ಬೆಂಗಳೂರು: ನಭಕ್ಕೆ ರಾಕೆಟ್ ಮತ್ತು ಸ್ಯಾಟಲೈಟ್ಗಳನ್ನು ಚಿಮ್ಮಿಸುವ ಇಸ್ರೋ ಸದಾ ಜನರ ಪ್ರಶಂಸೆಗೆ ಪಾತ್ರವಾಗುತ್ತಿರುತ್ತದೆ. ಇದೀಗ ಬೇರೆಯದ್ದೇ ಕಾರಣಕ್ಕೆ ಅದು ಇಂಟರ್ನೆಟ್ನಲ್ಲಿ ಜನರ ಗಮನವನ್ನು ಸೆಳೆದಿದೆ. ಇಸ್ರೋದ ಹಿರಿಯ ವಿಜ್ಞಾನಿಯೊಬ್ಬರು ಸಂಸದೀಯ ಮಂಡಳಿ ಸಭೆಯ ಕೊನೆಯಲ್ಲಿ ಕೊಳಲು ನುಡಿಸುವ ಮೂಲಕ ಎಲ್ಲರನ್ನು ಭಾವಪರವಶಗೊಳಿಸಿದ್ದಾರೆ.
ಬೆಂಗಳೂರಿನ ಯು ಆರ್ ರಾವ್ ಸ್ಯಾಟಲೈಟ್ ಸೆಂಟರಿನ ನಿರ್ದೇಶಕ ಪಿ. ಕುನ್ಹಿಕೃಷ್ಣನ್ ಅವರು ಕೊಳಲು ವಾದನ ಮಾಡಿದ್ದಾರೆ. ಇಸ್ರೋದಲ್ಲಿ ನಡೆದ ಸಂಸದೀಯ ಮಂಡಳಿಯ ಸಭೆಯ ಕೊನೆಯಲ್ಲಿ ಅವರು ಕೊಳಲು ವಾದನ ಮಾಡಿದ್ದಾರೆ. ಇದರ ವಿಡಿಯೋವನ್ನು ಜೈರಾಮ್ ರಮೇಶ್ ಅವರು ಟ್ವಿಟರ್ ಮೂಲಕ ಹಂಚಿಕೊಂಡಿದ್ದಾರೆ.
ಪಿ. ಕುನ್ಹಿಕೃಷ್ಣನ್ ಅವರು ವೃತ್ತಿಪರ ಕೊಳಲು ವಾದಕರಾಗಿದ್ದಾರೆ. ಸಭೆಯ ಬಳಿಕ ಅವರು ‘ವಾತಾಪಿ ಗಣಪತಿಂ ಭಜೇ’ ಎಂಬ ಪ್ರಸಿದ್ಧ ಗೀತೆಯನ್ನು ಅವರು ನುಡಿಸಿದ್ದಾರೆ.
“ಇಸ್ರೊದಲ್ಲಿನ ಸಂಸದೀಯ ಸ್ಥಾಯಿ ಸಮಿತಿಯ ಸಭೆಯನ್ನು ವೃತ್ತಿಪರ ಕೊಳಲು ವಾದಕರೂ ಆಗಿರುವ ಬೆಂಗಳೂರಿನ ಉಪಗ್ರಹ ಕೇಂದ್ರದ ನಿರ್ದೇಶಕ ಪಿ. ಕುನ್ಹಿಕೃಷ್ಣನ್ ಅವರ ಕೊಳಲು ಪ್ರದರ್ಶನದೊಂದಿಗೆ ಕೊನೆಗೊಳಿಸಲಾಯಿತು. ಅವರು ಎವರ್ ಗ್ರೀನ್ ವಾತಾಪಿ ಗಣಪತಿಂ ಭಜೆಯನ್ನು ನುಡಿಸಿದರು. ಈ ದೃಶ್ಯದ ತುಣುಕನ್ನು ಹಂಚಿಕೊಳ್ಳುತ್ತಿದ್ದೇನೆ” ಎಂದು ರಮೇಶ್ ಟ್ವೀಟ್ ನಲ್ಲಿ ಹೇಳಿದ್ದಾರೆ.
The Parliamentary Standing Committee ended it’s last meeting at ISRO with a flute performance by the Director of its Satellite Centre in Bengaluru, P. Kunhikrishnan, who is also a professional flute player! He played the evergreen Vatapi Ganapatim Bhaje. Sharing a snippet. pic.twitter.com/AkwwPh9oZY
— Jairam Ramesh (@Jairam_Ramesh) December 29, 2019
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.