ಪಡೆದುಕೊಂಡಿಲ್ಲ, ಆದರೆ ಹೆಚ್ಚುತ್ತಿರುವ ವಿದ್ವತ್ಪೂರ್ಣ ಕೆಲಸವು ಹಿಂದೂ ಐಕಾನ್ ಆಗಿರುವ ಅವರ ವ್ಯಕ್ತಿತ್ವವನ್ನು ಸಾರುವ ಕಾರ್ಯವನ್ನು ಮಾಡುತ್ತಿದೆ.
ದೇಶದ ಬೌದ್ಧಿಕ ವರ್ಗ, ಮಾಧ್ಯಮ ವ್ಯಕ್ತಿಗಳು, ಬರಹಗಾರರು, ಶಿಕ್ಷಕರು, ಪ್ರಾಧ್ಯಾಪಕರು ಈಗ ಹಿಂದುತ್ವ ಐಕಾನ್ ಸಾವರ್ಕರ್ ಅವರನ್ನು ಗೌರವಿಸುತ್ತಿದೆ ಎಂಬ ಅಂಶವನ್ನು ಕಾಂಗ್ರೆಸ್ ಪಕ್ಷ ಇಷ್ಟಪಡುತ್ತಿಲ್ಲ. ಆದ್ದರಿಂದಲೇ, ಮಧ್ಯಪ್ರದೇಶ ಮತ್ತು ಮಹಾರಾಷ್ಟ್ರದ ಕಾಂಗ್ರೆಸ್ ಸರ್ಕಾರಗಳು ಸಾವರ್ಕರ್ ಅವರನ್ನು ಗೌರವಿಸುವವರಿಗೆ ಶಿಕ್ಷೆ ವಿಧಿಸಲು ಮುಂದಾಗುತ್ತಿದೆ.
ಇಲ್ಲಿಯವರೆಗೆ, ‘ಜಾತ್ಯತೀತ’ ಕಾಂಗ್ರೆಸ್ ಪಕ್ಷದ ವಿವಿಧ ಆಡಳಿತಗಳ ಅಡಿಯಲ್ಲಿ ಸಾವರ್ಕರ್ ಅವರ ಕೊಡುಗೆಯನ್ನು ತೀವ್ರವಾಗಿ ದುರ್ಬಲಗೊಳಿಸಲಾಯಿತು, ಕಾಂಗ್ರೆಸ್ ಹಿಂದುತ್ವದ ಐಕಾನ್ ಅನ್ನು ಇಷ್ಟಪಡಲಿಲ್ಲ ಎಂಬುದೇ ಇದಕ್ಕೆ ಕಾರಣ. ಸಾವರ್ಕರ್ ಅವರನ್ನು ಎತ್ತರದಲ್ಲಿಡುವುದು ಬಿಜೆಪಿ ಪಕ್ಷಕ್ಕೆ ಸಹಾಯ ಮಾಡುತ್ತದೆ ಎಂಬುದು ಅದರ ಆತಂಕವಾಗಿತ್ತು.
ಬ್ರಿಟಿಷ್ ಗುಲಾಮಗಿರಿಯ ಸರಪಳಿಗಳಿಂದ ಸಂಪೂರ್ಣ ಸ್ವಾತಂತ್ರ್ಯ ಮತ್ತು ವಿಮೋಚನೆಯ ಕಲ್ಪನೆಯನ್ನು ನೀಡಿದವರು ಸಾವರ್ಕರ್. ವಾಸ್ತವವಾಗಿ, ಅಸಾಂಪ್ರದಾಯಿಕ ಕವಿ / ಬರಹಗಾರ ಟ್ರೆಂಡ್ಸೆಟ್ಟರ್ ಅವರಾಗಿದ್ದರು. ಹಲವು ವಿಷಯಗಳ ಮೊದಲಿಗರಾಗಿದ್ದರು. 1857 ರ ಸ್ವಾತಂತ್ರ್ಯ ಹೋರಾಟದ ಬಗ್ಗೆ ವಿವರವಾದ ವಿವರಣೆಯನ್ನು ನೀಡಿದ ಮೊದಲ ವ್ಯಕ್ತಿ ಅವರಾಗಿದ್ದರು, ಆದರೆ ಅವರ ಪ್ರಕಟಣೆಗೆ ಹೊರಬರುವುದಕ್ಕೂ ಮುಂಚೆಯೇ ಅದನ್ನು ಬ್ರಿಟಿಷರು ನಿಷೇಧಿಸಿದರು.
ಬ್ರಿಟಿಷರ ಕೈಗೆ ಸಿಕ್ಕದೆ ಪಲಾಯನ ಮಾಡಲು ಪ್ರಯತ್ನಿಸಿದ ಮೊದಲ ರಾಜಕೀಯ ಖೈದಿಯೂ ಅವರಾಗಿದ್ದರು, ಆದರೆ ದುರದೃಷ್ಟವಶಾತ್ ಫ್ರೆಂಚ್ ನೆಲದಲ್ಲಿ ಬಂಧನಕ್ಕೊಳಗಾದರು. ಟ್ರಾನ್ಸ್ಪೋರ್ಟೇಶನ್ ಫಾರ್ ಲೈಫ್ಗೆ ಎರಡು ಬಾರಿ ಶಿಕ್ಷೆ ಅನುಭವಿಸಿದ ವಿಶ್ವದ ಮೊದಲ ರಾಜಕೀಯ ಖೈದಿಯೂ ಆಗಿದ್ದರು, ಆದರೆ ಈ ಶಿಕ್ಷೆಯನ್ನು ಅನುಭವಿಸಿದ ಎರಡನೇಯ ವ್ಯಕ್ತಿಯೂ ಯಾರಿಲ್ಲ ಎಂಬುದನ್ನು ಬ್ರಿಟಿಷ್ ಸಾಮ್ರಾಜ್ಯದ ಇತಿಹಾಸ ಹೇಳುತ್ತದೆ.
ಸಾವರ್ಕರ್ ಅವರು “ಹಿಂದುತ್ವ” ಎಂಬ ಅಪ್ರತಿಮ ಲೇಖನದ ಲೇಖಕ ಕೂಡ ಹೌದು. ಅವರು ಹಿಂದೂ ಮೌಲ್ಯಗಳ ತೀವ್ರ ಬೆಂಬಲಿಗರಾಗಿದ್ದರು ಮತ್ತು ಹಿಂದೂ ಮಹಾಸಭೆಯನ್ನು ಪ್ರತ್ಯೇಕ ರಾಜಕೀಯ ಪಕ್ಷವಾಗಿ ಸ್ಥಾಪಿಸಿದರು. ಇದಲ್ಲದೆ, ಹಿಂದೂ ಗುರುತು ಮತ್ತು ಭಾರತೀಯ ಗುರುತಿನ ನಡುವೆ ಯಾವುದೇ ವ್ಯತ್ಯಾಸವಿಲ್ಲ ಎಂಬುದು ಅವರ ದೃಢವಾದ ನಂಬಿಕೆಯಾಗಿತ್ತು.
ಸಾವರ್ಕರ್ ಅವರ ಹಿಂದೂ ರಾಷ್ಟ್ರವು ಅಖಂಡ ಭಾರತ ಆಗಿತ್ತು, ಉಪಖಂಡವನ್ನು ವ್ಯಾಪಿಸಿದ, ಹಿಂದೂಗಳನ್ನೂ ವ್ಯಾಪಿಸಿದ ಸಾಮಾನ್ಯ ಮಾತೃಭೂಮಿಯ ಮಕ್ಕಳಾಗಿ ವಾಸಿಸುವ, ಸಾಮಾನ್ಯ ಪವಿತ್ರ ಭೂಮಿಯನ್ನು ಆರಾಧಿಸುವ ಜನತೆ ಅವರ ಕನಸಾಗಿತ್ತು. ಸ್ವತಃ ನಾಸ್ತಿಕರಾಗಿದ್ದ ಸಾವರ್ಕರ್ ಅವರು ‘ಹಿಂದೂ’ ಅನ್ನು ಧಾರ್ಮಿಕ ಪದವಾಗಿ ನೋಡಲಿಲ್ಲ, ಆದರೆ ಸಾಮಾಜಿಕ-ಸಂಸ್ಕೃತಿ ವಿವರಣೆಯಾಗಿ ನೋಡಿದರು. ಎಡಪಂಥೀಯರು ಅವರ ವಿರುದ್ಧ ಸುಳ್ಳನ್ನು ಹಬ್ಬಿಸಿದ್ದಾರೆ.
ಜನಪ್ರಿಯ ಭಾವನೆ ಮತ್ತು ಅಧಿಕೃತ ಬೆಂಬಲದೊಂದಿಗೆ ಸಾವರ್ಕರ್ ಅವರು ದೇಶದ ಮೇರು ವ್ಯಕ್ತಿತ್ವವಾಗಿ ಹೊರಹೊಮ್ಮಬಹುದು ಮತ್ತು ದೇಶದ ಉದ್ದಗಲಕ್ಕೆ ಪೂಜಿಸಲ್ಪಡಬಹುದು ಎಂಬ ಬಗ್ಗೆ ಕಾಂಗ್ರೆಸ್ ಪಕ್ಷವು ಚಿಂತಿತವಾಗಿದೆ. ಅದೃಷ್ಟವಶಾತ್ ಪ್ರಧಾನಿ ನರೇಂದ್ರ ಮೋದಿಯವರ ಉದಯದೊಂದಿಗೆ ಸಾವರ್ಕರ್ ಅವರ ಸ್ಮರಣೆಯನ್ನು ಪುನರುಜ್ಜೀವನಗೊಂಡಿದೆ. ಇದು ಕಾಂಗ್ರೆಸ್ ಪಕ್ಷಕ್ಕೆ ನುಂಗಲಾರದ ತುತ್ತಾಗಿದೆ. ಇದು ಕಾಂಗ್ರೆಸ್ ಪಕ್ಷಕ್ಕೆ ಚುನಾವಣಾ ಹಾನಿಯುಂಟು ಮಾಡುವುದು ಮಾತ್ರವಲ್ಲ, ಬೌದ್ಧಿಕ ಪರಿಸರ ವ್ಯವಸ್ಥೆಯಲ್ಲಿ ಕಾಂಗ್ರೆಸ್ ಸಿದ್ಧಾಂತದ ಪ್ರಾಬಲ್ಯವನ್ನು ಕೊನೆಗೊಳಿಸುತ್ತದೆ. ಈ ಕಾರಣದಿಂದಲೇ, ಸಾವರ್ಕರ್ ಅವರನ್ನು ಬಹಿರಂಗವಾಗಿ ಬೆಂಬಲಿಸಿದ ಜನರ ಮೇಲೆ ಆ ಪಕ್ಷ ಮುಗಿ ಬೀಳುತ್ತಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.