ಬಾಲಸೋರ್: ಸೇನೆಯ ಫಿರಂಗಿದಳದ ಶಕ್ತಿಯನ್ನು ಹೆಚ್ಚಿಸುವ ಸಲುವಾಗಿ ಭಾರತವು ಸ್ಥಳೀಯವಾಗಿ ಅಭಿವೃದ್ಧಿಪಡಿಸಿದ ಪಿನಾಕಾ ಗೈಡೆಡ್ ರಾಕೆಟ್ ವ್ಯವಸ್ಥೆಯ ನವೀಕರಿಸಿದ ಆವೃತ್ತಿಯನ್ನು ಒಡಿಶಾ ಕರಾವಳಿ ನೆಲೆಯಿಂದ ಗುರುವಾರ ಯಶಸ್ವಿಯಾಗಿ ಪರೀಕ್ಷೆಗೊಳಪಡಿಸಲಾಗಿದೆ ಎಂದು ರಕ್ಷಣಾ ಮೂಲಗಳು ತಿಳಿಸಿವೆ.
ರಕ್ಷಣಾ ಸಂಶೋಧನೆ ಮತ್ತು ಅಭಿವೃದ್ಧಿ ಸಂಸ್ಥೆ (ಡಿಆರ್ಡಿಒ) ಅಭಿವೃದ್ಧಿಪಡಿಸಿದ ಮಲ್ಟಿ-ಬ್ಯಾರೆಲ್ ರಾಕೆಟ್ ಉಡಾವಣಾ ವ್ಯವಸ್ಥೆಯನ್ನು ಬಾಲಸೋರ್ ಸಮೀಪದ ಚಂಡಿಪುರದಲ್ಲಿ ಪ್ರೂಫ್ ಆ್ಯಂಡ್ ಎಕ್ಸಪೆರಿಮೆಂಟಲ್ ಎಸ್ಟಾಬ್ಲಿಷ್ಮೆಂಟ್ ಫೈರಿಂಗ್ ರೇಂಜ್ ನಿಂದ ಪರೀಕ್ಷೆಗೊಳಪಡಿಸಲಾಗಿದೆ ಎಂದು ತಿಳಿಸಿದೆ.
ಟಟ್ರಾ ಟ್ರಕ್ನಲ್ಲಿ ಅಳವಡಿಸಲಾಗಿರುವ ಶಸ್ತ್ರಾಸ್ತ್ರ ವ್ಯವಸ್ಥೆಯು ಅತ್ಯಾಧುನಿಕ ನ್ಯಾವಿಗೇಷನ್ ಮತ್ತು ನಿಯಂತ್ರಣ ವ್ಯವಸ್ಥೆಯನ್ನು ಒಳಗೊಂಡಿರುವ ಅತ್ಯಾಧುನಿಕ ನಿರ್ದೇಶನ ಕಿಟ್ ಅನ್ನು ಹೊಂದಿದೆ ಎಂದು ಡಿಆರ್ಡಿಒ ಮೂಲಗಳು ತಿಳಿಸಿವೆ.
ಈ ಮೊದಲು ಮಾರ್ಚ್ನಲ್ಲಿ, ರಾಜಸ್ಥಾನದ ಪೋಖ್ರಾನ್ ಪರೀಕ್ಷಾ ಶ್ರೇಣಿಯಿಂದ ಪಿನಾಕಾ ಗೈಡೆಡ್ ರಾಕೆಟ್ ವ್ಯವಸ್ಥೆಯ ಮೂರು ಯಶಸ್ವಿ ಪ್ರಯೋಗಗಳನ್ನು ನಡೆಸಲಾಗಿದೆ.
ಸ್ಥಳೀಯವಾಗಿ ಅಭಿವೃದ್ಧಿಪಡಿಸಿದ ಗೈಡೆಡ್ ಪಿನಾಕಾ ವ್ಯವಸ್ಥೆಯು ಫಿರಂಗಿದಳದ ಗುರಿಗಳನ್ನು ನಿಖರವಾಗಿ ಫೈಯರ್ ಮಾಡುವ ಸಾಮರ್ಥ್ಯವನ್ನು ಗಮನಾರ್ಹವಾಗಿ ಹೆಚ್ಚಿಸಲು ಸಜ್ಜಾಗಿದೆ ಎಂದು ಮೂಲಗಳು ತಿಳಿಸಿವೆ.
ಹಗಲಿನಲ್ಲಿ ನಡೆಸಿದ ಪ್ರಯೋಗದ ಸಮಯದಲ್ಲಿ, ಶಸ್ತ್ರಾಸ್ತ್ರ ವ್ಯವಸ್ಥೆಯು ಉದ್ದೇಶಿತ ಗುರಿಯನ್ನು ಹೆಚ್ಚಿನ ಮಟ್ಟದ ನಿಖರತೆಯಿಂದ ತಲುಪುವ ಮೂಲಕ ನಿಗದಿತ ನಿಖರತೆಯನ್ನು ಸಾಧಿಸಿತು ಎಂದು ಅದು ಹೇಳಿದೆ.
“ಪರೀಕ್ಷೆಯ ಸಮಯದಲ್ಲಿ ಎಲ್ಲಾ ಮಿಷನ್ ಉದ್ದೇಶಗಳನ್ನು ಪೂರೈಸಲಾಗಿದೆ” ಎಂದು ಅದು ಹೇಳಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.