ನವದೆಹಲಿ : ಭಾರತೀಯ ವಾಯುಸೇನೆಯಲ್ಲಿ 35 ವರ್ಷಗಳ ಕಾಲ ನಿರಂತರವಾಗಿ ಸೇವೆ ಸಲ್ಲಿಸುತ್ತಿರುವ ಮಿಗ್ -27 ಯುದ್ಧ ವಿಮಾನಗಳ ಸೇವೆಗಳಿಗೆ ವಿದಾಯ ಹೇಳಲು ಭಾರತೀಯ ವಾಯುಸೇನೆ ನಿರ್ಧರಿಸಿದೆ. 87 ನೇ ವಾಯುಪಡೆಯ ದಿನದಂದು ವಾಯುಪಡೆಯು ಈ ಯುದ್ಧ ವಿಮಾನಗಳಿಗೆ ಪ್ರೀತಿ ಉತ್ಸಾಹಗಳ ಮಧ್ಯೆ ವಿದಾಯ ಹೇಳಲಾಗಿದೆಯಾದರೂ, ಭಾರತೀಯ ವಾಯುಪಡೆಯ ಮೂಲಗಳ ಪ್ರಕಾರ, ಔಪಚಾರಿಕವಾಗಿ ಡಿಸೆಂಬರ್ 31 ರಂದು ಇವುಗಳನ್ನು ಸೇವೆಯಿಂದ ನಿವೃತ್ತಿಗೊಳಿಸಲಾಗುವುದು. ಇದಕ್ಕಾಗಿ ಜೋಧಪುರ ವಾಯುನೆಲೆಯಲ್ಲಿ ವಿದಾಯ ಸಮಾರಂಭವನ್ನೂ ಆಯೋಜಿಸಲಾಗುತ್ತಿದೆ.
ಈ ವಿದಾಯ ಸಮಾರಂಭದಲ್ಲಿ ವಾಯುಪಡೆಯ ಸ್ಕ್ವಾಡ್ರನ್ ಅಧಿಕಾರಿಗಳಲ್ಲದೆ, ಈ ಯುದ್ಧವಿಮಾನಗಳೊಂದಿಗೆ ನಂಟು ಹೊಂದಿರುವ ಹಾಲಿ ಹಾಗೂ ಸೇವಾ ನಿವೃತ್ತ ಸಿಬ್ಬಂದಿಗಳು ಕೂಡ ಭಾಗವಹಿಸಲಿದ್ದಾರೆ.
ಏಳು ಮಿಗ್ -27 ವಿಮಾನಗಳ ಕೊನೆಯ ಸ್ಕ್ವಾಡ್ರನ್ ಡಿಸೆಂಬರ್ 27 ರಂದು ಜೋಧಪುರ್ ವಾಯುನೆಲದಿಂದ ಕೊನೆಯ ಬಾರಿಗೆ ಹಾರಲಿವೆ.
ಸೋವಿಯತ್ ಮೂಲದ ಈ ಮಿಗ್ -27 ಯುದ್ಧ ವಿಮಾನಗಳನ್ನು 1984 ರಲ್ಲಿ ಭಾರತೀಯ ವಾಯುಪಡೆಗೆ ಸೇರಿಸಲಾಯಿತು. ಮತ್ತು ಮೂರು ದಶಕಗಳಿಗಿಂತಲೂ ಹೆಚ್ಚು ಕಾಲ ದೇಶದ ಅದ್ಭುತ ಸೇವೆಯ ಸಮಯದಲ್ಲಿ, ಈ ವಿಮಾನಗಳು ಕಾರ್ಗಿಲ್ ಸೇರಿದಂತೆ ವಿವಿಧ ಅಭಿಯಾನಗಳಲ್ಲಿ ಇವುಗಳು ತಮ್ಮ ಸಾಮರ್ಥ್ಯವನ್ನು ತೋರ್ಪಡಿಸಿವೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.