ನವದೆಹಲಿ: ಇಂಡಿಯನ್ ಇನ್ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ ಮಂಡಿ ಸೋಮವಾರ, ತನ್ನ ಸಂಶೋಧಕರು ನೀರಿನಿಂದ ಹೈಡ್ರೋಜನ್ ಉತ್ಪಾದನೆಗೆ ಸೂರ್ಯನ ಬೆಳಕನ್ನು ಬಳಸಬಹುದಾದ ಹೊಸ ವಸ್ತುಗಳನ್ನು ಅಭಿವೃದ್ಧಿಪಡಿಸಿದ್ದಾರೆ ಎಂದು ಹೇಳಿದೆ
ಐಐಟಿ ಮಂಡಿ ಮತ್ತು ಆಂಧ್ರಪ್ರದೇಶದ ಯೋಗಿ ವೇಮನ ವಿಶ್ವವಿದ್ಯಾಲಯದ ಸಹಯೋಗದಲ್ಲಿ ನಡೆದ ಈ ಸಂಶೋಧನಾ ಕಾರ್ಯವನ್ನು ಅಮೆರಿಕನ್ ಕೆಮಿಕಲ್ ಸೊಸೈಟಿ (ಎಸಿಎಸ್) ಅಪ್ಲೈಡ್ ಎನರ್ಜಿ ಮೆಟೀರಿಯಲ್ಸ್ ಜರ್ನಲ್ನಲ್ಲಿ ಪ್ರಕಟಿಸಲಾಗಿದೆ.
“ಪಳೆಯುಳಿಕೆ ಇಂಧನ ನಿಕ್ಷೇಪಗಳು ಕ್ಷೀಣಿಸುತ್ತಿರುವುದು ಮತ್ತು ಅವುಗಳ ಬಳಕೆಗೆ ಸಂಬಂಧಿಸಿದ ಪರಿಸರ ಸಮಸ್ಯೆಗಳು ಹೆಚ್ಚುತ್ತಿರುವುದರಿಂದ ಪರ್ಯಾಯ, ಸುರಕ್ಷಿತ ಇಂಧನಗಳನ್ನು ಅಭಿವೃದ್ಧಿಪಡಿಸಲು ಹೆಚ್ಚು ಉತ್ತೇಜನಗಳು ಸಿಗುತ್ತಿವೆ. ಹೈಡ್ರೋಜನ್ ಗ್ಯಾಸ್ ಅದರ ಹೆಚ್ಚಿನ ಶಕ್ತಿಯ ಇಳುವರಿ ಮತ್ತು ಪರಿಸರ ಸ್ನೇಹಿ ಗುಣದಿಂದಾಗಿ ಹೊಸ ಹೈಡ್ರೋಜನ್ ಆಧಾರಿತ ಆರ್ಥಿಕತೆಯನ್ನು ಉತ್ತೇಜಿಸು ಸಂಭಾವ್ಯ ಶಕ್ತಿ ವೆಕ್ಟರ್ ಎಂದು ಗುರುತಿಸಲಾಗಿದೆ “ಎಂದು ಐಐಟಿ ಮಂಡಿಯ ಸ್ಕೂಲ್ ಆಫ್ ಬೇಸಿಕ್ ಸೈನ್ಸಸ್ನ ಸಹಾಯಕ ಪ್ರಾಧ್ಯಾಪಕ ವೆಂಕಟ ಕೃಷ್ಣನ್ ಹೇಳಿದ್ದಾರೆ.
ಮನುಷ್ಯನಿಗೆ ತಿಳಿದಿರುವ ಸರಳ ರಾಸಾಯನಿಕ ಸಂಯುಕ್ತವಾದ ನೀರು ಎರಡು ಹೈಡ್ರೋಜನ್ ಪರಮಾಣುಗಳು ಮತ್ತು ಒಂದು ಆಮ್ಲಜನಕ ಪರಮಾಣುವಿನಿಂದ ಮಾಡಲ್ಪಟ್ಟಿದೆ ಮತ್ತು ತಾರ್ಕಿಕವಾಗಿ ಹೈಡ್ರೋಜನ್ನ ಉತ್ತಮ ಮೂಲವಾಗಿದೆ.
ಆದರೆ, ನೀರನ್ನು ಹೈಡ್ರೋಜನ್ ಮತ್ತು ಆಮ್ಲಜನಕವಾಗಿ ವಿಭಜಿಸುವುದು ಸುಲಭವಲ್ಲ ಮತ್ತು ಇಲ್ಲಿ ಶಕ್ತಿಯ ತೀವ್ರತೆ ಇರುತ್ತದೆ. ನೀರನ್ನು ಅದರ ಘಟಕ ಹೈಡ್ರೋಜನ್ ಮತ್ತು ಆಮ್ಲಜನಕ ಪರಮಾಣುಗಳಾಗಿ ವಿಭಜಿಸಲು ಬೆಳಕು ಸಹಾಯ ಮಾಡುತ್ತದೆ ಎಂದು ದಶಕಗಳ ಹಿಂದೆಯೇ ತಿಳಿದುಬಂದಿದೆ.
ಐಐಟಿ ಮಂಡಿ ಮತ್ತು ಆಂಧ್ರಪ್ರದೇಶದ ಯೋಗಿ ವೇಮನ ವಿಶ್ವವಿದ್ಯಾಲಯದ ಸಹಯೋಗದ ಸಂಶೋಧನೆಯು N-ZnO-MoS2 ನ್ಯಾನೊಶೀಟ್ ಹೆಟೆರೊಜಂಕ್ಷನ್ಗಳನ್ನು ತಯಾರಿಸಲು ಸುಲಭವಾದ ವಿಧಾನವನ್ನು ಒದಗಿಸಿದೆ ಮಾತ್ರವಲ್ಲದೆ ನೀರು ಮತ್ತು ಸೂರ್ಯನ ಬೆಳಕನ್ನು ಬಳಸಿಕೊಂಡು ಹೈಡ್ರೋಜನ್ ಇಂಧನ ಉತ್ಪಾದನೆಗೆ ಅಂತಹ ವಸ್ತುಗಳ ಬಳಕೆಯ ವ್ಯಾಪ್ತಿಯ ಒಳನೋಟಗಳನ್ನು ಸಹ ನೀಡಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.