ಸೂರತ್: ಪ್ರಧಾನಿ ನರೇಂದ್ರ ಮೋದಿಯವರ ಅಪ್ಪಟ ಅಭಿಮಾನಿಯಾಗಿರುವ ಗುಜರಾತಿನ ಸೂರತ್ನ ವಜ್ರ ಉದ್ಯಮಿಯೊಬ್ಬರು ವಜ್ರದಲ್ಲಿ ಭಾರತದ ಭೂಪಟವನ್ನು ರಚಿಸಿ ಅದರಲ್ಲಿ ಮೋದಿಯವರ ಮುಖವನ್ನು ಮೂಡಿಸಿದ್ದಾರೆ. ಉದ್ಯಮಿ ಆಕಾಶ್ ಸಲಿಯ ಅವರು ಈ ಭೂಪಟವನ್ನು ರಚಿಸಿದವರಾಗಿದ್ದಾರೆ.
ಮೂರು ಕ್ಯಾರೆಟ್ ವಜ್ರವನ್ನು ಬಳಸಿ ಭೂಪಟವನ್ನು ರಚನೆ ಮಾಡಲಾಗಿದ್ದು, ಲೇಸರ್ ಇನ್ಸ್ಕ್ರಿಪಕ್ಷನ್ ಮೂಲಕ ಮೋದಿ ಮುಖವನ್ನು ಮೂಡಿಸಲಾಗಿದೆ. ಈ ಭೂಪಟವನ್ನು ಮೋದಿಯವರಿಗೆ ಉಡುಗೊರೆ ನೀಡಲು ಆಕಾಶ್ ಬಯಸುತ್ತಿದ್ದಾರೆ.
ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ಅವರು, “14 ವರ್ಷಗಳ ಬಳಿಕ ಈ ವಜ್ರವನ್ನು ನೋಡಿದಾಗ ನನಗೆ ಭಾರತದ ಭೂಪಟವನ್ನು ಅದರಲ್ಲಿ ಮೂಡಿಸುವ ಆಶಯ ಮೂಡಿತು. ಈ ವಜ್ರದೊಂದಿಗೆ 2 ತಿಂಗಳು ನಿತ್ಯ 5 ಗಂಟೆಗಳ ಕಾಲ ನಾನು ಕೆಲಸ ಮಾಡಿ ಇದನ್ನು ಭಾರತದ ಭೂಪಟವಾಗಿ ಪರಿವರ್ತಿಸಿದ್ದೇನೆ” ಎಂದು ಹೇಳಿದ್ದಾರೆ.
ಪ್ರಧಾನಿ ಮೋದಿಯವರಿಗೆ ಈ ಭೂಪಟವನ್ನು ಉಡುಗೊರೆಯಾಗಿ ನೀಡುತ್ತೇನೆ ಎಂದಿದ್ದಾರೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.