ನವದೆಹಲಿ: ಇರಾನಿನ ಮಿಲಿಟರಿ ಕಮಾಂಡರ್ ಖಾಸೆಮ್ ಸೊಲೈಮಾನಿ ಹತ್ಯೆಯ ನಂತರ ಅಮೆರಿಕದೊಂದಿಗೆ ತಲೆದೋರಿರುವ ಉದ್ವಿಗ್ನತೆಯನ್ನು ಕುಗ್ಗಿಸಲು ಭಾರತ ನಡೆಸುವ ಯಾವುದೇ ಶಾಂತಿ ಉಪಕ್ರಮವನ್ನು ಇರಾನ್ ಸ್ವಾಗತಿಸಲಿದೆ ಎಂದು ಇರಾನಿನ ರಾಯಭಾರಿ ದೆಹಲಿಯಲ್ಲಿ ಬುಧವಾರ ಹೇಳಿದ್ದಾರೆ.
ಭಾರತದ ಇರಾನ್ನ ರಾಯಭಾರಿ ಅಲಿ ಚೆಗೆನಿ ಅವರು, ಇರಾನ್ ಮತ್ತು ಅಮೆರಿಕದ ನಡುವಿನ ಹಗೆತನದವು ಮತ್ತಷ್ಟು ಉಲ್ಬಣಗೊಳ್ಳುವುದಿಲ್ಲ ಎಂಬ ಭರವಸೆವನ್ನು ವ್ಯಕ್ತಪಡಿಸಿದ್ದಾರೆ.
ಇರಾಕಿನಲ್ಲಿ ಬೀಡುಬಿಟ್ಟಿರುವ ಯುಎಸ್ ಮಿಲಿಟರಿ ಮತ್ತು ಸಮ್ಮಿಶ್ರ ಪಡೆಗಳ ಕನಿಷ್ಠ ಎರಡು ನೆಲೆಗಳನ್ನು ಗುರಿಯಾಗಿಸಿಕೊಂಡು ಇರಾನ್ ಒಂದು ಡಜನ್ ಬ್ಯಾಲಿಸ್ಟಿಕ್ ಕ್ಷಿಪಣಿಗಳನ್ನು ಉಡಾಯಿಸಿದ ಕೆಲವೇ ಗಂಟೆಗಳ ನಂತರ ರಾಯಭಾರಿಯು ಈ ಹೇಳಿಕೆಯನ್ನು ನೀಡಿದ್ದಾರೆ.
ಇರಾಕಿನಲ್ಲಿರುವ ಅಮೆರಿಕಾದ ನೆಲೆಗಳ ಮೇಲೆ ನಾವು ನಡೆಸಿದ ದಾಳಿಯು ಅಮೆರಿಕಾದ ಮುಖಕ್ಕೆ ನಾವು ನೀಡಿದ ಹೊಡೆತ ಎಂದು ಟೆಹ್ರಾನ್ ಹೇಳಿದೆ.
“ಭಾರತವು ಸಾಮಾನ್ಯವಾಗಿ ಜಗತ್ತಿನಲ್ಲಿ ಶಾಂತಿಯನ್ನು ಕಾಪಾಡುವಲ್ಲಿ ಉತ್ತಮ ಪಾತ್ರವನ್ನು ವಹಿಸುತ್ತದೆ. ಭಾರತ ಕೂಡ ಈ ಪ್ರದೇಶಕ್ಕೆ ಸೇರಿದೆ. ಉದ್ವಿಗ್ನತೆ ಕಡಿಮೆ ಮಾಡಲು ಅವಕಾಶ ನೀಡದಂತೆ ಎಲ್ಲಾ ದೇಶಗಳು, ವಿಶೇಷವಾಗಿ ಭಾರತವು ನಮಗೆ ಉತ್ತಮ ಸ್ನೇಹಿತನಾಗಿ ನೀಡುವ ಉಪಕ್ರಮವನ್ನು ನಾವು ಸ್ವಾಗತಿಸುತ್ತೇವೆ” ಎಂದು ದೆಹಲಿಯಲ್ಲಿರುವ ಇರಾನ್ ರಾಯಭಾರ ಕಚೇರಿಯಲ್ಲಿ ಸೊಲೈಮಾನಿ ಅವರ ಸಂತಾಪ ಸಭೆಯ ನಂತರ ಚೆಗೆನಿ ಸುದ್ದಿಗಾರರಿಗೆ ತಿಳಿಸಿದರು.
“ನಾವು ಯುದ್ಧವನ್ನಲ್ಲ, ಈ ಪ್ರದೇಶದ ಪ್ರತಿಯೊಬ್ಬರಿಗೂ ನಾವು ಶಾಂತಿ ಮತ್ತು ಸಮೃದ್ಧಿಯನ್ನು ಹುಡುಕುತ್ತಿದ್ದೇವೆ. ಈ ಜಗತ್ತಿನಲ್ಲಿ ಶಾಂತಿ ಮತ್ತು ಸಮೃದ್ಧಿಗೆ ಸಹಾಯ ಮಾಡುವ ಯಾವುದೇ ಭಾರತೀಯ ಉಪಕ್ರಮ ಅಥವಾ ಯಾವುದೇ ಯೋಜನೆಯನ್ನು ನಾವು ಸ್ವಾಗತಿಸುತ್ತೇವೆ” ಎಂದಿದ್ದಾರೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.