ಪಾಲ್ತಾಡಿ:ಸವಣೂರಿನ ಸುತ್ತಮುತ್ತ ಹೆಚ್ಚುತ್ತಿರುವ ಕಳ್ಳತನ ಪ್ರಕರಣಗಳನ್ನು ಬೇಧಿಸಲು ಪೊಲೀಸ್ ಇಲಾಖೆ ವಿಫಲವಾಗಿರುವ ಹಿನ್ನೆಲೆಯಲ್ಲಿ ,ಸವಣೂರಿಗೆ ಹೊರಠಾಣೆ ಮಂಜೂರು ಮಾಡುವಂತೆ ಸವಣೂರುನ ವರ್ತಕರ ಸಂಘದ ನೇತೃತ್ವದಲ್ಲಿ ವಿವಿಧ ಸಂಘ ಸಂಸ್ಥೆಗಳ ಸಹಯೋಗದಲ್ಲಿ ಸವಣೂರು ಜಂಕ್ಷನ್ನಲ್ಲಿ ಧರಣಿ ನಡೆಸುವ ಮೂಲಕ ಪ್ರತಿಭಟನೆ ನಡೆಸಿದರು.
ಪ್ರತಿಭಟನೆಯನ್ನುದ್ದೇಶಿಸಿ ಮಾತನಾಡಿದ ಸವಣೂರು ಪ್ರಾ.ಕೃ.ಪ.ಸ.ಸಂಘದ ನಿರ್ದೇಶಕ ಮಹಾಬಲ ಶೆಟ್ಟಿ ಕೊಮ್ಮಂಡ,ರಾಜ್ಯದ ಪೊಲೀಸ್ ಇಲಾಖೆಗೆ ದೇಶದಲ್ಲಿ ಉತ್ತಮ ಹೆಸರು ಇದೆ.ಆದರೆ ಕಡಬ ಠಾಣಾ ವ್ಯಾಪ್ತಿಯ ಸವಣೂರಿನಲ್ಲಿ ಕಳೆದ 2 ವರ್ಷಗಳಿಂದ ನಿರಂತರ ಕಳ್ಳತನಗಳು ನಡೆಯುತ್ತಿದ್ದರೂ ಪೊಲೀಸ್ ಇಲಾಖೆ ಕೈಕಟ್ಟಿ ಕೂತಿದೆ.ಒಬ್ಬನೇ ಒಬ್ಬ ಆರೋಪಿಯನ್ನು ಬಂದಿಸಿಲ್ಲ.ಇದು ಇಲಾಖೆಯ ನಿರ್ಲಕ್ಷಯವನ್ನು ಎತ್ತಿ ತೋರಿಸುತ್ತದೆ ಎಂದರು.
ವರ್ತಕರ ಸಂಘದ ಗೌರವಾಧ್ಯಕ್ಷ ಸವಣೂರು ಕೆ.ಸೀತಾರಾಮ ರೈ ಮಾತನಾಡಿ,ನಮ್ಮ ಹೋರಾಟ ಯಾರದೇ ವಿರುದ್ದ ಅಲ್ಲ.ನಮ್ಮ ಅವಶ್ಯಕತೆಗಾಗಿ ನಾವು ಹೋರಾಟ ಮಾಡುತ್ತಿದ್ದೇವೆ.ಸುಮಾರು 20ವರ್ಷಗಳ ಹಿಂದೆ ಸವಣೂರಿನಲ್ಲಿ ಪೊಲೀಸ್ ಸಿಬಂದಿಗಳು ಗಸ್ತು ತಿರುಗುತ್ತಿದ್ದರು,ಆದರೆ ಕಳೆದ ಕೆಲ ವರ್ಷಗಳಿಂದ ಗಸ್ತು ತಿರುಗುವ ಕೆಲಸ ನಡೆಯುತ್ತಿಲ್ಲಾದರೆ ಅಂಗಡಿಗಳಲ್ಲಿ ಇಟ್ಟಿರುವ ಪೊಲೀಸ್ ಬೀಟ್ ಪುಸ್ತಕದಲ್ಲಿ ಸಹಿಮಾಡಿರುವುದು ಕಾಣುತ್ತಿದೆ.ಎಷ್ಟು ಹೊತ್ತಿನಲ್ಲಿ ಬಂದು ಗಸ್ತು ತಿರುಗುತ್ತಾರೆ ಎನ್ನವುದೇ ಗೊಂದಲವಾಗಿದೆ.ಕಳ್ಳತನ ಪ್ರಕರಣಗಳನ್ನು ಪೊಲೀಸರೇ ಪತ್ತೆಹಚ್ಚಬೇಕು ಆದರೆ ನಾವು ಈಗ ಕಳ್ಳರ ಪತ್ತೆಗೆ ಪ್ರತಿಭಟನೆ ನಡೆಸುವಂತ ದುರ್ಗತಿ ಬಂದಿರುವುದು ವಿಷಾದನೀಯ ಎಂದರು.
ತಾ.ಪಂ.ಉಪಾಧ್ಯಕ್ಷ ದಿನೇಶ್ ಮೆದು ಮಾತನಾಡಿ,ಕಡಬ ಠಾಣೆ ಸವಣೂರಿನಿಂದ ಸುಮಾರು 32 ಕಿ.ಮೀ ದೂರವಿದೆ.ಪೊಲಿಶರು ಅಲ್ಲಿಂದ ಸವಣೂರು ತಲುಪುವಾಗ ಕಳ್ಳರು ಸುರಕ್ಷಿತ ಜಾಗ ತಲುಪುತ್ತಾನೆ.ಈ ನಿಟ್ಟಿನಲ್ಲಿ ಸವಣೂರಿನಲ್ಲಿ ಹೊರಠಾಣೆ ಅಗತ್ಯ ಅಗತ್ಯ.ಯಾವುದೇ ಕಾರಣಕ್ಕೂ ಬೆಳ್ಳಾರೆ ಠಾಣೆಗೆ ಸವಣೂರನ್ನು ಸೇರ್ಪಡೆ ಮಾಡುವುದು ಬೇಡ ಮೊದಲೇ ಈ ಭಾಗದ ಜನತೆ ಅತಂತ್ರ ಸ್ಥಿತಿಯಲ್ಲಿದ್ದೇವೆ.ಇನ್ನೂ ಆ ಸ್ಥಿತಿಗೆ ದೂಡುವುದು ಬೇಡ ಎಂದರು.
ಸವಣೂರು ಗ್ರಾ.ಪಂ.ಅಧ್ಯಕ್ಷೆ ಇಂದಿರಾ ಕಲ್ಲೂರಾಯ ಮಾತನಾಡಿ,ಸವಣೂರು ಭಾಗದಲ್ಲಿ ನಡೆಯುತ್ತಿರುವ ಕಳ್ಳತನ ಪ್ರಕರಣಗಳಲ್ಲಿ ಆರೋಪಿಗಳ ಪತ್ತೆ ಸಾಧ್ಯವಾಗದೆ ಇರುವುದು ಇಲಾಖೆಯ ನಿರ್ಲಕ್ಷ್ಯ ಎತ್ತಿತೋರಿಸುತ್ತದೆ.ಕೂಡಲೇ ಆರೋಪಿಗಳ ಬಂದಿಸಿ ಜನತೆಗೆ ನ್ಯಾಯ ನೀಡುವ ಕೆಲಸ ಪೊಲೀಸ್ ಇಲಾಖೆಯಿಂದ ಆಗಬೇಕಿದೆ.ಜನತೆಯ ಹೋರಾಟಕ್ಕೆ ಗ್ರಾ.ಪಂ.ನ ಸಂಪೂರ್ಣ ಸಹಕಾರ ನೀಡಲಾಗುವುದು.
ಸವಣೂರು ವರ್ತಕರ ಸಂಘದ ಪ್ರಧಾನ ಕಾರ್ಯದರ್ಶಿ ಸುರೇಶ್ ರೈ ಸೂಡಿಮುಳ್ಳು ಮಾತನಾಡಿ ,ನಮ್ಮ ಹೋರಾಟಕ್ಕೆ ಬೆಲೆ ಸಿಗದಿದ್ದರೆ ಜನಪ್ರತಿನಿಧಿಗಳ ಸಹಕಾರದಲ್ಲಿ ಹೋರಾಟ ತೀವ್ರಗೊಳಿಸಲಾಗುವುದು.ಈ ಪ್ರತಿಭಟನೆ ಯಾರದೇ ವಿರುದ್ದ ಅಲ್ಲ ನಮ್ಮ ಬೇಡಿಕಯನ್ನು ಪಡೆದುಕೊಳ್ಳಲು ಪ್ರತಿಭಟನೆ ಅನಿವಾರ್ಯವಾಗಿದೆ.ಇಲ್ಲಿ ಪ್ರತಿಭಟನೆಗೆ ಪೊಲೀಸರೇ ಕಾರಣ.ಕಳ್ಳರ ಪತ್ತೆಹಚ್ಚಿದ್ದರೆ ಪ್ರತಿಭಟಿಸುವ ಅವಶ್ಯಕತೆ ಇರಲಿಲ್ಲ .ಸವಣೂರಿನ ಜನತೆಯ ತಾಳ್ಮೆ, ಸಹನೆಯನ್ನು ಅಸಮರ್ಥತೆ ಎಂದು ತಿಳಿದು ಕೊಳ್ಳಬೇಡಿ.ಪೊಲೀಸ್ ಇಲಾಖೆಗೆ ಕಳ್ಳರ ಪತ್ತೆ ಸಾಧ್ಯವಾಗದಿದ್ದರೆ ಬಹಿರಂಗವಾಗಿ ಹೇಳಲಿ.ಸವಣೂರಿನಲ್ಲಿ ರಾತ್ರಿ ಗಸ್ತು ತಿರುಗುವುದಾದರೆ ಇಲ್ಲಿನ ಯುವಕರ ತಂಡ ನಿಮಗೆ ಸಹಕಾರ ನೀಡಲಿದೆ ಎಂದರು.
ಗ್ರಾ.ಪಂ.ಉಪಾಧ್ಯಕ್ಷ ರವಿಕುಮಾರ್ ,ಸದಸ್ಯರಾದ ಅಬ್ದುಲ್ ರಝಾಕ್ ,ಗಿರಿಶಂಕರ ಸುಲಾಯ, ಗ್ರಾ.ಪಂ.ಮಾಜಿ ಸದಸ್ಯ ಸುದರ್ಶನ್ ನಾಕ್ ಕಂಪ, ಗ್ರಾ.ಪಂ.ಮಾಜಿ ಉಪಾಧ್ಯಕ್ಷ ರಾಕೇಶ್ ರೈ ಕೆಡೆಂಜಿ ,ಗ್ರಾ.ಪಂ.ಸದಸ್ಯ ಎಂ.ಎ.ರಫೀಕ್ ,ಸವಣೂರು ಪ್ರಾ.ಕೃ.ಸ.ಸಂಘದ ಉಪಾಧ್ಯಕ್ಷ ಗಣೇಶ್ ನಿಡ್ವಣ್ಣಾಯ ,ನಿರ್ದೇಶಕ ಸೋಮನಾಥ ಕನ್ಯಾಮಂಗಲ,ಮುಖ್ಯ ಕಾರ್ಯನಿರ್ವಹನಾಧಿಕಾರಿ ಚಂದ್ರಶೇಖರ್ ಪಿ,ನಾಗರಾಜ ನಿಡ್ವಣ್ಣಾಯ , ಸಾಮಾಜಿಕ ಕಾರ್ಯಕರ್ತ ಲಕ್ಷೀಶ ಗಾಂಭೀರ ,ನರಸಿಂಹ ಪ್ರಸಾದ್ ಪಾಂಗಾಣ್ಣಾ ಅಶ್ರಫ್ ಕಾಸಿಲೆ ,ರು ಮಾತನಾಡಿದರು.
ಪ್ರತಿಭಟನ ಸ್ಥಳಕ್ಕೆ ಬಂದ ಕಡಬ ತಹಶಿಲ್ದಾರ್ ಲಿಂಗಯ್ಯ ಆಗಮಿಸಿ ಮನವಿ ಸ್ವೀಕರಿಸಿ ಮಾತನಾಡಿ,ಇಲ್ಲಿನ ಜನತೆಯ ಮನವಿಯನ್ನು ಜಿಲ್ಲಾಧಿಕಾರಿಗಳಿಗೆ ಕಳುಹಿಸಲಾಗುವುದು ಎಂದರು. ಪ್ರತಿಭಟನೆಯಲ್ಲಿ ವರ್ತಕರ ಸಂಘದ ಅಧ್ಯಕ್ಷ ರಫೀಕ್ ಅರ್ತಿಕೆರೆ,ಉಪಾಧ್ಯಕ್ಷ ಕರುಣಾಕರ ಗೌಡ,ಕೋಶಾಧಿಕಾರಿ ಮೋಹನ್ ರೈ ಕೆರೆಕ್ಕೊಡಿ ,ಗೌರವ ಸಲಹೆಗಾರ ಸುಂದರ ರೈ ಹಾಗೂ ಸವಣೂರು ಗ್ರಾ.ಪಂ.ಸದಸ್ಯರು,ವರ್ತಕರು,ವಿವಿಧ ಸಂಘ ಸಂಸ್ಥೆಗಳ ಪ್ರಮುಖರು,ರಿಕ್ಷಾ ಚಾಲಕರು, ಸಾರ್ವಜನಿಕರು ಭಾಗವಹಿಸಿದ್ದರು.
ರಸ್ತೆ ತಡೆ ನಡೆಸಲಾಗಿತ್ತು.ಈ ಸಂಧರ್ಭದಲ್ಲಿ ಕಾಣಿಯೂರು,ಬೆಳ್ಳಾರೆ,ಪುತ್ತೂರಿನಿಂದ ಸವಣೂರಿಗೆ ಬರುವ ಎಲ್ಲಾ ವಾಹನಗಳನ್ನು ತಡೆಹಿಡಿಯಲಾಯಿತು.ಪ್ರತಿಭಟನೆ ಸಂಧರ್ಭದಲ್ಲಿ ವಿವಿಧ ಘೋಷಣೆಗಳನ್ನು ಕೂಗುವ ಮೂಲಕ ಇಲಾಖೆಯನ್ನು ಎಚ್ಚರಿಸಿದರು.ಸವಣೂರು ವರ್ತಕರ ಸಂಘದ ಪ್ರಧಾನ ಕಾರ್ಯದರ್ಶಿ ಸುರೇಶ್ ರೈ ಸೂಡಿಮುಳ್ಳು ಸ್ವಾಗತಿಸಿ,ಕಾರ್ಯಕ್ರಮ ನಿರೂಪಿಸಿದರು.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.