ಕಲ್ಲಡ್ಕದ ಶ್ರೀ ರಾಮ ವಿದ್ಯಾ ಕೇಂದ್ರದ ಪ್ರತಿಷ್ಠೆಯನ್ನು ಕೆಡಿಸುವ ಕೆಟ್ಟ ಅಭಿಯಾನ ಪ್ರಾರಂಭವಾಗಿದೆ. ಈ ಅಭಿಯಾನದ ಪ್ರಾಯೋಜಕರು ಕಾಂಗ್ರೆಸ್ ಪಕ್ಷದ ಐಟಿ ಸೆಲ್ ಸದಸ್ಯರು ಮತ್ತು ಅವರ ಬಗ್ಗೆ ಸಹಾನುಭೂತಿ ಹೊಂದಿರುವ ಮಾಧ್ಯಮದವರು ಎಂಬುದು ಆಶ್ಚರ್ಯಕರವಾದ ವಿಷಯವಲ್ಲ.
ಡಿಸೆಂಬರ್ 16 ರಂದು, ಹಲವಾರು ಕಾಂಗ್ರೆಸ್ ಸೋಷಿಯಲ್ ಮೀಡಿಯಾ ಹ್ಯಾಂಡಲ್ಗಳು ಮಕ್ಕಳ ತಂಡವೊಂದು ಬಾಬ್ರಿ ಮಸೀದಿ ರಚನೆಯನ್ನು ಕೆಡವುತ್ತಿರುವ ಮಾದರಿಯ ಎಡಿಟ್ ಮಾಡಿದ ವೀಡಿಯೊವನ್ನು ಹಂಚಿಕೊಂಡಿವೆ. ಇದನ್ನು ವೀಕ್ಷಣೆ ಮಾಡಿದ ಅನೇಕರು ಶಾಲೆ ಮತ್ತು ಅದರ ಅಧ್ಯಕ್ಷರಾದ ಡಾ. ಕಲ್ಲಡ್ಕ ಪ್ರಭಾಕರ್ ಭಟ್ ಅವರನ್ನು ಕೆಣಕಲು ಪ್ರಾರಂಭಿಸಿದರು. ವೀಡಿಯೋದ ಸತ್ಯಾಸತ್ಯತೆಯನ್ನು ಅರಿಯದ ಹಲವರು ಮಕ್ಕಳನ್ನು ಶಾಲೆ ಬ್ರೇನ್ ವಾಶ್ ಮಾಡುತ್ತಿದೆ ಎಂದು ಹಿಗ್ಗಾಮುಗ್ಗಾ ರೀತಿಯಲ್ಲಿ ತರಾಟೆಗೆ ತೆಗೆದುಕೊಂಡಿದ್ದಾರೆ. ಆದರೆ ಮಕ್ಕಳ ನಾಟಕದ ನೈಜ ದೃಶ್ಯಗಳು ಮತ್ತು ವಿಷಯಗಳು ವೀಡಿಯೋದ ನಿಜವಾದ ಸಂಗತಿಗಳನ್ನು ಬಹಿರಂಗಪಡಿಸುತ್ತಿದೆ.
ಕರ್ನಾಟಕದ ದಕ್ಷಿಣ ಕನ್ನಡ ಜಿಲ್ಲೆಯ ಕಲ್ಲಡ್ಕದಲ್ಲಿರುವ ಶ್ರೀ ರಾಮ ವಿದ್ಯಾ ಕೇಂದ್ರವು ತನ್ನ ವಿದ್ಯಾರ್ಥಿಗಳಲ್ಲಿ ರಾಷ್ಟ್ರೀಯತಾವಾದಿ ಮೌಲ್ಯಗಳು ಮತ್ತು ದೇಶಪ್ರೇಮವನ್ನು ಹುಟ್ಟುಹಾಕುತ್ತಿದೆ. ಶಾಲೆಯು ತನ್ನ ಅನನ್ಯ ಶಿಕ್ಷಣ ವ್ಯವಸ್ಥೆಗೆ ಹೆಸರುವಾಸಿಯಾಗಿದೆ, ಅಲ್ಲಿ ಮಕ್ಕಳನ್ನು ಸ್ವಾವಲಂಬಿಗಳನ್ನಾಗಿ ಮಾಡುವ ನಿಟ್ಟಿನಲ್ಲಿ ವಿದ್ಯಾಭ್ಯಾಸವನ್ನು ನೀಡಲಾಗುತ್ತಿದೆ. ಇಲ್ಲಿ ಚಿಕ್ಕ ವಯಸ್ಸಿನಿಂದಲೇ ವಿವಿಧ ವೃತ್ತಿಗಳಲ್ಲಿ ಮಕ್ಕಳಿಗೆ ತರಬೇತಿಯನ್ನು ನೀಡಲಾಗುತ್ತಿದೆ ಮತ್ತು ಜೀವನ ಕೌಶಲ್ಯಗಳನ್ನು ಕಲಿಯಲು ಉತ್ತೇಜನವನ್ನು ನೀಡಲಾಗುತ್ತಿದೆ. ಈ ಶಾಲೆಯು ಹಲವು ವರ್ಷಗಳಿಂದ ರಾಜ್ಯದಲ್ಲಿ ಆಡಳಿತದಲ್ಲಿ ಇದ್ದ ಕಾಂಗ್ರೆಸ್ ಸರ್ಕಾರದ ಟಾರ್ಗೆಟ್ ಆಗಿತ್ತು. ಸಿದ್ದರಾಮಯ್ಯ ಅವರ ಆಳ್ವಿಕೆಯಲ್ಲಿ, ಇಲ್ಲಿನ ಮಕ್ಕಳ ಮಧ್ಯಾಹ್ನದ ಊಟಕ್ಕೆ ಕೊಲ್ಲೂರು ಮೂಕಾಂಬಿಕಾ ದೇವಸ್ಥಾನದಿಂದ ಬರುತ್ತಿದ್ದ ಧನಸಹಾಯವನ್ನು ಕಡಿತಗೊಳಿಸಲಾಗಿತ್ತು. ಕಲ್ಲಡ್ಕ ಪ್ರಭಾಕರ್ ಭಟ್ ಅವರ ಆರ್ಎಸ್ಎಸ್ ಒಡನಾಟ ಕಾಂಗ್ರೆಸ್ ಮತ್ತು ಅದರ ಕಾರ್ಯಕರ್ತರಿಗೆ ಸಹಿಸಲಾಗದ ಸಂಗತಿಯಾಗಿದೆ.
Students of Kalladka Prabhakar Bhat’s school in Karnataka run by #RSS re-enacting demolition of #Babri Mosque.
When the world is perturbed over #CABPolitics, #Modi‘s India is happily promoting communalism.#BJPburningIndia
majoritarian nation inducing majoritarianism in students pic.twitter.com/YohE2geYQm— Farzana Shah (@Jana_Shah) December 16, 2019
ವಾರ್ಷಿಕ ಕ್ರೀಡೋತ್ಸವದ ಭಾಗವಾಗಿ ಮಕ್ಕಳು ಮಾಡಿದ್ದು ನಾಟಕ
ಪ್ರತಿವರ್ಷದಂತೆ ಈ ಬಾರಿಯು ಕಲ್ಲಡ್ಕ ಶ್ರೀರಾಮ ಶಾಲೆಯು ತನ್ನ ವಾರ್ಷಿಕ ‘ಕ್ರೀಡೋತ್ಸವ’ವನ್ನು ಆಯೋಜನೆಗೊಳಿಸಿದೆ. ಇದರಲ್ಲಿ ಪುದುಚೇರಿ ಗವರ್ನರ್ ಡಾ. ಕಿರಣ್ ಬೇಡಿ ಮತ್ತು ರಾಜ್ಯ ಸಚಿವ ಸಂಪುಟದ ಹಲವಾರು ಬಿಜೆಪಿ ಮಂತ್ರಿಗಳು ಭಾಗವಹಿಸಿದ್ದರು. ಕ್ರೀಡೋತ್ಸವದ ಭಾಗವಾಗಿ ಶಾಲೆಯ ಮಕ್ಕಳು ಪ್ರಸಕ್ತ ವರ್ಷದ ಪ್ರಮುಖ ಘಟನೆಯನ್ನು ಬಿಂಬಿಸುವ ನಾಟಕವನ್ನು ನಿರೂಪಣೆ ಮಾಡಿದ್ದರು. ಕಳೆದ ವರ್ಷ, ಮಕ್ಕಳು ಸರ್ಜಿಕಲ್ ಸ್ಟ್ರೈಕ್ ಅನ್ನು ಪ್ರತಿಬಿಂಬಿಸುವ ನಾಟಕವನ್ನು ಪ್ರದರ್ಶಿಸಿದ್ದರು. 2017 ರಲ್ಲಿ, ಮಂಗಳಯಾನ ವಿಷಯದ ಮೇಲೆ ನಾಟಕವನ್ನು ನಿರೂಪಿಸಿದ್ದರು. 2016 ರಲ್ಲಿ, ಅಫ್ಜಲ್ ಗುರು ಮತ್ತು ಅಜ್ಮಲ್ ಕಸಬ್ ಅವರನ್ನು ಗಲ್ಲಿಗೇರಿಸಿದ ಬಗೆಗಿನ ನಾಟಕವನ್ನು ಪ್ರದರ್ಶನ ಮಾಡಿದ್ದರು.
ಈ ವರ್ಷ, ಸುಪ್ರೀಂಕೋರ್ಟ್ ರಾಮ ಜನ್ಮಭೂಮಿ ಕುರಿತು ನೀಡಿದ ತೀರ್ಪು ಮತ್ತು ದೇಶಕ್ಕೆ ಅದರ ಪ್ರಾಮುಖ್ಯತೆಯ ಬಗ್ಗೆ ತಿಳಿಸುವ ಒಂದು ನಾಟಕವನ್ನು ಮಕ್ಕಳು ಪ್ರದರ್ಶಿಸಿದ್ದರು. ಬಾಬ್ರಿ ರಚನೆಯನ್ನು ಉರುಳಿಸುವ ಬಗೆಗಿನ ವೀಡಿಯೊ ನಾಟಕದ ಒಂದು ಸಣ್ಣ ಭಾಗ ಮಾತ್ರ. ಈ ನಾಟಕದಲ್ಲಿ ರಾಮ ಜನ್ಮಭೂಮಿ ರಥಯಾತ್ರೆ, ದೇಶಾದ್ಯಂತ ರಾಮಶಿಲಾ ಪೂಜನ, ದೇವಾಲಯಕ್ಕೆ ಇಟ್ಟಿಗೆಗಳ ಸಂಗ್ರಹ ಮುಂತಾದ ದೃಶ್ಯಗಳಿವೆ. ಉದ್ರಿಕ್ತ ಕರಸೇವಕರು ಬಾಬ್ರಿ ರಚನೆಯನ್ನು ಉರುಳಿಸುವ ದೃಶ್ಯವನ್ನೂ ಈ ರೂಪಕದಲ್ಲಿ ತೋರಿಸಲಾಗಿದೆ. ನಾಯಕರು ಹಾಗೆ ಮಾಡದಂತೆ ಮನವಿ ಮಾಡಿಕೊಳ್ಳುತ್ತಿರುವ ದೃಶ್ಯವನ್ನೂ ರೂಪಕದಲ್ಲಿ ತೋರಿಸುವುದರ ಮುಖಾಂತರ ದೇಶದಲ್ಲಿ ಅನೇಕ ವರ್ಷಗಳಿಂದ ಬಹು ಚರ್ಚಿತ ಮತ್ತು ಬಹಳ ಪ್ರಮುಖವಾದಂತಹ ಈ ವಿಚಾರವನ್ನು ಪ್ರಾರಂಭದಿಂದ ಇಂದಿನವರೆಗೆ ನಡೆದು ಬಂದ ಹಾದಿಯ ವಾಸ್ತವತೆಯನ್ನು ರೂಪಕದ ಮುಖಾಂತರ ಮಕ್ಕಳು ಪ್ರದರ್ಶಿಸಿದ್ದಾರೆ.
ವಾರ್ಷಿಕ ಕ್ರೀಡೋತ್ಸವದಲ್ಲಿ ದೇಶಭಕ್ತಿ ಬಗೆಗಿನ ನಾಟಕಗಳು ಸಾಮಾನ್ಯ
ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿರುವ ರೂಪಕ ಮತ್ತು ವಿಡಿಯೋ ಕುರಿತು ಮಾತನಾಡಿದ ಡಾ. ಪ್ರಭಾಕರ್ ಭಟ್ ಅವರು, ತಮ್ಮ ವೀಡಿಯೊ ಭಾಷಣದಲ್ಲಿ ಶಾಲೆಯ ಹೆಸರನ್ನು ಕೆಡಿಸಲು ಕೆಲವರು ಇಡೀ ನಾಟಕದ ಒಂದು ಸಣ್ಣ ಭಾಗವನ್ನು ಉದ್ದೇಶಪೂರ್ವಕವಾಗಿ ಹಂಚಿಕೊಂಡಿದ್ದಾರೆ ಎಂದು ತಿಳಿಸಿದ್ದಾರೆ. ಇದೇ ರೀತಿಯ ನಾಟಕಗಳನ್ನು ಈ ಹಿಂದೆಯೂ ಮಾಡಲಾಗಿದೆ, ಆದರೆ ಇಷ್ಟು ವರ್ಷಗಳಲ್ಲಿ ಯಾರೂ ಯಾವುದೇ ಆಕ್ಷೇಪಣೆಗಳನ್ನು ಎತ್ತಲಿಲ್ಲ ಮತ್ತು ಈ ವರ್ಷ ಈ ನಾಟಕದ ಬಗ್ಗೆ ಬೊಬ್ಬಿಡುತ್ತಿರುವುದು ಅವರ ಹತಾಶೆಯನ್ನು ತೋರಿಸುತ್ತದೆ ಎಂದು ಅವರು ಹೇಳಿದ್ದಾರೆ. ಸುಪ್ರೀಂಕೋರ್ಟ್ ತೀರ್ಪು ಒಂದು ಐತಿಹಾಸಿಕ ತಪ್ಪನ್ನು ಸರಿಪಡಿಸಿದೆ ಮತ್ತು ನಾಟಕವು ಅದನ್ನು ಮಾತ್ರ ಪ್ರತಿಬಿಂಬಿಸಿದೆ. ಈ ನಾಟಕದಲ್ಲಿ ಯಾರ ಬಗ್ಗೆಯೂ ಕೆಟ್ಟದಾಗಿ ಮಾತನಾಡಿಲ್ಲ ಅಥವಾ ಯಾವುದೇ ವ್ಯಕ್ತಿಗಳು ಅಥವಾ ಸಮುದಾಯವನ್ನು ಕೆಣಕಿಲ್ಲ. ನಮ್ಮ ರಾಷ್ಟ್ರ ಮತ್ತು ನಾಗರಿಕತೆಗೆ ಮುಖ್ಯವಾದ ಒಂದು ಪ್ರಮುಖ ಘಟನೆಯನ್ನು ಪ್ರದರ್ಶಿಸುವುದು ತಪ್ಪಲ್ಲ ಎಂದು ಡಾ.ಪ್ರಭಾಕರ್ ಭಟ್ ಹೇಳಿದ್ದಾರೆ.
ಚಂದ್ರಯಾನ್-2 ರ ಯಶಸ್ಸಿನ ಬಗೆಗಿನ ನಾಟಕ ಮತ್ತು ವಿಕ್ರಮ್ ಲ್ಯಾಂಡರಿನ ವೈಫಲ್ಯವನ್ನು ಸಹ ವಿಭಿನ್ನ ನಾಟಕದಲ್ಲಿ ವೇದಿಕೆಯಲ್ಲಿ ಪ್ರದರ್ಶಿಸಲಾಗಿದೆ. ಕಾಂಗ್ರೆಸ್ ಐಟಿ ಸೆಲ್ ಮತ್ತು ಅದರ ಸಹಾನುಭೂತಿದಾರರು ನಾಟಕದ ಒಂದು ಭಾಗವನ್ನು ಮಾತ್ರ ಹಂಚಿಕೊಂಡಿದ್ದಾರೆ, ವಿವಾದವನ್ನು ಸೃಷ್ಟಿಸುವುದು ಮತ್ತು ಶಾಲೆಯ ಹೆಸರನ್ನು ಹಾಳು ಮಾಡುವುದು ಅವರ ಪ್ರಮುಖ ಉದ್ದೇಶವಾಗಿದೆ.
ಸಂಪೂರ್ಣ ಕ್ರೀಡೋತ್ಸವದ ಚಿತ್ರಣ ನೋಡಿ
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.