ಮಂಗಳೂರು: ಅಲ್ಪಸಂಖ್ಯಾತರ ನೇತೃತ್ವದ ಸಂಸ್ಥೆಗಳ ಜೊತೆಗೆ ಎಲ್ಲಾ ಶಿಕ್ಷಣ ಸಂಸ್ಥೆಗಳಿಗೆ ಸಮಾನತೆ ನೀಡುವಂತೆ ಸಂವಿಧಾನದ 29 ಮತ್ತು 30 ನೇ ವಿಧಿಗಳಿಗೆ ತಿದ್ದುಪಡಿ ತರಬೇಕೆಂದು ವಿಶ್ವ ಹಿಂದೂ ಪರಿಷತ್ (ವಿಎಚ್ಪಿ) ಶುಕ್ರವಾರ ಒತ್ತಾಯಿಸಿದೆ. ಈ ವಿಧಿಯು ಎಲ್ಲಾ ಧಾರ್ಮಿಕ ಅಥವಾ ಭಾಷಾ ಅಲ್ಪಸಂಖ್ಯಾತರ ಶಿಕ್ಷಣ ಸಂಸ್ಥೆಗಳನ್ನು ಸ್ಥಾಪಿಸುವ ಮತ್ತು ನಿರ್ವಹಿಸುವ ಹಕ್ಕನ್ನು ರಕ್ಷಿಸುತ್ತದೆ. ಆದರೆ ಈ ವಿಧಿಯು ಬಹುಸಂಖ್ಯಾತ ಸಮುದಾಯವು ನಿರ್ವಹಿಸುವ ಶಿಕ್ಷಣ ಸಂಸ್ಥೆಗಳಿಗೆ ಅದೇ ರೀತಿಯ ಹಕ್ಕುಗಳನ್ನು ನಿರಾಕರಿಸುತ್ತದೆ, ಹೀಗಾಗಿ ಇದು ಅಸಂವಿಧಾನಿಕವಾಗಿದೆ ಎಂದು ವಿಎಚ್ಪಿ ಪ್ರತಿಪಾದಿಸಿದೆ.
ಮಂಗಳೂರಿನಲ್ಲಿ ನಡೆದ ನಾಲ್ಕು ದಿನಗಳ ವಿಶ್ವ ಹಿಂದೂ ಪರಿಷತ್ತಿನ ಕೇಂದ್ರೀಯ ವಿಶ್ವಸ್ಥ ಮಂಡಳಿ ಮತ್ತು ಪ್ರಬಂಧ ಸಮಿತಿಯ ಸಂಯುಕ್ತ ಬೈಠಕ್ ಉದ್ಘಾಟನೆಯ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ವಿಎಚ್ಪಿಯ ಅಖಿಲ ಭಾರತ ಜಂಟಿ ಪ್ರಧಾನ ಕಾರ್ಯದರ್ಶಿ ಸುರೇಂದ್ರ ಕುಮಾರ್ ಜೈನ್ ಅವರು, ಅಲ್ಪಸಂಖ್ಯಾತರ ಅಸ್ತಿತ್ವದಲ್ಲಿರುವ ಹಕ್ಕುಗಳಿಗೆ ತೊಂದರೆಯಾಗದಂತೆ ವಿಧಿಗೆ ತಿದ್ದುಪಡಿ ತರಬೇಕು. ಹಿಂದೂ ಧರ್ಮಕ್ಕೆ ಅನುಗುಣವಾದ ಪಠ್ಯಕ್ರಮ ಮತ್ತು ಮೌಲ್ಯಗಳನ್ನು ಕಲಿಸಲು ಅನುಮತಿಸಬೇಕು, ವಿಧಿಯ ನಿಬಂಧನೆಗಳು ಎಲ್ಲರಿಗೂ ಸಾರ್ವತ್ರಿಕವಾಗಿ ಅನ್ವಯವಾಗಬೇಕು ಎಂದು ಹೇಳಿದರು.
ಧಾರ್ಮಿಕ ಮುಖಂಡರು, ಮೌಲ್ವಿಗಳು ಮತ್ತು ಪುರೋಹಿತರ ವೇತನವನ್ನು ಹೆಚ್ಚಿಸಿದ ಆಂಧ್ರಪ್ರದೇಶ ಸರ್ಕಾರವು, ಹಿಂದೂ ಪುರೋಹಿತರನ್ನು ಇದರಿಂದ ಹೊರಗಿಟ್ಟಿದೆ. ಹಿಂದೂ ದೇವಾಲಯಗಳನ್ನು ತನ್ನ ಸ್ವಾಧೀನಕ್ಕೆ ತೆಗೆದುಕೊಳ್ಳಲು ಅದು ಮುಂದಾಗಿದೆ. ವೋಟ್ ಬ್ಯಾಂಕಿಗಾಗಿ ಅದು ಈ ರೀತಿ ಮಾಡುತ್ತಿದೆ. ಇದರ ವಿರುದ್ಧ ನಾವು ಪ್ರಸ್ತಾವನೆ ಅಂಗೀಕರಿಸುತ್ತೇವೆ, ಚಳುವಳಿಯನ್ನು ರೂಪಿಸುತ್ತೇವೆ, ಕ್ರಿಯಾ ಯೋಜನೆಯನ್ನು ರೂಪಿಸುತ್ತದೆ ಎಂದು ಜೈನ್ ಹೇಳಿದ್ದಾರೆ.
ಮಹಿಳೆಯರ ಮೇಲಿನ ಹೆಚ್ಚುತ್ತಿರುವ ದೌರ್ಜನ್ಯ ಬಗ್ಗೆ ಕಳವಳ ವ್ಯಕ್ತಪಡಿಸಿದ ಜೈನ್, ಲೈಂಗಿಕ ದೌರ್ಜನ್ಯ ಪ್ರಕರಣಗಳು ಹೆಚ್ಚುತ್ತಿವೆ, ಇದು ಮಹಿಳೆಯರಿಗೆ ಅಸುರಕ್ಷಿತ ವಾತಾವರಣಕ್ಕೆ ಕಾರಣವಾಗಿದೆ. ಪುರುಷ-ಮಹಿಳೆ ಸಂಬಂಧವನ್ನು ವಿಕೃತ ಮನಸ್ಥಿತಿಯೊಂದಿಗೆ ನೋಡಲಾಗುತ್ತಿದೆ, ಈ ಸಭೆಯು ಅದನ್ನು ಪರಿಹರಿಸಲು ಕ್ರಿಯಾ ಯೋಜನೆಯನ್ನು ರೂಪಿಸುತ್ತದೆ ಎಂದು ಹೇಳಿದರು. ಈ ಕಾರ್ಯವನ್ನು ಸರ್ಕಾರಕ್ಕೆ ಮಾತ್ರ ಮಾಡಲಾಗುವುದಿಲ್ಲ, ಮಹಿಳೆಯರನ್ನು ವಸ್ತುವಾಗಿ ನೋಡದಂತೆ ಸಮಾಜವು ಜಾಗೃತಿ ವಹಿಸಬೇಕು ಎಂದು ಹೇಳಿದರು.
ರಾಷ್ಟ್ರೀಯ ಜನಸಂಖ್ಯಾ ನೋಂದಣಿ (ಎನ್ಪಿಆರ್) ಭಾರತಕ್ಕೆ ಹೊಸದಲ್ಲ. ಪೌರತ್ವ ತಿದ್ದುಪಡಿ ಕಾಯ್ದೆ ಮತ್ತು ನಾಗರಿಕರ ರಾಷ್ಟ್ರೀಯ ನೋಂದಣಿ (ಎನ್ಆರ್ಸಿ) ವಿಷಯದಲ್ಲಿ ಮುಸ್ಲಿಮರನ್ನು ಪ್ರಚೋದಿಸಲಾಗಿದೆ ಎಂಬುದು ಸ್ಪಷ್ಟವಾಗಿದೆ ಎಂದು ಅವರು ಹೇಳಿದರು.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.