ಸಿಎಎ ವಿರೋಧಿ ಪ್ರತಿಭಟನೆಯಲ್ಲಿ ಪಿಎಫ್ಐ ಮತ್ತು ಸಿಮಿಯಂತಹ ಇಸ್ಲಾಮಿಕ್ ಸಂಘಟನೆಗಳ ಪಾತ್ರವನ್ನು ಗುಪ್ತಚರ ಸಂಸ್ಥೆಗಳು ಮತ್ತು ಕಮ್ಯುನಿಸ್ಟ್ ನಾಯಕಿ ಶೆಹ್ಲಾ ರಶೀದ್ ಅವರು ಬಹಿರಂಗಪಡಿಸಿದ್ದಾರೆ. ತನ್ನ ಮಾರ್ಕ್ಸ್ವಾದಿ ಸಿದ್ಧಾಂತವನ್ನು ಬದಿಗಿಟ್ಟು ತಾನೊಬ್ಬಳು ಅಪ್ಪಟ ಇಸ್ಲಾಮಿಕ್ ವಾದಿ ಎಂಬುದನ್ನು ಶೆಹ್ಲಾ ಸಿಎಎ ಪ್ರತಿಭಟನೆಯ ಸಂದರ್ಭದಲ್ಲಿ ಜಗಜ್ಜಾಹೀರು ಮಾಡಿದ್ದಾರೆ. ಸಿಎಎ ವಿರೋಧಿ ಪ್ರತಿಭಟನೆಗಳು ಕೇವಲ ಇಸ್ಲಾಮಿಕ್ ಆಂದೋಲನವಾಗಿದೆ. ಸಿಎಎ ವಿರೋಧಿ ಪ್ರತಿಭಟನೆಯಲ್ಲಿ ಪಾಕಿಸ್ಥಾನದ ಸಂಪರ್ಕವನ್ನು ಪರಿಶೀಲಿಸಲು ಚೆನ್ನೈ ಪೊಲೀಸರು ತನಿಖೆ ಆರಂಭಿಸಿದ್ದರಿಂದ ಸಿಎಎ ವಿರೋಧಿ ಪ್ರತಿಭಟನೆಯಲ್ಲಿ ಪಾಕಿಸ್ಥಾನದ ಸಂಪರ್ಕಗಳು ಈಗ ಹೊರಹೊಮ್ಮಿವೆ.
ಸಿಎಎ ವಿರೋಧಿ ಪ್ರತಿಭಟನೆಯಲ್ಲಿ ಭಾಗವಹಿಸಿ ಬಂಧನಕ್ಕೊಳಗಾದ ಮಹಿಳಾ ಕಾರ್ಯಕರ್ತೆಯೊಬ್ಬರ ಪಾಕಿಸ್ಥಾನದ ಸಂಪರ್ಕವನ್ನು ನಮ್ಮ ಅಧಿಕಾರಿಗಳು ತನಿಖೆ ನಡೆಸುತ್ತಿದ್ದಾರೆ ಎಂದು ಚೆನ್ನೈ ಪೊಲೀಸ್ ಆಯುಕ್ತರು ಹೇಳಿದ್ದಾರೆ. ಆಕೆಯ ಸಾಮಾಜಿಕ ಜಾಲತಾಣ ಖಾತೆಗಳಲ್ಲಿ ಒಂದು ಆಕೆ ಪಾಕಿಸ್ಥಾನ ಮೂಲದ ಸಂಘಟನೆಯೊಂದರ ಜೊತೆ ಸಂಪರ್ಕ ಹೊಂದಿದ್ದಾಳೆ ಎಂಬುದನ್ನು ಬಹಿರಂಗಪಡಿಸಿದೆ. ಪೌರತ್ವ ತಿದ್ದುಪಡಿ ಕಾಯ್ದೆಯನ್ನು ವಿರೋಧಿಸಿ ಪ್ರತಿಭಟನಾಕಾರರು ವಿವಿಧ ಮನೆಗಳು ಮತ್ತು ಸಭಾಂಗಣಗಳ ಹೊರಗೆ ರಂಗೋಲಿಯನ್ನು ಬಿಡಿಸಿದ್ದರು. ಹೆಚ್ಚಿನ ಕಡೆಗಳಲ್ಲಿ ಮಾಲೀಕರ ಅನುಮತಿ ಇಲ್ಲದೆಯೇ ಈ ಕಾರ್ಯಗಳನ್ನು ಮಾಡಿದ್ದಾರೆ. ಪ್ರತಿಭಟನಾಕಾರರು ಸಿಎಎ ವಿರೋಧಿ ಸಂದೇಶಗಳನ್ನು ಮನೆ ಮಾಲೀಕರ ವಿರೋಧದ ಹೊರತಾಗಿಯೂ ಮನೆ ಕೌಂಪೌಂಡ್ಗಳ ಮೇಲೆ ಹಾಕಿದ್ದಾರೆ.
ಆಯುಕ್ತ ಎ.ಕೆ.ವಿಶ್ವನಾಥನ್ ಸುದ್ದಿಗಾರರೊಂದಿಗೆ ಮಾತನಾಡುತ್ತಾ, ಪ್ರತಿಭಟನೆಯಲ್ಲಿ ಬಂಧಿತಳಾದ ಮಹಿಳೆ ಗಾಯತ್ರಿ ಕಂದಾಡೈ ಅವರ ಫೇಸ್ ಬುಕ್ ಪ್ರೊಫೈಲ್ ಆಕೆ ಪಾಕಿಸ್ಥಾನದ ಬೈಟ್ಸ್ ಫಾರ್ ಆಲ್ ಸಂಶೋಧಕಿ ಎಂಬುದನ್ನು ತೋರಿಸುತ್ತದೆ. ಇದು ದಿ ಅಸೋಸಿಯೇಷನ್ ಆಫ್ ಆಲ್ ಪಾಕಿಸ್ಥಾನ ಸಿಟಿಜನ್ ಜರ್ನಲಿಸ್ಟ್ಸ್ (ಎಎಪಿಸಿಜೆ)ನ ಭಾಗವಾಗಿದೆ. ಪಾಕಿಸ್ಥಾನದ ಬೈಟ್ಸ್ ಫಾರ್ ಆಲ್ (ಬಿ 4 ಎ) ವೆಬ್ಸೈಟ್, ತನ್ನನ್ನು ಮಾನವ ಹಕ್ಕುಗಳ ಸಂಸ್ಥೆ ಮತ್ತು ಮಾಹಿತಿ ಮತ್ತು ಸಂವಹನ ತಂತ್ರಜ್ಞಾನಗಳನ್ನು ಕೇಂದ್ರೀಕರಿಸುವ ಸಂಶೋಧನಾ ಥಿಂಕ್ ಟ್ಯಾಂಕ್ ಎಂದು ಹೇಳಿದೆ. ಇದು ಸಂಬಂಧಿತ ವಿಷಯಗಳ ಕುರಿತು ಚರ್ಚೆಗಳನ್ನು ಆಯೋಜಿಸುತ್ತದೆ, ಸಂಶೋಧನೆಗಳನ್ನು ಪ್ರಸ್ತುತಪಡಿಸುತ್ತದೆ ಮತ್ತು ಅಭಿಪ್ರಾಯವನ್ನು ಸಜ್ಜುಗೊಳಿಸುತ್ತದೆ.
ಸಿಎಎಗೆ ಸಂಬಂಧಿಸಿದಂತೆ ದೇಶದಲ್ಲಿ ದೊಡ್ಡ ಮಟ್ಟದಲ್ಲಿ ಹಿಂಸಾಚಾರಗಳು ಭುಗಿಲೆದ್ದಿದ್ದವು. ಸೀಲಂಪುರದಲ್ಲಿ ನಡೆದ ಪ್ರತಿಭಟನೆ ಹಿಂಸೆಯ ಜಿನ ಮುಖವನ್ನು ಅನಾವರಣಗೊಳಿಸಿತ್ತು. ಪ್ರತಿಭಟನಾಕಾರರು ಇಲ್ಲಿ ನಹಿರಂಗವಾಗಿ ಪೊಲೀಸರ ಮೇಲೆ ಹಲ್ಲೆ ನಡೆಸಿದ್ದರು, ಹೆಚ್ಚುವರಿ ಡಿಸಿಇ ಅವರಿಗೆ ಇದರಿಂದ ಗಾಯಗಳಾಗಿದ್ದವು. ಲಕ್ನೋದಲ್ಲಿ ಪ್ರತಿಭಟನಾಕಾರರು ಪೊಲೀಸ್ ಪೋಸ್ಟ್ ಗಳಿಗೆ ಬೆಂಕಿ ಹಚ್ಚಿದ್ದರು. ಒಟ್ಟು 20 ಮೋಟಾರು ಸೈಕಲ್, 10 ಕಾರು, 3 ಬಸ್, 4 ಮೀಡಿಯಾ ಒಬಿ ವ್ಯಾನ್ ಗಳಿಗೆ ಬೆಂಕಿ ಹಚ್ಚಲಾಗಿತ್ತು. ಪಾಟ್ನಾದ ಫುಲ್ವರಿಯಲ್ಲಿರುವ ಹನುಮಾನ್ ದೇವಾಲಯವನ್ನು ಸಿಎಎ ವಿರೋಧಿ ಪ್ರತಿಭಟನಾಕಾರರು ಆರ್ಜೆಡಿ ಕರೆದ ಭಾರತ್ ಬಂದ್ ಸಂದರ್ಭದಲ್ಲಿ ಆಕ್ರಮಣ ಮಾಡಿ ಧ್ವಂಸಗೊಳಿಸಿದ್ದರು. ಆರ್ಜೆಡಿ ಗೂಂಡಾಗಳ ಜೊತೆಯಲ್ಲಿ ಜನರ ಗುಂಪು “ಬಸ್ ನಾಮ್ ರಹೇಗಾ ಅಲ್ಲಾ ಕಾ” ಘೋಷಣೆ ಕೂಗಿದ್ದರು. ಜನರಗುಂಪು ದೇವಾಲಯವನ್ನು ಅಪವಿತ್ರಗೊಳಿಸುವ ಮೂಲಕ ಹಿಂದೂಗಳ ಬಗ್ಗೆ ಉಗ್ರ ಅಸಹಿಷ್ಣುತೆಯನ್ನು ಪ್ರದರ್ಶಿಸಿತ್ತು, ಅವರು ಹಿಂದೂಗಳು ಮತ್ತು ಇತರ ಧರ್ಮಗಳ ಸಂಪೂರ್ಣ ವಿನಾಶವನ್ನು ನಂಬುವ ವಹಾಬಿ ಪಠಣಗಳನ್ನು ಮಾಡಿದ್ದಾರೆ.
ಪ್ರತಿಭಟನೆಯಲ್ಲಿ ಪಿಎಫ್ಐ ಮತ್ತು ಸಿಮಿ ಪಾತ್ರವನ್ನು ಗುಪ್ತಚರ ಸಂಸ್ಥೆಗಳು ದೃಢಪಡಿಸಿವೆ. ಇತ್ತೀಚೆಗೆ, ಯುಪಿ ಆಡಳಿತವು ಹಿಂಸಾತ್ಮಕ ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದ ಪಿಎಫ್ಐ ಜೊತೆ ಸಂಬಂಧ ಹೊಂದಿದ್ದ 25 ಜನರನ್ನು ಬಂಧಿಸಿತ್ತು. ಸಿಎಎ ವಿರೋಧಿ ಪ್ರತಿಭಟನೆಗಳ ಹೆಸರಿನಲ್ಲಿ ದೇಶಾದ್ಯಂತ ವಿಶೇಷವಾಗಿ ಯುಪಿ ಮತ್ತು ಅಸ್ಸಾಂನಲ್ಲಿ ಹಿಂಸಾಚಾರವನ್ನು ಪ್ರಚೋದಿಸುವಲ್ಲಿ ಪಿಎಫ್ಐ ಪ್ರಮುಖ ಪಾತ್ರ ವಹಿಸಿದೆ. ಜಿಹಾದ್ ಅನ್ನು ಉತ್ತೇಜಿಸುವಲ್ಲಿ ಈ ಸಂಘಟನೆ ತುಂಬಾ ಸಕ್ರಿಯವಾಗಿದೆ ಮತ್ತು ಜಿಹಾದ್ ಕುರಿತು ತರಗತಿಗಳನ್ನು ಅದರ ಕೆಲವು ಸದಸ್ಯರು ನಡೆಸುತ್ತಾ ಬರುತ್ತಿದ್ದಾರೆ. ಈ ತರಗತಿಗಳಲ್ಲಿ, ಇಸ್ಲಾಂ ಧರ್ಮವನ್ನು ವಿರೋಧಿಸುವ ಹಿಂದೂ ಬಲಪಂಥೀಯ ಕಾರ್ಯಕರ್ತರನ್ನು ಕೊಲೆ ಮಾಡುವ ಬಗ್ಗೆ ಬೋಧಿಸಲಾಗುತ್ತದೆ. ಕಳೆದ ಕೆಲವು ವರ್ಷಗಳಿಂದ ರಾಷ್ಟ್ರೀಯ ತನಿಖಾ ಸಂಸ್ಥೆಯ ಕಣ್ಗಾವಲಿನಲ್ಲಿ ಈ ಸಂಘಟನೆ ಇದೆ. ಕನಿಷ್ಠ ನಾಲ್ಕು ಪಪ್ರಕರಣಗಳಲ್ಲಿ ಅದರ ಹೆಸರನ್ನು ಉಲ್ಲೇಖ ಮಾಡಿದೆ. ಕೇರಳದ ಇಡುಕ್ಕಿ ಜಿಲ್ಲೆಯ (ಜುಲೈ 2010) ಪ್ರಾಧ್ಯಾಪಕರೊಬ್ಬರ ಕೈಯನ್ನು ಕತ್ತರಿಸಿದ್ದಕ್ಕಾಗಿ, ಬೆಂಗಳೂರಿನಲ್ಲಿ ಆರ್ಎಸ್ಎಸ್ ನಾಯಕನ ಹತ್ಯೆಗಾಗಿ(ಅಕ್ಟೋಬರ್ 2016), ಕೊಚ್ಚಿಯಲ್ಲಿ ಇಸ್ಲಾಮಿಕ್ ಸ್ಟೇಟ್ ಒಮರ್ ಅಲ್-ಹಿಂದಿ ಮಾಡ್ಯೂಲ್ ಆಗಿ ಸೇವೆ ಸಲ್ಲಿಸುತ್ತಿರುವುದಕ್ಕಾಗಿ (ಅಕ್ಟೋಬರ್ 2016) ಇದರ ವಿರುದ್ಧ ಪ್ರಕರಣ ದಾಖಲಿಸಲಾಗಿದೆ. ಕಣ್ಣೂರಿನಲ್ಲಿ ಇದು ಆಯೋಜಿಸಿದ್ದ ತರಬೇತಿ ಶಿಬಿರದಿಂದ ಬಾಂಬ್, ಐಇಡಿ ಮತ್ತು ಕತ್ತಿಗಳನ್ನು ವಶಪಡಿಸಿಕೊಳ್ಳಲಾಗಿದೆ. ರಾಜ್ಯದಲ್ಲಿ ಕನಿಷ್ಠ 27 ರಾಜಕೀಯ ಕೊಲೆಗಳಲ್ಲಿ ಪಿಎಫ್ಐ ಭಾಗಿಯಾಗಿದೆ ಎಂದು ಕೇರಳ ಪೊಲೀಸರು ಹೇಳಿದ್ದಾರೆ. 2014 ರಲ್ಲಿ ಕೇರಳ ಸರ್ಕಾರವು ಹೈಕೋರ್ಟ್ನಲ್ಲಿ ಅಫಿಡವಿಟ್ ಸಲ್ಲಿಸಿದ್ದು, 86 ಕೊಲೆ ಪ್ರಕರಣಗಳು ಮತ್ತು 125 ಕ್ಕೂ ಹೆಚ್ಚು ಪ್ರಕರಣಗಳಲ್ಲಿ ಕೋಮು ಭಾವವನ್ನು ಇದು ಹುಟ್ಟುಹಾಕಿದೆ ಎಂದಿದೆ.
ಪಿಎಫ್ಐನಿಂದ ಸಿಮಿ ಮತ್ತು ಈಗ ಪಾಕಿಸ್ಥಾನದವರೆಗೆ ಸಿಎಎ ವಿರೋಧಿ ಪ್ರತಿಭಟನಾಕಾರರು ಪ್ರತಿಭಟನೆಗಳ ಹೆಸರಿನಲ್ಲಿ ವಿದ್ಯಾರ್ಥಿಗಳನ್ನುದಾರಿ ತಪ್ಪಿಸುವ ಮತ್ತು ಪರದೆಯ ಹಿಂದೆ ಹಿಂಸಾಚಾರವನ್ನು ಭುಗಿಲೆಬ್ಬಿಸುವ ಮೋಸದ ಮತ್ತು ಕಪಟ ತಂತ್ರವನ್ನು ಅನುಸರಿಸಿದ್ದಾರೆ. ಸಿಎಎ ವಿರೋಧಿ ಪ್ರತಿಭಟನೆಗಳ ಸತ್ಯಾಸತ್ಯತೆ ಒಂದೊಂದಾಗಿ ಬಿಚ್ಚಿಕೊಳ್ಳುತ್ತಿವೆ ಮತ್ತು ರಾಷ್ಟ್ರವನ್ನು ಅಸ್ಥಿರಗೊಳಿಸುವ ಏಕೈಕ ಗುರಿಯಾಗಿಸಿಕೊಂಡಿರುವ ಜನರ ಬಗ್ಗೆ ಸರ್ಕಾರವು ತಿಳಿದಿರಬೇಕಾದುದು ಅವಶ್ಯಕ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.