ನವದೆಹಲಿ: ಸ್ವಾತಂತ್ರ್ಯ ಹೋರಾಟಗಾರ ವೀರ ಸಾವರ್ಕರ್ ಮತ್ತು ಗಾಂಧಿ ಹಂತಕ ನಾಥು ರಾಮ್ ಗೋಡ್ಸೆ ನಡುವೆ ದೈಹಿಕ ಸಂಪರ್ಕವಿತ್ತು ಎಂದು ಹೇಳಿ ಕಾಂಗ್ರೆಸ್ ಸೇವಾ ದಳ ಬಿಡುಗಡೆಗೊಳಿಸಿರುವ ಕೈಪಿಡಿಯನ್ನು ತಕ್ಷಣವೇ ಹಿಂಪಡೆಯಬೇಕು ಎಂದು ಮಹಾರಾಷ್ಟ್ರದಲ್ಲಿ ಕಾಂಗ್ರೆಸ್ ಮೈತ್ರಿಯಾಗಿರುವ ಎನ್ಸಿಪಿ ಆಗ್ರಹಿಸಿದೆ.
ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ಎನ್ಸಿಪಿ ಮುಖ್ಯ ವಕ್ತಾರ ನವಾಬ್ ಮಲಿಕ್ ಅವರು, “ಸಾವರ್ಕರ್ ಈಗ ಜೀವಂತವಾಗಿಲ್ಲ, ಇಂತಹ ಸಂದರ್ಭದಲ್ಲಿ ಈ ರೀತಿಯಾಗಿ ಹೇಳಿಕೆ ನೀಡುವುದು ತಪ್ಪು” ಎಂದಿದ್ದಾರೆ.
ಕಾಂಗ್ರೆಸ್ ಕೈಪಿಡಿಗೆ ದೇಶದ ಮೂಲೆ ಮೂಲೆಯಿಂದಲೂ ಭಾರೀ ಆಕ್ರೋಶಗಳು ವ್ಯಕ್ತವಾಗಿದೆ. ಬಿಜೆಪಿ ವಕ್ತಾರ ಸುಧಾಂಶು ತ್ರಿವೇದಿ ಅವರು ಕಾಂಗ್ರೆಸ್ ವಿರುದ್ಧ ವಾಗ್ದಾಳಿಯನ್ನು ನಡೆಸಿದ್ದು, ಗಾಂಧಿ ಪರಿವಾರದ ಅಸಲಿಯತ್ತನ್ನು ತಿಳಿಯಲು ಸಲ್ಮಾನ್ ರಶ್ದಿ ಅವರು ಬರೆದಿರುವ “ಮಿಡ್ನೈಟ್ ಚಿಲ್ಡ್ರನ್ಸ್’ ಪುಸ್ತಕವನ್ನು ಕಾಂಗ್ರೆಸ್ ಓದಬೇಕು ಎಂದಿದ್ದಾರೆ. ಅಲ್ಲದೇ, ಈ ಪುಸ್ತಕದಲ್ಲಿ ಏನೇನು ಬರೆಯಲಾಗಿದೆ ಎಂಬುದನ್ನು ನಾನು ಹೇಳಿದರೆ ಸಮಸ್ಯೆಯಾಗಬಹುದು ಎಂದು ಹೇಳಿದ್ದಾರೆ.
ಅಲ್ಲದೇ, “ಕಾಂಗ್ರೆಸ್ ಮುಖಂಡರು ಜೈಲಿನಲ್ಲಿ ಆರಾಮವಾಗಿ ಪುಸ್ತಕಗಳನ್ನು ಬರೆಯುತ್ತಿದ್ದರು, ಆದರೆ ಸಾವರ್ಕರ್ ಸೆಲ್ಯೂಲರ್ ಜೈಲಿನಲ್ಲಿ ಅತ್ಯಂತ ಕಠಿಣ ಪರಿಸ್ಥಿತಿಯನ್ನು ಎದುರಿಸುತ್ತಿದ್ದರು” ಎಂದಿದ್ದಾರೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.