ಉಗ್ರವಾದಿ ಸಿದ್ಧಾಂತದಿಂದ ಪ್ರೇರಿತಗೊಂಡವರು ಮತ್ತು ಅವರ ಒಳನುಸುಳುಕೋರ ಸಹೋದರರು ಪಶ್ಚಿಮ ಬಂಗಾಳವನ್ನು ಇಂದು ಅಕ್ಷರಶಃ ಸುಟ್ಟುಹಾಕುತ್ತಿದ್ದಾರೆ. ಮಮತಾ ಬ್ಯಾನರ್ಜಿ ಆಡಳಿತವು ಹಾವನ್ನು ಪೋಷಿಸುತ್ತಿದೆ. ತಾವು ಸಾಕಿರುವುದು ಹಾವೆಂದು ಅವರಿಗೂ ಗೊತ್ತಿದೆ. ಆದರೆ ಈಗ ಆ ಹಾವು ರಕ್ಷಕರನ್ನು ಕಚ್ಚುತ್ತಿದೆ. ತಮ್ಮ ಮುಸ್ಲಿಂ ಮತಬ್ಯಾಂಕ್ ಅನ್ನು ಸಮಾಧಾನಪಡಿಸಲು ಅವರು ಅಕ್ರಮ ಒಳನುಸುಳುಕೋರರಿಗೆ ಮಣೆ ಹಾಕಿದ್ದರು. ಇಂದು ಅವರೇ ಆ ರಾಜ್ಯವನ್ನು ದಹಿಸುತ್ತಿದ್ದಾರೆ.
ಪೌರತ್ವ ತಿದ್ದುಪಡಿ ಕಾಯ್ದೆ ಮತ್ತು ಎನ್ಆರ್ಸಿ ವಿರುದ್ಧದ ಪ್ರತಿಭಟನೆಯ ಹೆಸರಿನಲ್ಲಿ, ಕೆಲವು ಪಟ್ಟಭದ್ರ ಹಿತಾಸಕ್ತಿಗಳು ವಾಹನಗಳು, ರೈಲುಗಳು, ಕಟ್ಟಡಗಳನ್ನು ದರೋಡೆ ಮಾಡುತ್ತಿವೆ ಮತ್ತು ರಾಜ್ಯದ ಕಾನೂನು ಮತ್ತು ಸುವ್ಯವಸ್ಥೆಯನ್ನು ಮುರಿಯುವುದರೊಂದಿಗೆ ರಾಜ್ಯದ ಆಸ್ತಿಯನ್ನು ಧ್ವಂಸ ಮಾಡಿದೆ. ಅವರ ಮೇಲೆ ಕ್ರಮ ಕೈಗೊಳ್ಳುವ ಬದಲು, ಅಲ್ಲಿನ ಹಿರಿಯ ರಾಜ್ಯ ಸಚಿವರು ಮತ್ತು ಕೋಲ್ಕತಾ ಮೇಯರ್ ಫಿರ್ಹಾದ್ ಹಕೀಮ್ ಅವರು ‘ಅರಾಜಕತೆ’ ಯನ್ನು ಹುಟ್ಟುಹಾಕುವ ಮೂಲಕ ಬಿಜೆಪಿಯನ್ನು ಬಲಪಡಿಸಬಾರದು ಎಂದು ಒತ್ತಾಯಿಸಿದ್ದಾರೆ.
ಫಿರ್ಹಾದ್ ಹಕೀಮ್ ಅವರ ಹೇಳಿಕೆಯು, ಬಾಂಗ್ಲಾದೇಶದಿಂದ ಬಂದ ಅಕ್ರಮ ವಲಸಿಗರು ಸೇರಿದಂತೆ ಮುಸ್ಲಿಂ ಅಲ್ಪಸಂಖ್ಯಾತರು ರೈಲು ನಿಲ್ದಾಣಗಳು, ಬಸ್ಸುಗಳು, ರೈಲುಗಳು, ಕಲ್ಲುಗಳನ್ನು ಸುಟ್ಟು ಹಿಂದೂಗಳನ್ನು ಹೊಡೆಯುವ ಮೂಲಕ ನ್ಯಾಯಸಮ್ಮತವಲ್ಲದ ಹಿಂಸಾಚಾರವನ್ನು ಮಾಡುತ್ತಿದ್ದಾರೆ ಎಂಬ ಅಂಶವನ್ನು ಒಪ್ಪಿಕೊಳ್ಳುತ್ತದೆ. ಇಂತಹ ಹಿಂಸಾತ್ಮಕ ಪ್ರತಿಭಟನೆಗಳು ರಾಜ್ಯಕ್ಕೆ ಸಹಾಯ ಮಾಡುವುದಿಲ್ಲ ಆದರೆ ಬಿಜೆಪಿಯ ಕೈಗಳನ್ನು ಬಲಪಡಿಸುತ್ತವೆ ಎಂದು ನಗರಾಭಿವೃದ್ಧಿ ಸಚಿವ ಹಕೀಮ್ ಹೇಳಿದ್ದಾರೆ. “ಭಾರತೀಯ ಸಂವಿಧಾನವನ್ನು ರಕ್ಷಿಸುವುದು ಮತ್ತು ಕಾನೂನುಬಾಹಿರತೆಗೆ ಒಳಗಾಗದಿರುವುದು ದೇಶದ ನಾಗರಿಕರಾದ ನಮ್ಮ ಕರ್ತವ್ಯ” ಎಂದು ಅವರು ಹೇಳಿದ್ದಾರೆ. ಆದರೆ ಬಿಜೆಪಿಗೆ ಲಾಭವಾಗಬಾರದು ಎಂಬುದನ್ನು ಸ್ಪಷ್ಟವಾಗಿ ಹೇಳಿದ್ದಾರೆ.
ತಮ್ಮದೇ ಸಮುದಾಯದ ಜನರನ್ನು ನಿಯಂತ್ರಿಸಲಾಗದ ಹತಾಶೆಯಲ್ಲಿ, ಹಕೀಮ್ ಅವರು ರಾಜ್ಯದಲ್ಲಿ ನಡೆಯುತ್ತಿರುವ ಹಿಂಸಾಚಾರದಿಂದಾಗಿ ಶೇಕಡಾ 70 ರಷ್ಟು ಹಿಂದೂಗಳು ಗೃಹ ಸಚಿವ ಅಮಿತ್ ಷಾ ಅವರನ್ನು ಬೆಂಬಲಿಸಲು ಪ್ರಾರಂಭಿಸಿದರೆ, ಹೀಗಾದರೆ ಮುಂದೊಂದು ದಿನ ಜನಸಮೂಹವು ರಸ್ತೆಯಲ್ಲಿ ನಡೆಯಲು ಸಾಧ್ಯವಾಗುವುದಿಲ್ಲ ಎಂದು ಹೇಳಿದ್ದಾರೆ. ಈ ಮೂಲಕ ರಾಜ್ಯ ಸುಡುತ್ತಿದೆ ಎಂದು ನಮಗೆ ಚಿಂತೆಯಿಲ್ಲ, ಬಿಜೆಪಿಗೆ ಲಾಭವಾಗುತ್ತದೆ ಎಂಬುದು ನಮ್ಮ ಚಿಂತೆ ಎಂಬುದನ್ನು ಪರೋಕ್ಷವಾಗಿ ತೋರಿಸಿಕೊಟ್ಟಿದ್ದಾರೆ. ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಈಗಾಗಲೇ ಪ್ರತಿಭಟನೆಗಳು ಸಮರ್ಥನೀಯ ಆದರೆ ಪ್ರಜಾಪ್ರಭುತ್ವ ರೀತಿಯಲ್ಲಿ ನಡೆಸಬೇಕು ಎಂದು ಹೇಳಿದ್ದಾರೆ. ರೈಲುಗಳು, ವಾಹನ ಸಂಚಾರಗಳನ್ನು ನಿರ್ಬಂಧಿಸುವುದರ ಮೂಲಕ ಅಥವಾ ಸಾರ್ವಜನಿಕ ಆಸ್ತಿಗೆ ಬೆಂಕಿ ಹಚ್ಚುವ ಮೂಲಕ ಪ್ರತಿಭಟನೆ ನಡೆಸಬೇಡಿ ಎಂದಿದ್ದಾರೆ. ಆದರೆ ಇನ್ನೊಂದು ಬದಿಯಲ್ಲಿ ಅವರೇ ಪ್ರತಿಭಟನಾಕಾರರಿಗೆ ಕುಮ್ಮಕ್ಕನ್ನು ನೀಡುತ್ತಿದ್ದಾರೆ.
ರಾಜ್ಯದ ಆಸ್ತಿಪಾಸ್ತಿಗಳ ಅಪಾರ ನಷ್ಟದ ಹಿಂದೆ ಸ್ಥಳೀಯ ಮುಸ್ಲಿಂ ಸಮುದಾಯದ ಮುಕ್ತ ಬೆಂಬಲ ಪಡೆದುಕೊಂಡಿರುವ ಒಳನುಸುಳುಕೋರರು ಇದ್ದಾರೆ ಎಂಬ ಅಂಶವನ್ನು ಅವರು ಒಪ್ಪಿಕೊಂಡಿದ್ದಾರೆ ಎಂಬುದು ಅವರ ಹೇಳಿಕೆಯಿಂದ ಸಾಕಷ್ಟು ಸ್ಪಷ್ಟವಾಗಿದೆ. ವಾಹನಗಳು ಮತ್ತು ಟೈರ್ಗಳನ್ನು ಸುಟ್ಟ ಪರಿಣಾಮ ಅಲ್ಲಿನ ಆಕಾಶವು ಕಪ್ಪು ಹೊಗೆಯಿಂದ ಕೂಡಿದೆ. ನಿಲ್ದಾಣಗಳು ಮತ್ತು ಹೆದ್ದಾರಿಗಳಲ್ಲಿ ರಾಡ್ ಮತ್ತು ಕೋಲುಗಳನ್ನು ಹಿಡಿದು ಜನ ಅಡ್ಡಾಡುತ್ತಿದ್ದಾರೆ. ಟಿಎಂಸಿ ಸರ್ಕಾರದ ಅಪಾರ ಬೆಂಬಲದೊಂದಿಗೆ ಬಂಗಾಳದ ಹಿಂದೂಗಳಲ್ಲಿ ಭಯವನ್ನು ಉತ್ಪಾದಿಸಲು ಪ್ರತಿಭಟನಾಕಾರರು ಪ್ರಯತ್ನ ನಡೆಸುತ್ತಿದ್ದಾರೆ.
ಮುಸ್ಲಿಂ ಓಲೈಕೆಯನ್ನು ದೀರ್ಘಕಾಲದಿಂದ ಅನುಸರಿಸುತ್ತಾ ಬಂದಿರುವ ಮಮತಾ ಬ್ಯಾನರ್ಜಿ ನೇತೃತ್ವದ ರಾಜ್ಯ ಸರ್ಕಾರಕ್ಕೆ ಈಗ ತಾನೇ ಸಾಕಿದ ಹಾವು ತನ್ನ ರಾಜ್ಯದಲ್ಲೇ ವಿಷ ಕಕ್ಕುತ್ತಿದೆ ಎಂದು ಅರಿವಾದರೆ ಅದುವೇ ದೊಡ್ಡ ವಿಷಯ. ಮಮತಾ ಬ್ಯಾನರ್ಜಿ ತೀವ್ರವಾಗಿ ಬೆಂಬಲಿಸುತ್ತಿದ್ದ ಮೂಲಭೂತವಾದಿಗಳು ತಮ್ಮ ನೈಜ ಮುಖವನ್ನು ಈಗ ತೋರಿಸುತ್ತಿದ್ದಾರೆ. ಅವರನ್ನು ಪರಿಪೂರ್ಣ ರೀತಿಯಲ್ಲಿ ಓಲೈಕೆ ಮಾಡುತ್ತಾ ಬರಲಾಗುತ್ತಿದ್ದರೂ ಇಂದು ಅವರು ಮಮತಾ ಮಾತನ್ನು ಕೇಳದಷ್ಟು ಬೆಳೆದು ಬಿಟ್ಟಿದ್ದಾರೆ. ಇಂತವರನ್ನು ಸಮಾಧಾನಪಡಿಸುವುದು ತುಂಬಾ ಕಷ್ಟ ಎಂದು ಅವರು ಅರಿಯಲು ವಿಫಲರಾಗಿದ್ದಾರೆ. ಹಲ್ಲೆ ಮತ್ತು ಹಿಂಸಾತ್ಮಕ ಪ್ರತಿಭಟನೆಗಳು ಅವರಿಗೆ ಮತ್ತು ಆ ಸಿದ್ಧಾಂತವನ್ನು ಪೋಷಿಸುವ ಇತರ ನಾಯಕರ ಕಣ್ಣು ತೆರೆಸುತ್ತವೆ ಎಂಬ ನಂಬಿಕೆ ಈ ನೆಲದ ನಿಜವಾದ ನಾಗರಿಕರದ್ದು. ಮುಸ್ಲಿಂ ಸಮುದಾಯಕ್ಕೆ ಸಂಬಂಧಿಸಿದಂತೆ ಎಡ-ಉದಾರವಾದಿಗಳ ಮೌನವು ಕಪಟವಾಗಿದೆ. ಗಾಂಧಿಯ ಅಹಿಂಸಾ ಮಾರ್ಗದಲ್ಲಿ ತಮ್ಮನ್ನು ತಾವು ಚಾಂಪಿಯನ್ ಮಾಡುವ ಉದಾರವಾದಿಗಳು ಬಂಗಾಳದಲ್ಲಿ ನಡೆಯುತ್ತಿರುವ ಹಿಂಸಾತ್ಮಕ ಪ್ರತಿಭಟನೆಗಳ ಬಗ್ಗೆ ಒಂದೇ ಒಂದು ಮಾತನ್ನೂ ಆಡುತ್ತಿಲ್ಲ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.