ನವದೆಹಲಿ: ದೇಶದಾದ್ಯಂತ ಮಕರಸಂಕ್ರಮಣ ಮತ್ತು ಲೋಹ್ರಿ ಹಬ್ಬಗಳ ಸಂಭ್ರಮ ಮನೆ ಮಾಡಿದೆ. ಹಬ್ಬದ ಹಿನ್ನೆಲೆಯಲ್ಲಿ ಈಗಾಗಲೇ ಗಾಳಿಪಟಗಳ ಮಾರಾಟ ಭರ್ಜರಿಯಾಗಿ ನಡೆಯುತ್ತಿದೆ. ಅದರಲ್ಲೂ ಪ್ರಧಾನಿ ನರೇಂದ್ರ ಮೋದಿ ಮತ್ತು ಗೃಹ ಸಚಿವ ಅಮಿತ್ ಷಾ ಅವರ ಭಾವಚಿತ್ರಗಳು ಇರುವ ಗಾಳಿಪಟಗಳಿಗೆ ಎಲ್ಲಿಲ್ಲದ ಬೇಡಿಕೆ ಬಂದಿದೆ.
ಪ್ರಧಾನಿ ಮೋದಿಯವರ ವಿವಿಧ ಚಿತ್ರಗಳನ್ನು ಒಳಗೊಂಡ ಗಾಳಿಪಟಗಳು ಮಾರುಕಟ್ಟೆಯಲ್ಲಿ ಭಾರಿ ಬೇಡಿಕೆಯನ್ನು ಪಡೆಯುತ್ತಿವೆ. ಕಳೆದ ಲೋಕಸಭಾ ಚುನಾವಣೆಯಲ್ಲಿ ಬಳಸಲಾಗಿದ್ದ ಚೌಕಿದಾರ್ ಪದವನ್ನು ಕೆಲವೊಂದು ಗಾಳಿಪಟಗಳ ಮೇಲೆ ಬರೆಯಲಾಗಿದೆ. ಕೆಲವೊಂದು ಗಾಳಿಪಟಗಳಲ್ಲಿ ಅಮಿತ್ ಶಾ ಅವರು ಗೆಲುವಿನ ಸಂಕೇತ ತೋರಿಸುತ್ತಿರುವ ‘ಜೋಡಿ ನಂ. 1’ ಎಂಬ ಹೆಸರಿನ ಚಿತ್ರಗಳಿವೆ.
“ಜನರು ಹೆಚ್ಚಾಗಿ ಪ್ರಧಾನಿ ನರೇಂದ್ರ ಮೋದಿ ಮತ್ತು ಗೃಹ ಸಚಿವ ಅಮಿತ್ ಶಾ ಅವರ ಫೋಟೋಗಳು ಇರುವ ಗಾಳಿಪಟಗಳನ್ನು ಹೆಚ್ಚಾಗಿ ಖರೀದಿ ಮಾಡಲು ಬಯಸುತ್ತಾರೆ” ಎಂದು ಗಾಳಿಪಟ ಮಾರಾಟಗಾರ ಗೌರವ ಹೇಳುತ್ತಾರೆ.
ಮಾತ್ರವಲ್ಲದೆ ವಿವಿಧ ದೇಶಗಳ ರಾಷ್ಟ್ರಧ್ವಜಗಳು ಇರುವ ಗಾಳಿಪಟಗಳಿಗೂ ಹೆಚ್ಚಿನ ಬೇಡಿಕೆಯಿದೆ. ಕ್ರಿಕೆಟ್ ಆಟಗಾರರ ಚಿತ್ರಗಳು ಕೂಡ ಗಾಳಿಪಟಗಳಲ್ಲಿವೆ. ಇದಕ್ಕೂ ಭಾರೀ ಬೇಡಿಕೆ ಇದೆ.
ಜನವರಿ 15 ರಂದು ದೇಶದಲ್ಲಿ ಮಕರ ಸಂಕ್ರಾಂತಿ ಹಬ್ಬವನ್ನು ಆಚರಿಸಲಾಗುತ್ತಿದೆ. ಈ ಸಂದರ್ಭದಲ್ಲಿ ಭಕ್ತಾದಿಗಳು ತೀರ್ಥಕ್ಷೇತ್ರಗಳಲ್ಲಿ ಪವಿತ್ರಸ್ನಾನವನ್ನು ಮಾಡುತ್ತಾರೆ. ಲೋಹ್ರಿ ಹಬ್ಬವನ್ನು ಪಂಜಾಬ್ನಲ್ಲಿ ಆಚರಿಸುತ್ತಾರೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.