ವಾಟ್ಸಪ್ ಮೂಲಕ ತೇಲಿಬಂದ ಒಂದು ಸಂದೇಶವಿದು :
“ನನ್ನ ಅಜ್ಜಿಗೆ ಪೌರತ್ವ ತಿದ್ದುಪಡಿ ಕಾಯ್ದೆ ಬಗ್ಗೆ ಒಂದು ಚೂರೂ ಗೊತ್ತಿಲ್ಲ. ಆದರೂ ಆ ಅಜ್ಜಿ ನಿನ್ನೆ ಕೊಟ್ಟ ಉತ್ತರವನ್ನು ಒಮ್ಮೆ ಓದಿ.
ಮನೆ ಪಕ್ಕದ ಸ್ವಲ್ಪ ಜಾಗದಲ್ಲಿ ನಮ್ಮ ಅಜ್ಜಿ ಬೆಳೆಸಿದ ಒಂದು ಕೈದೋಟ ಇದೆ. ಅಲ್ಲಿ ಅಪರೂಪದ ಹೂವಿನ ಮತ್ತು ತರಕಾರಿ ಗಿಡಗಳನ್ನು ಬೆಳೆಸಿ, ಅವುಗಳಿಗೆ ಕಾಲಕ್ಕೆ ತಕ್ಕಂತೆ ಗೊಬ್ಬರ, ನೀರು, ಉಣಿಸಿ, ರಕ್ಷಣೆಗಾಗಿ ಬೇಲಿ ಹಾಕಿದ್ದಲ್ಲದೆ ಉಪಯೋಗವಿಲ್ಲದ ಕೆಟ್ಟ ಜಾತಿಯ ಹಾನಿಕಾರದ ಕಳೆಯನ್ನು ಮುಲಾಜಿಲ್ಲದೆ ಕಿತ್ತು ಬೇಲಿಯಿಂದಾಚೆ ಎಸೆಯುವುದು ಅಜ್ಜಿಯ ನಿತ್ಯ ಕಾಯಕ.
ನಿನ್ನೆ ಸುಮ್ಮನೆ ಕೇಳಿದೆ: “ಅಜ್ಜಿ ಕಳೆಯ ಸಸಿಗಳು ಕೂಡ ಗಿಡಗಳೇ ಅಲ್ಲವೆ ? ಪಾಪ ಅವನ್ಯಾಕೆ ಕಿತ್ತು ಎಸಿತಿಯಾ ?” ಅಜ್ಜಿ ಹೇಳಿದ್ದು “ನಿಂಗೇನು ತಲೆ ಕೆಟ್ಟಿಲ್ಲ ತಾನೆ ? ಅವನ್ನು ಇಲ್ಲಿ ಬೆಳೆಯೋಕೆ ಬಿಟ್ಟರೆ ಮನೆಗೆ ಬೇಕಾದ ಹೂ ಹಣ್ಣಿನ ಗಿಡಗಳನ್ನು ಬೆಳೆಯೋಕೆ ಬಿಡ್ತವಾ ಈ ರಾಕ್ಷಸಸಂತಾನದ ಕಳೆಗಳು. ಇಂತಹ ಕೆಟ್ಟ ಗಿಡಗಳಿಗೆ ಬರವಿಲ್ಲ. ಎಲ್ಲಿ ಬೇಕಾದ್ರೂ ಬೆಳಿತಾವೆ. ಆದರೆ ಅಪರೂಪದ ತಳಿಯ ಹೂಗಿಡಗಳನ್ನು ಅನಾದಿ ಕಾಲದಿಂದಲೂ ಕಾಪಾಡಿಕೊಂಡು ಬಂದಿದ್ದೇವೆ. ಅವನ್ನು ನಮ್ಮ ನೆಲದಲ್ಲಿ ನಾವಲ್ಲದೆ ಬೇರೆ ಯಾರು ಉಳಿಸಿ ಬೆಳೆಸಲು ಸಾಧ್ಯ?”
ಎಷ್ಟು ಸಮಂಜಸ ಉತ್ತರ ಅಲ್ವಾ? ಈ ಸಾಮಾನ್ಯ ಜ್ಞಾನವು ರಾಷ್ಟ್ರದ ಗೃಹಮಂತ್ರಿಗಳಿಂದ ಹಿಡಿದು ದೇಶದ ಮೂಲೆಯಲ್ಲಿರುವ ಕುಗ್ರಾಮದ ಎರಡನೇ ತರಗತಿ ಓದಿದ ನನ್ನ ಅಜ್ಜಿಯವರೆಗೂ ಅರ್ಥವಾಗಿದೆ. ಆದರೆ ವಿಶ್ವವಿದ್ಯಾಲಯಗಳಲ್ಲಿ ಓದುತ್ತಿರುವ, ರಸ್ತೆಗಿಳಿದು ಪೌರತ್ವ ಕಾಯ್ದೆ ವಿರುದ್ಧ ಘೋಷಣೆ ಕೂಗುವವರಿಗೆ ಈ ವಿಷಯದ ಸೂಕ್ಷ್ಮತೆ ಅರ್ಥ ಆಗದಿರುವುದು ದುರದೃಷ್ಟಕರ.
ಒಂದು ಸಣ್ಣ ಕೈದೋಟದಲ್ಲಿರುವ ಸಸಿಗಳ ಬಗ್ಗೆ ಅಜ್ಜಿ ಇಷ್ಟು ಕಾಳಜಿ ತೋರಿಸುತ್ತಿರುವಾಗ ಇನ್ನು ದೇಶದ ಭದ್ರತೆಯ ವಿಚಾರಕ್ಕೆ ಸಂಬಂಧಪಟ್ಟಂತೆ ಒಂದು ಸರಕಾರ ಇಷ್ಟಾದರೂ ಕಾಳಜಿ ವಹಿಸಲೇ ಬೇಕಲ್ಲವೆ?
———————————————————–
ಈ ಕೆಲವು ಸತ್ಯಸಂಗತಿಗಳನ್ನು ಓದಿ:
🔹 ಉತ್ತರ ಕೊರಿಯಾ ಗಡಿಯನ್ನು ಕಾನೂನುಬಾಹಿರವಾಗಿ ದಾಟಿದರೆ (ಕದ್ದು ಒಳನುಸುಳಿದರೆ) ಅಂಥವರಿಗೆ ೧೨ ವರ್ಷ ಗಾಳಿಬೆಳಕುಗಳಿಲ್ಲದ ಮುಚ್ಚಿದ ಸೆರೆಮನೆಯಲ್ಲಿ ಕಠಿಣ ಶಿಕ್ಷೆ ವಿಧಿಸಲಾಗುತ್ತದೆ.
🔹 ಅಫಘಾನಿಸ್ಥಾನದ ಗಡಿಯನ್ನು ಅನುಮತಿಯಿಲ್ಲದೆ ಪ್ರವೇಶಿಸಿದರೆ ಅಂಥವರನ್ನು ಅಲ್ಲೇ ಗುಂಡು ಹಾಕಿ ಸಾಯಿಸಲಾಗುತ್ತದೆ.
🔹 ಸೌದಿ ಅರೇಬಿಯಾದ ಗಡಿಯೊಳಗೆ ಕಾನೂನು ಉಲ್ಲಂಘಿಸಿ ನುಸುಳಿದರೆ ಜೈಲಿಗೆ ಹಾಕಲಾಗುತ್ತದೆ.
🔹 ಚೀನಾ ಗಡಿಯನ್ನು ಉಲ್ಲಂಘಿಸಿ ದಾಟಿದರೆ ನಿಮ್ಮನ್ನು ಅಪಹರಿಸಿ, ನಿಮ್ಮ ಪತ್ತೆಯೇ ಇಲ್ಲದಂತೆ ಮಾಡಲಾಗುತ್ತದೆ.
🔹 ಕ್ಯೂಬಾ ಗಡಿಯನ್ನು ಅಕ್ರಮವಾಗಿ ದಾಟಿದರೆ ನೀವು ಸಾಯುವತನಕ ಅಲ್ಲಿನ ಜೈಲಿನಲ್ಲಿ ಕೊಳೆಯುತ್ತಾ ಬಿದ್ದಿರಬೇಕಾಗುತ್ತದೆ.
🔹 ಬ್ರಿಟನ್ ಗಡಿಯನ್ನು ಅಕ್ರಮವಾಗಿ ದಾಟಿದರೆ ಬಂಧಿಸಿ, ವಿಚಾರಣೆಗೊಳಪಡಿಸಿ ಜೈಲು ಶಿಕ್ಷೆ ವಿಧಿಸಲಾಗುತ್ತದೆ. ಬಳಿಕ ಗಡಿಯಿಂದಾಚೆ ಅಟ್ಟಲಾಗುತ್ತದೆ.
🔹 ಆದರೆ ಭಾರತದ ಗಡಿಯೊಳಗೆ ಅಕ್ರಮವಾಗಿ ನುಸುಳಿದರೆ ಅಂಥವರಿಗೆ ರೇಶನ್ ಕಾರ್ಡ್, ಪಾಸ್ಪೋರ್ಟ್, ಡ್ರೈವಿಂಗ್ ಲೈಸೆನ್ಸ್, ವೋಟರ್ ಐಡಿ ಕಾರ್ಡ್, ಸಬ್ಸಿಡಿ ದರದಲ್ಲಿ ಸರಕಾರಿ ನಿವೇಶನ, ಮನೆ ಖರೀದಿಸಲು ಸಾಲ, ಉಚಿತ ಶಿಕ್ಷಣ, ಉಚಿತ ಆರೋಗ್ಯ ಸೇವೆ … ಇನ್ನೂ ಏನೇನೋ ಸಿಗುತ್ತವೆ. ಯಾರು ಬೇಕಾದರೂ ಈ ದೇಶಕ್ಕೆ ಯಾವಾಗ ಬೇಕಾದರೂ ಒಳನುಸುಳಿ ಎಲ್ಲಿ ಬೇಕಾದರೂ ವಾಸಿಸಬಹುದು. ಏನು ಬೇಕಾದರೂ ಮಾಡಬಹುದು.
ಇದು ಇದುವರೆಗಿದ್ದ ಪರಿಸ್ಥಿತಿ. ಭಾರತ- ಪಾಕ್ ಕ್ರಿಕೆಟ್ ಪಂದ್ಯ ವೀಕ್ಷಿಸಲೆಂದು ಪಾಕಿಸ್ಥಾನದಿಂದ ಬಂದವರು ತಮ್ಮ ವೀಸಾ ಅವಧಿ ಮುಗಿದರೂ ಮರಳಿ ಹೋಗದೆ ಇಲ್ಲೇ ಶಿವಾಜಿ ನಗರದಲ್ಲೋ, ಭಟ್ಕಳದಲ್ಲೋ, ಕಾಸರಗೋಡಿನಲ್ಲೋ ಠಿಕಾಣಿ ಹೂಡುತ್ತಿದ್ದರು. ಭಾರತವೆಂದರೆ ಅಂಥವರ ಪಾಲಿಗೆ ಒಂದು ಧರ್ಮಛತ್ರವೇ ಆಗಿಬಿಟ್ಟಿತ್ತು. ಕೇಂದ್ರದಲ್ಲಿ ಕಾಂಗ್ರೆಸ್ ಆಡಳಿತವಿದ್ದಷ್ಟು ಕಾಲ ಇಂತಹ ನುಸುಳುಕೋರರಿಗೆ ಭಾರತ ಒಂದು ಸ್ವರ್ಗ ಸಮಾನ ಅಡಗುತಾಣವೇ ಆಗಿತ್ತು.
ಆದರೆ ಇನ್ನು ಮುಂದೆ ಹೀಗಾಗಕೂಡದು. ಕೋಟಿಗಟ್ಟಲೆ ನುಸುಳುಕೋರರು, ಅಕ್ರಮ ವಲಸಿಗರಿಂದ ದೇಶ ವಿಷಮ ಸ್ಥಿತಿ ಎದುರಿಸುವಂತಾಗಬಾರದು ಎಂದು ಮೋದಿ ಸರಕಾರ ಪೌರತ್ವ ತಿದ್ದುಪಡಿ ಕಾಯ್ದೆ ಜಾರಿಗೆ ತಂದಿದೆ. ಈ ಕಾಯ್ದೆ ಲೋಕಸಭೆ, ರಾಜ್ಯಸಭೆಗಳೆರಡರಲ್ಲೂ ಅನುಮೋದನೆಗೊಂಡು ರಾಷ್ಟ್ರಪತಿ ಗಳ ಅಂಕಿತವೂ ಬಿದ್ದಿದೆ. ಇವೆಲ್ಲವೂ ಪ್ರಜಾತಾಂತ್ರಿಕ ಪದ್ಧತಿಯ ಮೂಲಕವೇ ಆಗಿರುವಂತಹದು. ಹೀಗಿದ್ದರೂ ಕೆಲವು ಸ್ಥಾಪಿತ ಹಿತಾಸಕ್ತಿಗಳು ದೇಶದೆಲ್ಲೆಡೆ ಜನರನ್ನು ಹಾದಿ ತಪ್ಪಿಸಿ, ಹಿಂಸಾಚಾರಕ್ಕೆ ಪ್ರಚೋದಿಸಿ, ಕಾಯ್ದೆ ಜಾರಿಯಿಂದಲೇ ದೇಶದಲ್ಲಿ ಅಶಾಂತಿ ಉಂಟಾಗಿದೆ ಎಂದು ಬಿಂಬಿಸಲು ಹೊರಟಿರುವುದು ಅತ್ಯಂತ ಖಂಡನೀಯ.
ದೆಹಲಿಯಲ್ಲಿ ಸಿಎಎ ಕಾಯ್ದೆ ವಿರುದ್ಧ ಪ್ರತಿಭಟನೆ, ಹಿಂಸಾಚಾರಕ್ಕಿಳಿದ ಕೆಲವು ಮುಸ್ಲಿಂ ಯುವಕರನ್ನು ಖಾಸಗಿ ಟಿವಿ ವಾಹಿನಿಯೊಂದು “ನೀವೇಕೆ ಪ್ರತಿಭಟಿಸುತ್ತಿದ್ದೀರಿ? ಸಿಎಎ ಅಂದರೆ ಏನೂಂತ ಗೊತ್ತಿದೆಯಾ? ನಿಮಗೇನು ತೊಂದರೆ ಈ ಕಾಯ್ದೆಯಿಂದ ?” ಇತ್ಯಾದಿ ಪ್ರಶ್ನೆಗಳನ್ನು ಕೇಳಿತು. ಒಬ್ಬರಿಗೂ ಸಮರ್ಪಕ ಉತ್ತರ ನೀಡಲಾಗಲಿಲ್ಲ. “ಮೋದಿ ನಮ್ಮನ್ನೆಲ್ಲ ದೇಶ ಬಿಟ್ಟು ಓಡಿಸುತ್ತಿದ್ದಾರೆ. ಅದಕ್ಕೇ ಈ ಪ್ರತಿಭಟನೆ ” ಎಂಬ ಅಮಾಯಕ ಉತ್ತರ ಏನನ್ನು ಸೂಚಿಸುತ್ತದೆ ? ಸಿಎಎ ವಿರುದ್ಧದ ಪ್ರತಿಭಟನೆ, ಹಿಂಸಾಚಾರದ ಹಿಂದೆ ವ್ಯವಸ್ಥಿತ ಷಡ್ಯಂತ್ರ ಇದೆ. ಕಾಣದ ಕೈಗಳು ಸಮಾಜಘಾತುಕ ಗೂಂಡಾಗಳ ಮೂಲಕ ಹಿಂಸಾಚಾರಕ್ಕೆ ಪ್ರಚೋದಿಸುತ್ತಿವೆ ಎಂಬುದು ಸ್ಪಷ್ಟ. ಮೊನ್ನೆ ಮಂಗಳೂರಿನಲ್ಲಿ ಹಿಂಸೆ ಭುಗಿಲೆದ್ದದ್ದರ ಹಿಂದೆ ಕೆಲವು ಉಗ್ರ ಮುಸ್ಲಿಂ ಸಂಘಟನೆಗಳ ಕೈವಾಡವಿದೆ ಎಂಬುದು ರಹಸ್ಯವಾಗುಳಿದಿಲ್ಲ. ಹಿಂಸೆ ಪ್ರಚೋದಿಸಿ, ಅರಾಜಕತೆ ನಿರ್ಮಿಸಿ ಕೇಂದ್ರ, ರಾಜ್ಯ ಸರಕಾರಗಳ ಮುಖಕ್ಕೆ ಮಸಿ ಬಳಿಯುವ ಹುನ್ನಾರವಿದಲ್ಲದೆ ಮತ್ತೇನು ?
ಪೌರತ್ವ ತಿದ್ದುಪಡಿ ಕಾಯ್ದೆ ಮುಸ್ಲಿಂ ವಿರೋಧಿಯಲ್ಲ. ಆದ್ದರಿಂದ ಭಾರತೀಯ ಮುಸ್ಲಿಮರು ತಪ್ಪು ಮಾಹಿತಿ ಆಧರಿಸಿ ನೆಮ್ಮದಿಗೆಟ್ಟು ಪ್ರತಿಭಟಿಸುವುದು ಬೇಡವೆಂದು ಅಜ್ಮೀರ್ ದರ್ಗಾದ ಮುಖ್ಯಸ್ಥ ಜೈನುಲ್ ಆಲಿಖಾನ್ ಮನವಿ ಮಾಡಿದ್ದಾರೆ. ಹೊಸದಿಲ್ಲಿಯ ಜಾಮಾ ಮಸೀದಿಯ ಶಾಹಿ ಇಮಾಮ್ ಸಯೀದ್ ಅಹ್ಮದ್ ಬುಖಾರಿ ಕೂಡ ಈ ಕಾಯ್ದೆಯಿಂದ ಭಾರತೀಯ ಮುಸ್ಲಿಮರಿಗೆ ಬಾಧಕವಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ. ಆದರೆ ಯು.ಟಿ. ಖಾದರ್ನಂತಹ ತಿಳಿಗೇಡಿ ಶಾಸಕರು ಪೌರತ್ವ ಕಾಯ್ದೆ ಜಾರಿಗೊಳಿಸಿದರೆ ರಾಜ್ಯ ಕೂಡ ಹೊತ್ತಿ ಉರಿಯಲಿದೆ ಎನ್ನುವ ಮೂಲಕ ಮಂಗಳೂರಿನಲ್ಲಿ ಇಬ್ಬರು ಅಮಾಯಕ ಮುಸ್ಲಿಮರ ಸಾವಿಗೆ ಕಾರಣರಾಗಿದ್ದಾರೆ.
ಮುಖ್ಯವಾಗಿ ಈಗ ಪ್ರತಿಭಟಿಸುತ್ತಿರುವ ಮುಖಂಡರಿಗಾಗಲಿ, ಪ್ರತಿಭಟನಾಕಾರರಿಗಾಗಲಿ ಪೌರತ್ವ ತಿದ್ದುಪಡಿ ಕಾಯ್ದೆಯ ಗಂಧಗಾಳಿಯೂ ಇಲ್ಲವೆನ್ನುವುದು ಸಾಬೀತಾಗಿದೆ. ಪಾಕಿಸ್ಥಾನ, ಬಾಂಗ್ಲಾದೇಶ, ಅಫಘಾನಿಸ್ಥಾನದಿಂದ ದೌರ್ಜನ್ಯಕ್ಕೆ ಒಳಗಾಗಿ ವಲಸೆ ಬಂದು ನೆಲೆಸಿರುವ ಧಾರ್ಮಿಕ ಅಲ್ಪಸಂಖ್ಯಾತರಾದ ಹಿಂದು, ಬೌದ್ಧ, ಜೈನ, ಸಿಖ್, ಪಾರ್ಸಿ, ಕ್ರೈಸ್ತರಿಗೆ ದೇಶದ ಪೌರತ್ವ ನೀಡುವುದು ಕಾಯ್ದೆಯ ಉದ್ದೇಶ. ಮುಸ್ಲಿಮರು ಆ ದೇಶಗಳಲ್ಲಿ ಬಹುಸಂಖ್ಯಾತರಾಗಿರುವುದರಿಂದ ಭಾರತಕ್ಕೆ ಬಂದ ಮುಸ್ಲಿಮರಿಗೆ ಇಲ್ಲಿನ ಪೌರತ್ವ ಸಿಗುವುದಿಲ್ಲ. ಹಾಗೆಯೇ ನೇಪಾಳ, ಶ್ರೀಲಂಕಾಗಳಿಂದ ಬಂದ ಹಿಂದುಗಳಿಗೂ ಪೌರತ್ವ ನೀಡುವುದಿಲ್ಲ. ಇದನ್ನು ಅರ್ಥ ಮಾಡಿಕೊಳ್ಳದೆ ಪೌರತ್ವ ಕಾಯ್ದೆ ಸಂಪೂರ್ಣ ಮುಸ್ಲಿಂ ವಿರೋಧಿ ಎಂದು ಬಿಂಬಿಸಿ, ಜನರನ್ನು ಬೀದಿಗಿಳಿಯುವಂತೆ ಮಾಡುತ್ತಿರುವುದು ಕಾನೂನು ವಿರೋಧಿ ಕೃತ್ಯವಲ್ಲದೆ ಮತ್ತೇನು ?
ಇನ್ನೂ ಒಂದು ಅಂಶವನ್ನು ಗಮನಿಸಬೇಕು. ಸೌದಿ ಅರೇಬಿಯಾ, ಅಫಘಾನಿಸ್ಥಾನ, ಮಲೇಶಿಯಾ, ಇಂಡೋನೇಶಿಯಾ, ಇರಾನ್, ಇರಾಕ್ ಮೊದಲಾದ ಯಾವುದೇ ಮುಸ್ಲಿಂ ದೇಶಗಳು ಇತರ ದೇಶದ ಮುಸ್ಲಿಂ ವಲಸಿಗರಿಗೆ ಪೌರತ್ವ ನೀಡುವುದಿಲ್ಲ. ಆದರೆ ಭಾರತ ಮಾತ್ರ ಬಾಂಗ್ಲಾ, ಪಾಕಿಸ್ಥಾನ, ಅಫಘಾನಿಸ್ಥಾನ, ಮ್ಯಾನ್ಮಾರ್ ದೇಶಗಳ ಅಕ್ರಮ ವಲಸಿಗರಿಗೆ ಪೌರತ್ವ ನೀಡಬೇಕೆಂದು ಕೆಲವರು ವಾದಿಸುತ್ತಾರಲ್ಲ, ಅದೆಂಥ ಮೂರ್ಖತನ ಹಾಗೂ ಬಾಲಿಶ? ಭಾರತವೇನು ಧರ್ಮಛತ್ರವೆ ?
ಎರಡನೇ ಬಾರಿಗೆ ಅಧಿಕಾರ ಗದ್ದುಗೆ ಹಿಡಿಯುತ್ತಿರುವ ಮೋದಿ ಮತ್ತವರ ತಂಡ ಕೇವಲ 6 ತಿಂಗಳ ಅಲ್ಪಾವಧಿಯಲ್ಲಿ 370 ನೇ ವಿಧಿ ರದ್ದು, ತ್ರಿವಳಿ ತಲಾಖ್ಗೆ ನಿಷೇಧ, ಅಯೋಧ್ಯೆಯಲ್ಲಿ ಶ್ರೀರಾಮ ಮಂದಿರ ನಿರ್ಮಿಸುವಂತೆ ಸುಪ್ರೀಂ ಕೋರ್ಟ್ ತೀರ್ಪು ನೀಡುವಂತಹ ಸನ್ನಿವೇಶ ಸೃಷ್ಟಿಸಿದ್ದು, ಇದೀಗ ಪೌರತ್ವ ತಿದ್ದುಪಡಿ ಕಾಯ್ದೆ ಜಾರಿಗೆ ತರುತ್ತಿರುವುದು… ಹೀಗೆ ಒಂದಾದ ಮೇಲೊಂದು ಮಹತ್ತರ, ಐತಿಹಾಸಿಕ ನಿರ್ಧಾರಗಳನ್ನು ದಿಟ್ಟತನದಿಂದ ಕೈಗೊಳ್ಳುತ್ತಿರುವ ರೀತಿ ಹಲವರಿಗೆ ಜೀರ್ಣಿಸಿಕೊಳ್ಳಲಾಗುತ್ತಿಲ್ಲ. ದೇಶ ಹಿತದೃಷ್ಟಿಯಿಂದ ಇವೆಲ್ಲ ಉತ್ತಮ ಕ್ರಮಗಳೇ ಆದರೂ ದೇಶವಿರೋಧಿಗಳಿಗೆ, ಲೂಟಿಕೋರರಿಗೆ, ಸಮಾಜಘಾತುಕ ಶಕ್ತಿಗಳಿಗೆ ಇದನ್ನು ಸಹಿಸಿಕೊಳ್ಳಲಾಗುತ್ತಿಲ್ಲ. ಅದಕ್ಕೇ ಅವರೆಲ್ಲ ಈಗ ಒಂದೇ ಧ್ವನಿಯಲ್ಲಿ ಕೂಗೆಬ್ಬಿಸತೊಡಗಿದ್ದಾರೆ. ಪೌರತ್ವ ಕಾಯ್ದೆ ಅವರ ಪಾಲಿಗೆ ಕೇವಲ ಒಂದು ನೆಪ ಅಷ್ಟೆ.
ಸಂವಿಧಾನಬದ್ಧವಾಗಿ ರೂಪುಗೊಂಡ ಕಾಯ್ದೆ ವಿರುದ್ಧ ಮುಸ್ಲಿಂ ದೇಶಗಳಲ್ಲಿ ಹೀಗೇನಾದರೂ ಪ್ರತಿಭಟನೆ, ಹಿಂಸಾಚಾರ ನಡೆಸಿದ್ದರೆ ಅಂಥವರಿಗೆ ಶಾಶ್ವತ ಜೈಲುವಾಸವೇ ಗತಿಯಾಗುತ್ತಿತ್ತು. ಆದರಿದು ಭಾರತ. ಇಲ್ಲಿನ ಔದಾರ್ಯ, ಸಹನೆಯನ್ನು ವಿಭಜಕ, ದುಷ್ಟ ಶಕ್ತಿಗಳು ಎಂದಿನಂತೆ ದುರುಪಯೋಗಪಡಿಸಿಕೊಳ್ಳುತ್ತಲೇ ಇವೆ.
✍ ದು. ಗು. ಲಕ್ಷ್ಮಣ
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.