ನವದೆಹಲಿ: ಕಮರ್ಷಿಯಲ್ ಪೈಲಟ್ ಲೈಸೆನ್ಸ್ (ಸಿಪಿಎಲ್-ಎ) ವಿತರಣೆಯನ್ನು ಸ್ವಯಂಚಾಲಿತಗೊಳಿಸಲಾಗಿರುವ ಇ-ಗವರ್ನೆನ್ಸ್ (ಇ-ಜಿಸಿಎ) ಯೋಜನೆಯ ಮೊದಲ ಹಂತದ ಸೇವೆಯನ್ನು ನಾಗರಿಕ ವಿಮಾನಯಾನ ನಿರ್ದೇಶನಾಲಯ (ಡಿಜಿಸಿಎ) ಸೋಮವಾರ ಪ್ರಾರಂಭಿಸಿದೆ ಎಂದು ಕೇಂದ್ರ ನಾಗರಿಕ ವಿಮಾನಯಾನ ಸಚಿವಾಲಯ ತಿಳಿಸಿದೆ.
ಸಿಪಿಎಲ್-ಎ ಅನ್ನು ಸ್ವಯಂಚಾಲಿತ ರೂಪದಲ್ಲಿ ರೂಪಿಸಿರುವುದರಿಂದ ಪರವಾನಗಿಗಳ ವಿತರಣಾ ಪ್ರಕ್ರಿಯೆಯನ್ನು ತ್ವರಿತಗೊಳಿಸಲು ಸಹಾಯವಾಗುತ್ತದೆ ಮತ್ತು ಇದು ಮಾನವ ಹಸ್ತಕ್ಷೇಪ ತಪ್ಪಿಸುತ್ತದೆ ಮತ್ತು ಅರ್ಜಿಗಳ ಪ್ರಕ್ರಿಯೆಯನ್ನು ಕಡಿಮೆ ಮಾಡುತ್ತದೆ. “ಯೋಜನೆಯ ಆರಂಭದೊಂದಿಗೆ, ಫ್ಲೈಟ್ ರೇಡಿಯೋ ಟೆಲಿಫೋನಿ ಆಪರೇಟರ್ಸ್ ಲೈಸೆನ್ಸ್ (ಎಫ್ಆರ್ಟಿಒಎಲ್) ಮತ್ತು ಇನ್ಸ್ಟ್ರುಮೆಂಟ್ ರೇಟಿಂಗ್ನೊಂದಿಗೆ ವಾಣಿಜ್ಯ ಪೈಲಟ್ ಪರವಾನಗಿ (ಸಿಪಿಎಲ್-ಎ) ವಿತರಣೆಯನ್ನು ಸ್ವಯಂಚಾಲಿತಗೊಳಿಸಲಾಗಿದೆ. ಅರ್ಜಿದಾರರು ಈಗ ನೋಂದಾಯಿಸಿಕೊಂಡ ನಂತರ, ತಮ್ಮ ಹಾರಾಟದ ವಿವರಗಳನ್ನು ಡಿಜಿಸಿಎ ಪೋರ್ಟಲ್ ಮೂಲಕ ಭರ್ತಿ ಮಾಡಲು ಸಾಧ್ಯವಾಗುತ್ತದೆ “ಎಂದು ಸಚಿವಾಲಯ ಪ್ರಕಟಣೆಯಲ್ಲಿ ತಿಳಿಸಿದೆ.
“ಚೀಫ್ ಫ್ಲೈಟ್ ಇನ್ಸ್ಟ್ರಕ್ಟರ್ಸ್ / Dy ಚೀಫ್ ಫ್ಲೈಟ್ ಇನ್ಸ್ಟ್ರಕ್ಟರ್ಗಳು ಹಾರಾಟದ ವಿವರವನ್ನು ಪರಿಶೀಲಿಸಿದ ನಂತರ, ಅರ್ಜಿದಾರರು ಸಿಪಿಎಲ್-ಎ ಆನ್ಲೈನ್ ವಿತರಣೆಗಾಗಿ ತಮ್ಮ ಅರ್ಜಿಗಳನ್ನು ಡಿಜಿಸಿಎಗೆ ಸಲ್ಲಿಸಬಹುದಾಗಿದೆ. ಅರ್ಜಿಯನ್ನು ಪರಿಶೀಲಿಸಿದ ನಂತರ ಡಿಜಿಸಿಎ ಎಲ್ಲಾ ಅಗತ್ಯ ವಿವರಗಳನ್ನು ಹೊಂದಿರುವ ಕ್ಯೂಆರ್ ಕೋಡ್ನೊಂದಿಗೆ ಪ್ಲಾಸ್ಟಿಕ್ ಕಾರ್ಡ್ ರೂಪದಲ್ಲಿ ಪರವಾನಗಿ ನೀಡುತ್ತದೆ “ಎಂದು ಹೇಳಿಕೆಯಲ್ಲಿ ತಿಳಿಸಲಾಗಿದೆ.
ಈ ಉಪಕ್ರಮದಿಂದ ಪ್ರತಿವರ್ಷ ಏಳುನೂರು ಆಕಾಂಕ್ಷಿ ಪೈಲಟ್ಗಳಿಗೆ ಅನುಕೂಲವಾಗಲಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.