ನವದೆಹಲಿ: ಭಾರತದ ಹಣಕಾಸು ವಲಯಕ್ಕೆ ನಮ್ಮ ರಾಷ್ಟ್ರವನ್ನು 5 ಟ್ರಿಲಿಯನ್ ಡಾಲರ್ ಆರ್ಥಿಕತೆಯತ್ತ ಕೊಂಡೊಯ್ಯಲು ಸಹಾಯಕಾಗುವಂತೆ ಕೃತಕ ಬುದ್ಧಿಮತ್ತೆ (ಎಐ), ಯಂತ್ರ ಕಲಿಕೆ (ಮೆಶಿನ್ ಲರ್ನಿಂಗ್) ಮತ್ತು ಇತರ ತಂತ್ರಜ್ಞಾನಗಳನ್ನು ಟ್ಯಾಪ್ ಮಾಡುವ ಉದ್ದೇಶದಿಂದ ರಾಷ್ಟ್ರೀಯ ಷೇರು ವಿನಿಮಯವು (NSE) ತನ್ನ ಮೊದಲ ‘ನಾಲೆಡ್ಜ್ ಹಬ್ (ಜ್ಞಾನ ಕೇಂದ್ರ)’ ಅನ್ನು ಪ್ರಾರಂಭಿಸಿದೆ. AI ಆಧಾರಿತ ಕಲಿಕಾ ಪರಿಸರ ವ್ಯವಸ್ಥೆ ಇದಾಗಿದೆ.
ಎನ್ಎಸ್ಇ ಅಕಾಡೆಮಿ ಅಭಿವೃದ್ಧಿಪಡಿಸಿದ ಮತ್ತು ಕೇಂದ್ರ ಸಚಿವ ಪಿಯೂಷ್ ಗೋಯಲ್ ಅವರು ಪ್ರಾರಂಭಿಸಿದ ಈ ಜ್ಞಾನ ಕೇಂದ್ರವು NSEಯ ಸಂಪೂರ್ಣ ಸ್ವಾಮ್ಯದ ಅಂಗಸಂಸ್ಥೆಯಾಗಿ ಕಾರ್ಯನಿರ್ವಹಿಸುತ್ತದೆ ಮತ್ತು ಬ್ಯಾಂಕಿಂಗ್, ಹಣಕಾಸು, ಸೆಕ್ಯುರಿಟೀಸ್ ಮತ್ತು ವಿಮೆ (ಬಿಎಫ್ಎಸ್ಐ) ವಲಯದ ಉದ್ಯೋಗಿಗಳಿಗೆ ಕೌಶಲ್ಯಗಳನ್ನು ಹೆಚ್ಚಿಸಲು ಮತ್ತು ಸಿದ್ಧ ಪ್ರತಿಭೆಗಳನ್ನಾಗಿ ಅವರನ್ನು ರೂಪಿಸಲು ಸಹಾಯ ಮಾಡಲಿದೆ.
“AI (ಕೃತಕ ಬುದ್ಧಿಮತ್ತೆ)ಯು ವ್ಯಾಪಾರ ಸುಲಲಿತಗೊಳಿಸಲು, ಜೀವನ ಸುಲಲಿತಗೊಳಿಸಲು ಮತ್ತು ರೈತರಿಗೆ ಆದಾಯವನ್ನು ದ್ವಿಗುಣಗೊಳಿಸಲು ಸಹಾಯ ಮಾಡುವ ಮೂಲಕ ನಮ್ಮ ಜೀವನದಲ್ಲಿ ದೊಡ್ಡ ಸಾಮರ್ಥ್ಯವನ್ನು ಹೊಂದಿದೆ. AI ಅಥವಾ ಯಂತ್ರ ಕಲಿಕೆಯನ್ನು ಬಳಸಲಾಗದ ಯಾವುದೇ ವಲಯವನ್ನು ನೋಡಲು ನಮಗೆ ಸಾಧ್ಯವಿಲ್ಲ. ಅಪರಾಧ ಪತ್ತೆ, ಉತ್ತಮ ಗಡಿ ನಿಯಂತ್ರಣ ಮತ್ತು ಅಂತರರಾಷ್ಟ್ರೀಯ ವ್ಯಾಪಾರ – ಈ ಪ್ರತಿಯೊಂದು ಕ್ಷೇತ್ರಗಳಲ್ಲಿ ತೊಡಗಿಸಿಕೊಳ್ಳಲು ಎಐಗೆ ದೊಡ್ಡ ಅವಕಾಶವಿದೆ. ಎಐ ಅನ್ನು ಭಾರತದಲ್ಲಿ ಆರ್ಥಿಕ ಚಟುವಟಿಕೆ ಮತ್ತು ಸಾಮಾಜಿಕ ಒಳಿತಿಗಾಗಿ ಬಳಸಬಹುದು ”ಎಂದು ಸಚಿವ ಪಿಯೂಶ್ ಗೋಯಲ್ ಹೇಳಿದ್ದಾರೆ.
ಜ್ಞಾನ ಕೇಂದ್ರಕ್ಕೆ ಚಾಲನೆ ನೀಡಿದ ಗೋಯಲ್, ಭಾರತವು ಬಿಪಿಓಗಳನ್ನು ಮೀರಿ ಸುಧಾರಿತ ಮತ್ತು ಆಧುನಿಕ ತಂತ್ರಜ್ಞಾನಗಳು ಮತ್ತು ಸಾಧನಗಳಲ್ಲಿ ತೊಡಗಿಸಿಕೊಳ್ಳುವುದದು ಅಭಿವೃದ್ಧಿ ಮಹತ್ವದ್ದಾಗಿದೆ ಎಂದು ಪ್ರತಿಪಾದಿಸಿದರು. ಎಐ ವಹಿವಾಟಿಗಾಗಿ ಭಾರತೀಯ ರೈಲ್ವೆ ಸೇರಿದಂತೆ ವಿಶ್ವವಿದ್ಯಾಲಯಗಳು ಮತ್ತು ಸಂಸ್ಥೆಗಳೊಂದಿಗೆ ಪಾಲುದಾರಿಕೆ ಮಾಡಬೇಕೆಂದು ಅವರು ಎನ್ಎಸ್ಇಯನ್ನು ಒತ್ತಾಯಿಸಿದರು. ರೈಲ್ವೆ ಈಗಾಗಲೇ ಎಐಯನ್ನು ದೊಡ್ಡ ರೀತಿಯಲ್ಲಿ ನೋಡುತ್ತಿದೆ ಎಂದು ಅವರು ಒತ್ತಿಹೇಳಿದ್ದಾರೆ.
ಈ ಜ್ಞಾನ ಕೇಂದ್ರವು ಅಧ್ಯಯನಗಾರರು, ವಿಷಯ ತಜ್ಞರು ಮತ್ತು ಶಿಕ್ಷಣ ತಜ್ಞರು ಮತ್ತು ಕಲಿಕೆ ಮತ್ತು ಅಭಿವೃದ್ಧಿ ವೃತ್ತಿಪರರ ಸಂಪೂರ್ಣ ಪರಿಸರ ವ್ಯವಸ್ಥೆಯನ್ನು ಒಟ್ಟುಗೂಡಿಸುತ್ತದೆ ಎಂದು ಎನ್ಎಸ್ಇ ವ್ಯವಸ್ಥಾಪಕ ನಿರ್ದೇಶಕ (ಎಂಡಿ) ಮತ್ತು ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ (ಸಿಇಒ) ವಿಕ್ರಮ್ ಲಿಮಾಯೆ ಹೇಳಿದರು.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.