ಶಿಮ್ಲಾ: ಹಿಮಾಚಲ ಪ್ರದೇಶದ ಪ್ರವಾಸೋದ್ಯಮಕ್ಕೆ ಉತ್ತೇಜನವನ್ನು ನೀಡುವ ಸಲುವಾಗಿ ಸರ್ಕಾರ ಸುಮಾರು 16 ಸಾವಿರ ಕೋಟಿ ರೂಪಾಯಿ ಪ್ರಸ್ತಾವನೆಗಳಿಗೆ ಸಹಿ ಹಾಕಿದೆ. ಪ್ರವಾಸೋದ್ಯಮ ಈ ರಾಜ್ಯದ ಆರ್ಥಿಕ ಬೆನ್ನೆಲುಬು ಆಗಿದೆ. ಹೀಗಾಗಿ ಅಲ್ಲಿನ ಪ್ರವಾಸೋದ್ಯಮವನ್ನು ಬಲಿಷ್ಠಗೊಳಿಸಲು ಸರ್ಕಾರ ಸಾಕಷ್ಟು ಪ್ರಯತ್ನಗಳನ್ನು ನಡೆಸುತ್ತಿದೆ.
ಜಾಗತಿಕ ಹೂಡಿಕೆದಾರರ ಸಭೆಯಲ್ಲಿ ಪ್ರವಾಸೋದ್ಯಮ ಕ್ಷೇತ್ರಕ್ಕೆ 16000 ಕೋಟಿ ರೂ.ಗಳ ಮೌಲ್ಯದ 225 ಒಡಂಬಡಿಕೆ ಪತ್ರಕ್ಕೆ ಸಹಿ ಹಾಕಲಾಗಿದೆ ಮತ್ತು ಸುಮಾರು ಶೇ.15ರಷ್ಟು ಯೋಜನೆಗಳನ್ನು ಈಗಾಗಲೇ ಪ್ರಾರಂಭಿಸಲಾಗಿದೆ.
ಇದಲ್ಲದೆ, ಹಿಮಾಚಲ ಪ್ರದೇಶ ಸರ್ಕಾರ ಎರಡು ವರ್ಷಗಳ ಅವಧಿಯನ್ನು ಸಂಪೂರ್ಣಗೊಳಿಸುತ್ತಿರುವ ಸಂದರ್ಭದಲ್ಲಿ ಪ್ರವಾಸೋದ್ಯಮ ಕ್ಷೇತ್ರದಲ್ಲಿ 3322 ಕೋಟಿ ರೂ.ಗಳ ಹೂಡಿಕೆಯೊಂದಿಗೆ 81 ಯೋಜನೆಗಳನ್ನು ಕಾರ್ಯಾರಂಭಿಸಲಾಗಿದೆ.
ಸ್ಥಳೀಯ ನಿವಾಸಿಗಳಿಗೆ ಪ್ರವಾಸೋದ್ಯಮ ಕ್ಷೇತ್ರವನ್ನು ಉದ್ಯೋಗ-ಆಧಾರಿತವಾಗಿಸಲು ಪ್ರಯತ್ನಿಸಲಾಗುತ್ತಿದೆ ಮತ್ತು ಇದರ ಅಡಿಯಲ್ಲಿ ರಾಜ್ಯದಲ್ಲಿ 2000 ಹೋಂಸ್ಟೇಗಳು ಮತ್ತು 3600 ಹೋಟೆಲ್ಗಳನ್ನು ನೋಂದಾಯಿಸಲಾಗಿದೆ.
ಕಳೆದ ವರ್ಷ 476 ಹೊಸ ಹೋಂಸ್ಟೇ ಘಟಕಗಳನ್ನು ನೋಂದಾಯಿಸಲಾಗಿದೆ. ಇತ್ತೀಚೆಗೆ, ಸೋಲನ್, ಶಿಮ್ಲಾ, ಮಂಡಿ, ಮನಾಲಿ, ಧರ್ಮಶಾಲಾ ಮತ್ತು ಕಿನ್ನೌರಿನ 500 ಹೋಂಸ್ಟೇ ಮಾಲೀಕರಿಗೆ ಇನ್ಸ್ಟಿಟ್ಯೂಟ್ ಆಫ್ ಹೋಟೆಲ್ ಮ್ಯಾನೇಜ್ಮೆಂಟ್ನಲ್ಲಿ ತರಬೇತಿ ನೀಡಲಾಗಿದೆ.
ಇದಲ್ಲದೆ, ನಿರುದ್ಯೋಗಿ ಯುವಕರಿಗೆ ಉದ್ಯೋಗ ಒದಗಿಸಲು, 939 ಜನರಿಗೆ ರಾಜ್ಯ ಪ್ರವಾಸೋದ್ಯಮ ಉದ್ಯಮಗಳಾದ ಟೂರಿಸ್ಟ್ ಗೈಡ್, ಟ್ಯಾಕ್ಸಿ ಡ್ರೈವರ್, ಪೋರ್ಟರ್, ಚಾರಣ ಇತ್ಯಾದಿಗಳ ಬಗ್ಗೆ ಹಿಮ್ಕಾನ್, ಅಟಲ್ ಬಿಹಾರಿ ವಾಜಪೇಯಿ ಪರ್ವತಾರೋಹಣ ಸಂಸ್ಥೆ ಮನಾಲಿ, ನೇಚರ್ ಮತ್ತು ಲೈಫ್ ಅಸೋಸಿಯೇಷನ್ಗಳಿಂದ ತರಬೇತಿ ನೀಡಲಾಗಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.