ನವದೆಹಲಿ: ಸೇನೆಯ ಮಹಾ ಪ್ರಧಾನ ದಂಡನಾಯಕ (ಸಿಡಿಎಸ್) ರಚನೆಯು ರಕ್ಷಣೆಯ ಮಹತ್ವದ ಮತ್ತು ಸಮಗ್ರ ಸುಧಾರಣೆಯ ಭಾಗವಾಗಿದೆ, ಇದು ಆಧುನಿಕ ಯುದ್ಧದ ನಿರಂತರ ಬದಲಾವಣೆಗಳನ್ನು ಎದುರಿಸಲು ದೇಶಕ್ಕೆ ಸಹಾಯ ಮಾಡುತ್ತದೆ ಎಂದು ಪ್ರಧಾನಿ ನರೇಂದ್ರ ಮೋದಿ ಬುಧವಾರ ಹೇಳಿದ್ದಾರೆ.
ರಾಷ್ಟ್ರಕ್ಕಾಗಿ ಸೇವೆ ಸಲ್ಲಿಸಿದ ಮತ್ತು ತಮ್ಮ ಪ್ರಾಣವನ್ನು ಅರ್ಪಿಸಿದ ಎಲ್ಲರಿಗೂ ಗೌರವವನ್ನು ಸಲ್ಲಿಸಿದ ಮೋದಿ, ಹೊಸದಾಗಿ ನೇಮಕಗೊಂಡ ಸಿಡಿಎಸ್ ಜನರಲ್ ಬಿಪಿನ್ ರಾವತ್ ಅವರನ್ನು ಅತ್ಯುತ್ತಮ ಅಧಿಕಾರಿ ಎಂದು ಪ್ರಶಂಸಿಸಿದರು.
ಟ್ವಿಟ್ ಮಾಡಿದ ಮೋದಿ, ”ಹೊಸ ವರ್ಷ ಮತ್ತು ಹೊಸ ದಶಕ ಪ್ರಾರಂಭವಾಗುತ್ತಿದ್ದಂತೆ, ಭಾರತವು ಜನರಲ್ ಬಿಪಿನ್ ರಾವತ್ ಅವರನ್ನು ದೇಶದ ಮೊದಲ ಸೇನಾ ಮಹಾದಂಡನಾಯಕನಾಗಿ ಪಡೆಯುತ್ತಿರುವುದು ನನಗೆ ಖುಷಿ ತಂದಿದೆ. ನಾನು ಅವರನ್ನು ಅಭಿನಂದಿಸುತ್ತೇನೆ ಮತ್ತು ಈ ಜವಾಬ್ದಾರಿಗಾಗಿ ಅವರಿಗೆ ಶುಭ ಹಾರೈಸುತ್ತೇನೆ. ಅವರು ಭಾರೀ ಉತ್ಸಾಹದಿಂದ ಭಾರತಕ್ಕೆ ಸೇವೆ ಸಲ್ಲಿಸಿದ ಮಹೋನ್ನತ ಅಧಿಕಾರಿ” ಎಂದಿದ್ದಾರೆ.
”ಮೊದಲ ಸಿಡಿಎಸ್ ಅಧಿಕಾರ ವಹಿಸಿಕೊಂಡಿರುವ ಹಿನ್ನಲೆಯಲ್ಲಿ, ನಮ್ಮ ರಾಷ್ಟ್ರಕ್ಕಾಗಿ ಸೇವೆ ಸಲ್ಲಿಸಿದ ಮತ್ತು ತಮ್ಮ ಜೀವನವನ್ನು ಅರ್ಪಿಸಿದ ಎಲ್ಲರಿಗೂ ನಾನು ಗೌರವ ಸಲ್ಲಿಸುತ್ತೇನೆ. ಕಾರ್ಗಿಲ್ನಲ್ಲಿ ಹೋರಾಡಿದ ಧೀರ ಯೋಧರನ್ನು ನಾನು ನೆನಪಿಸಿಕೊಳ್ಳುತ್ತೇನೆ, ಕಾರ್ಗಿಲ್ ಯುದ್ಧದ ಬಳಿಕ ನಮ್ಮ ಮಿಲಿಟರಿಯನ್ನು ಸುಧಾರಿಸುವ ಕುರಿತು ಅನೇಕ ಚರ್ಚೆಗಳು ಪ್ರಾರಂಭವಾದವು, ಇದು ಇಂದಿನ ಐತಿಹಾಸಿಕ ಬೆಳವಣಿಗೆಗೆ ಕಾರಣವಾಯಿತು” ಎಂದಿದ್ದಾರೆ.
2019ರ ಆಗಸ್ಟ್ 15 ರಂದು ಕೆಂಪು ಕೋಟೆಯ ಮೇಲೆ ನಿಂತು ಸೇನೆಗೆ ದಂಡ ನಾಯಕನನ್ನು ನೇಮಿಸುವುದಾಗಿ ಘೋಷಿಸಿದ ಸಂದರ್ಭವನ್ನು ಪ್ರಧಾನಿ ನೆನಪಿಸಿದರು.
ಈ ಸಂಸ್ಥೆ ನಮ್ಮ ಮಿಲಿಟರಿ ಪಡೆಗಳನ್ನು ಆಧುನೀಕರಿಸುವ ಮಹತ್ತರವಾದ ಜವಾಬ್ದಾರಿಯನ್ನು ಹೊಂದಿದೆ. ಇದು 1.3 ಬಿಲಿಯನ್ ಭಾರತೀಯರ ಭರವಸೆ ಮತ್ತು ಆಕಾಂಕ್ಷೆಗಳನ್ನು ಪ್ರತಿಬಿಂಬಿಸುತ್ತದೆ, ” ಎಂದು ಪ್ರಧಾನಿ ಟ್ವೀಟ್ ಮಾಡಿದ್ದಾರೆ.
Creation of the Department of Military Affairs with requisite military expertise and institutionalisation of the post of CDS is a momentous and comprehensive reform that will help our country face the ever-changing challenges of modern warfare.
— Narendra Modi (@narendramodi) January 1, 2020
On 15th August 2019, from the ramparts of the Red Fort, I announced that India will have a Chief of Defence Staff. This institution carries tremendous responsibility of modernizing our military forces. It would also reflect the hopes and aspirations of 1.3 billion Indians.
— Narendra Modi (@narendramodi) January 1, 2020
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.