ನವದೆಹಲಿ: ಸದಾ ಒಂದಿಲ್ಲೊಂದು ರೀತಿಯ ವಿವಾದಗಳಿಂದ ಸುದ್ದಿಯಾಗುತ್ತಿರುವ ದೆಹಲಿಯ ಜವಹಾರ್ ಲಾಲ್ ನೆಹರೂ ವಿಶ್ವವಿದ್ಯಾಲಯ ಮತ್ತೆ ದೇಶದ ಸುದ್ದಿಯ ಕೇಂದ್ರ ಬಿಂದುವಾಗಿ ಹೊರಹೊಮ್ಮಿದೆ. ಆದರೆ ಈ ಬಾರಿ ಪ್ರತಿಭಟನೆ, ವಾದ-ವಾಗ್ವಾದಕ್ಕಾಗಿ ಅಲ್ಲ, ದೊಣ್ಣೆ, ರಾಡ್ ಹಿಡಿದು ನಡೆಸಲಾದ ದಾಂಧಲೆಯಿಂದಾಗಿದೆ. ಜೆಎನ್ಯು ಕ್ಯಾಂಪಸ್ ಒಳಗೆ ಗೂಂಡಾಗಳು ಮಾರಕ ಆಯುಧಗಳಿಂದ ದಾಳಿಯನ್ನು ನಡೆಸಿದ್ದಾರೆ. ಇದರಿಂದ ಹಲವಾರು ವಿದ್ಯಾರ್ಥಿಗಳಿಗೆ ಗಾಯಗಳಾಗಿವೆ.
ದಾಳಿ ನಡೆಸಿದವರು ಯಾರು ಎಂಬ ಬಗ್ಗೆ ಇನ್ನೂ ಪತ್ತೆಯಾಗಿಲ್ಲ. ಕನಿಷ್ಠ 20 ವಿದ್ಯಾರ್ಥಿಗಳು ಗಾಯಗೊಂಡು ಏಮ್ಸ್ ಆಸ್ಪತ್ರೆಗೆ ದಾಖಲಾಗಿದ್ದಾರೆ.
ಈ ಘಟನೆಯ ನಡುವೆಯೇ ಪತ್ರಕರ್ತೆ ಬರ್ಖಾ ದತ್ತ ಅವರು ವಾಟ್ಸಾಪ್ ಗ್ರೂಪ್ ಸಂಭಾಷಣೆಯ ಸ್ಕ್ರೀನ್ ಶಾಟ್ ಒಂದನ್ನು ಹಂಚಿಕೊಂಡಿದ್ದಾರೆ. ‘ಯುನಿಟಿ ಅಗೈಂಸ್ಟ್ ಲೆಫ್ಟ್’ ಎಂಬ ಗ್ರೂಪಿನ ಸಂಭಾಷಣೆಯ ತುಣುಕು ಇದಾಗಿದೆ. ಇದರಲ್ಲಿ ಒಂದು ನಂಬರಿನ ಸ್ಕ್ರೀನ್ ಶಾಟ್ ಹಾಕಲಾಗಿದೆ.
ಬರ್ಖಾ ಇದನ್ನು ಹಂಚಿಕೊಂಡಿದ್ದೇ ತಡ, ಹಲವಾರು ಸಾಮಾಜಿಕ ಜಾಲತಾಣ ಬಳಕೆದಾರರು ನಂಬರ್ ಯಾರಿಗೆ ಸೇರಿದ್ದು ಎಂಬುದರ ಬಗ್ಗೆ ಮಾಹಿತಿ ಕಲೆ ಹಾಕಿದ್ದಾರೆ. ಈ ನಂಬರ್ contribute.inc.in ವೆಬ್ಸೈಟ್ನಲ್ಲಿ ಪತ್ತೆಯಾಗಿದೆ. ಕಾಂಗ್ರೆಸ್ ಪಕ್ಷಕ್ಕೆ ಧನಸಹಾಯ ಮಾಡುವ ಸಲುವಾಗಿ ಆರಂಭಿಸಿದ ವೆಬ್ಸೈಟ್ ಇದಾಗಿದೆ.
ಈ ಮಾಹಿತಿ ಕಾಂಗ್ರೆಸ್ ಪಕ್ಷಕ್ಕೆ ತೀವ್ರ ಮುಜುಗರವನ್ನು ತಂದಿದ್ದು, ಐಎನ್ ಸಿ ಇಂಡಿಯಾ ಈ ಬಗ್ಗೆ ಟ್ವಿಟ್ ಮಾಡಿ, “ಲೋಕಸಭಾ ಚುನಾವಣೆಯ ಸಂದರ್ಭದಲ್ಲಿ ಈ ವೆಬ್ಸೈಟ್ ಆರಂಭಿಸಿದ್ದೆವು. ಈಗ ಅದು ನಿಷ್ಕ್ರಿಯಗೊಂಡಿದೆ. ಅದು ವ್ಯಾಪಾರಿಯ ನಂಬರ್ ಆಗಿದ್ದು, ನಮಗೂ ಆತನಿಗೂ ಸಂಬಂಧವಿಲ್ಲ” ಎಂದಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.