ನವದೆಹಲಿ: ಪ್ರಧಾನಿ ನರೇಂದ್ರ ಮೋದಿ ಅವರ ನೇತೃತ್ವದಲ್ಲಿ ಬುಧವಾರ ನಡೆದ ಕೇಂದ್ರ ಸಂಪುಟ ಸಭೆಯು ಸಾಮಾಜಿಕ ಭದ್ರತೆ, ಇಂಧನ, ಸ್ಟೀಲ್ ಇತ್ಯಾದಿ ಕ್ಷೇತ್ರಗಳಿಗೆ ಸಂಬಂಧಿಸಿದಂತೆ ಹಲವಾರು ಮಹತ್ವದ ನಿರ್ಧಾರಗಳನ್ನು ತೆಗೆದುಕೊಂಡಿದೆ. ಈ ನಿರ್ಧಾರಗಳ ಬಗೆಗಿನ ಒಂದು ನೋಟ ಇಲ್ಲಿದೆ.
🔸 ಸಂಪುಟವು ಭಾರತ ಮತ್ತು ಬ್ರೆಜಿಲ್ ನಡುವಿನ ಸಾಮಾಜಿಕ ಭದ್ರತೆ ಒಪ್ಪಂದಕ್ಕೆ ಸಹಿ ಹಾಕಲು ಅನುಮೋದನೆಯನ್ನು ನೀಡಿದೆ.
🔸 ದಿಲ್ಲಿ ಮೆಟ್ರೋ ಫೇಸ್-IV ಯೋಜನೆಗಳಿಗೆ ಮೂರು ಅನುಮೋದಿತ ಆದ್ಯತೆಯ ಕಾರಿಡಾರ್ಗಳಿಗೆ ಅನುದಾನ ವಿಧಾನವನ್ನು ಪರಿಷ್ಕರಿಸುವುದಕ್ಕೆ ಸಂಪುಟ ಅನುಮೋದನೆಯನ್ನು ನೀಡಿದೆ.
🔸 ಹಣಕಾಸು ವಂಚನೆ ಮತ್ತು ದಿವಾಳಿತನ ಸಂಹಿತೆ 2016ಕ್ಕೆ ತಿದ್ದುಪಡಿಯನ್ನು ತೆರೆಯುವ ಪ್ರಸ್ತಾವನೆಗೆ ಅನುಮೋದನೆ ನೀಡಲಾಗಿದೆ. ಹಣಕಾಸು ವಂಚನೆ ಮತ್ತು ದಿವಾಳಿತನ ಮಸೂದೆ 2019ರ ಮೂಲಕ ತಿದ್ದುಪಡಿಯನ್ನು ತರಲಾಗುತ್ತದೆ. ವಂಚನೆ ಪ್ರಕ್ರಿಯೆಗಳಿಗೆ ಸಂಬಂಧಿಸಿದಂತೆ ಎದುರಿಸಲಾಗುವುದು ಸವಾಲುಗಳನ್ನು ಪರಿಹರಿಸುವ ಸಲುವಾಗಿ ತಿದ್ದುಪಡಿಯನ್ನು ತರಲಾಗುತ್ತಿದೆ. ಇದು ಸುಲಲಿತ ಉದ್ಯಮಕ್ಕೂ ದಾರಿ ಮಾಡಿಕೊಡಲಿದೆ.
🔸 ಮೆಡಿಕಲ್ ಪ್ರಾಡಕ್ಟ್ಸ್ ರೆಗ್ಯುಲೇಷನ್ ಕ್ಷೇತ್ರದಲ್ಲಿ ಸೆಂಟ್ರಲ್ ಡ್ರಗ್ಸ್ ಸ್ಟ್ಯಾಂಡರ್ಡ್ ಕಂಟ್ರೋಲ್ ಆರ್ಗನೈಸೇಷನ್ ಮತ್ತು ಸೌದಿ ಫುಡ್ ಅಂಡ್ ಡ್ರಗ್ ಅಥಾರಿಟಿ ನಡುವಣ ತಿಳುವಳಿಕೆಯ ಒಪ್ಪಂದದ ಎಕ್ಸ್ ಪೋಸ್ಟ್ ಫ್ಯಾಕ್ಟೋಗೆ ಅನುಮೋದನೆಯನ್ನು ನೀಡಲಾಗಿದೆ.
🔸 IIFCLಗೆ ಹೆಚ್ಚುವರಿ ಈಕ್ವಿಟಿ ಬೆಂಬಲ ನೀಡುವುದಕ್ಕೆ ಅನುಮೋದನೆಯನ್ನು ನೀಡಲಾಗಿದೆ. ಇದರಡಿಯಲ್ಲಿ 2019-20 ರ ಸಾಲಿನಲ್ಲಿ 5300 ಕೋಟಿ ರೂಪಾಯಿ ಮತ್ತು 2020-21ರ ಹಣಕಾಸು ವರ್ಷದಲ್ಲಿ 10 ಸಾವಿರ ಕೋಟಿ ರೂಪಾಯಿಗಳನ್ನು ಒದಗಿಸಲಾಗುತ್ತದೆ.
🔸 ಭಾಗಶಃ ಕ್ರೆಡಿಟ್ ಖಾತ್ರಿ ಯೋಜನೆಗೆ ಕೇಂದ್ರ ಸಂಪುಟ ಅನುಮೋದನೆ ನೀಡಿದೆ. ಇದು ಸಾರ್ವಜನಿಕ ವಲಯದ ಬ್ಯಾಂಕುಗಳಿಗೆ ಹೆಚ್ಚು ದರ ಆಸ್ತಿಗಳನ್ನು ಬ್ಯಾಂಕೇತರ ಹಣಕಾಸು ಸಂಸ್ಥೆಗಳಿಂದ ಖರೀದಿಸುವುದಕ್ಕೆ ಸರ್ಕಾರ ನೀಡುವ ಆಫರ್ ಆಗಿದೆ.
🔸 ಏರ್ಕ್ರಾಫ್ಟ್ ತಿದ್ದುಪಡಿ ಮಸೂದೆ 2019ಕ್ಕೂ ಸಂಪುಟ ಅನುಮೋದನೆಯನ್ನು ನೀಡಿದೆ. ಇದು ಈ ಅಧಿವೇಶನದಲ್ಲಿ ಮಂಡನೆಗೊಳ್ಳುವ ನಿರೀಕ್ಷೆಯಿದೆ.
🔸 ಮೂಲಸೌಕರ್ಯ ಹೂಡಿಕೆ ಟ್ರಸ್ಟ್ ಸ್ಥಾಪನೆ ಮಾಡುವ ರಾಷ್ಟ್ರೀಯ ಹೆದ್ದಾರಿ ಮತ್ತು ರಸ್ತೆ ಸಚಿವಾಲಯ, ಭಾರತೀಯ ಹೆದ್ದಾರಿ ಪ್ರಾಧಿಕಾರದ ಪ್ರಸ್ತಾಪಕ್ಕೆ ಅನುಮೋದನೆಯನ್ನು ನೀಡಲಾಗಿದೆ.
🔸 ಭಾರತ ಮತ್ತು ಜಪಾನ್ ನಡುವಣ ಪರಿಣಾಮಕಾರಿ ಸಹಕಾರ ಮತ್ತು ಪರಿಸರ ಸುಧಾರಣೆ ಸಹಕಾರ ಒಪ್ಪಂದಕ್ಕೆ ಅನುಮೋದನೆ ನೀಡಲಾಗಿದೆ. ಮಾತ್ರವಲ್ಲದೆ, ಸ್ಟೀಲ್ ವಲಯದಲ್ಲಿ ಸಹಕಾರವನ್ನು ಬಲಗೊಳಿಸುವ ನಿಟ್ಟಿನಲ್ಲಿ ಇಂಡಿಯಾ ಜಪಾನ್ ಸ್ಟೀಲ್ ಡೈಲಾಗ್ ಆರಂಭಕ್ಕೆ ಅನುಮೋದನೆಯನ್ನು ನೀಡಲಾಗಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.