ನವದೆಹಲಿ: ದೇಶೀಯ ಆರ್ಥಿಕತೆಯ ಕುಸಿತದ ಹೊರತಾಗಿಯೂ, ಪ್ರಸ್ತುತ ಹಣಕಾಸು ವರ್ಷದ ಮೊದಲಾರ್ಧದಲ್ಲಿ ಭಾರತವು ವಿದೇಶಿ ನೇರ ಹೂಡಿಕೆ (ಎಫ್ಡಿಐ) ಒಳಹರಿವು ಡಾಲರ್ ಪರಿಭಾಷೆಯಲ್ಲಿ ಶೇಕಡಾ 15 ರಷ್ಟು ಏರಿಕೆಯಾಗಿದೆ ಎಂದು ವರದಿಗಳು ತಿಳಿಸಿವೆ.
ಜಾಗತಿಕ ಆರ್ಥಿಕತೆ ಮತ್ತು ಹೂಡಿಕೆಯ ವಾತಾವರಣವು ಕುಂಠಿತ ಬೆಳವಣಿಗೆಯನ್ನು ಕಂಡಿರುವ ಸಮಯದಲ್ಲಿ ಭಾರತೀಯ ಮಾರುಕಟ್ಟೆಯಲ್ಲಿ ಎಫ್ಡಿಐ ಒಳಹರಿವು ಭಾರತೀಯ ಆರ್ಥಿಕತೆಯಲ್ಲಿ ಅಂತರರಾಷ್ಟ್ರೀಯ ಹೂಡಿಕೆದಾರರು ಹೊಂದಿರುವ ವಿಶ್ವಾಸವನ್ನು ಪ್ರತಿಬಿಂಬಿಸುತ್ತದೆ.
ಮಹಾರಾಷ್ಟ್ರ, ದೆಹಲಿ, ಕರ್ನಾಟಕ ಮತ್ತು ಗುಜರಾತ್ಗಳು ಸುಮಾರು ಶೇ. 70 ರಷ್ಟು ನೇರ ಬಂಡವಾಳ ಹೂಡಿಕೆಯ ಒಳಹರಿವನ್ನು ಆಕರ್ಷಿಸಿದೆ. ದೆಹಲಿಯು ಒಟ್ಟು ಒಳಹರಿವುಗಳಲ್ಲಿ ಶೇ. 27 ರಷ್ಟು ಪಾಲನ್ನು ಹೊಂದಿದ್ದು, ಅತಿದೊಡ್ಡ ಎಫ್ಡಿಐ ಅನ್ನು ಆಕರ್ಷಿಸುವ ರಾಜ್ಯವಾಗಿ ಹೊರಹೊಮ್ಮಿದೆ.
ಇದಲ್ಲದೆ, 2019-20ರ ಮೊದಲಾರ್ಧದಲ್ಲಿ ದೆಹಲಿ ಗಳಿಸಿದ ಎಫ್ಡಿಐ ಒಳಹರಿವು 2018-19ರ ಇದೇ ಅವಧಿಯಲ್ಲಿ ಆಕರ್ಷಿತವಾದ ಒಳಹರಿವಿನಿಂದ ಶೇ.27 ರಷ್ಟು ಏರಿಕೆಯಾಗಿದೆ ಎಂಬುದು ಗಮನಾರ್ಹ.
ಅಲ್ಲದೆ, ಹಣಕಾಸು, ಬ್ಯಾಂಕಿಂಗ್, ವಿಮೆ, ಹಣಕಾಸೇತರ ವ್ಯವಹಾರ, ಹೊರಗುತ್ತಿಗೆ, ಕೊರಿಯರ್, ತಂತ್ರಜ್ಞಾನ ಪರೀಕ್ಷೆ ಮತ್ತು ವಿಶ್ಲೇಷಣೆ, ಮತ್ತು ಆರ್ & ಡಿ ಸೇರಿದಂತೆ ವಿವಿಧ ವಲಯಗಳು ಹೆಚ್ಚಿನ ಎಫ್ ಡಿಐ ಒಳಹರಿವನ್ನು ಕಂಡಿವೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.