ನವದೆಹಲಿ: ರಾಜ್ಯಸಭೆಯಲ್ಲಿ ಪೌರತ್ವ ತಿದ್ದುಪಡಿ ಮಸೂದೆ ಅಂಗೀಕಾರಗೊಂಡಿರುವುದಕ್ಕೆ ಪ್ರಧಾನಿ ನರೇಂದ್ರ ಮೋದಿ ಅವರು ಹರ್ಷ ವ್ಯಕ್ತಪಡಿಸಿದ್ದಾರೆ. “ಇದು ಭಾರತಕ್ಕೆ ಮತ್ತು ನಮ್ಮ ದೇಶದ ಸಹಾನುಭೂತಿ ಮತ್ತು ಭಾತೃತ್ವದ ಮೌಲ್ಯಗಳಿಗೆ ಐತಿಹಾಸಿಕ ದಿನ” ಎಂದಿದ್ದಾರೆ.
ತಮ್ಮ ಧರ್ಮದ ಕಾರಣದಿಂದ ವರ್ಷಗಳಿಂದ ದೌರ್ಜನ್ಯಗಳನ್ನು ಅನುಭವಿಸುತ್ತಾ ಬಂದಿರುವ ಜನರಿಗೆ ಪೌರತ್ವ ತಿದ್ದುಪಡಿ ಮಸೂದೆ ಇಂದ ನಿರಾಳತೆ ಸಿಗಲಿದೆ ಎಂದು ಮೋದಿ ಅಭಿಪ್ರಾಯಪಟ್ಟಿದ್ದಾರೆ.
ಟ್ವೀಟ್ ಮಾಡಿರುವ ಮೋದಿ,”ಭಾರತಕ್ಕೆ ಮತ್ತು ನಮ್ಮ ರಾಷ್ಟ್ರದ ಸಹಾನುಭೂತಿ ಮತ್ತು ಭಾತೃತ್ವದ ಮೌಲ್ಯಗಳಿಗೆ ಇದು ಐತಿಹಾಸಿಕ ದಿನ. ರಾಜ್ಯಸಭಾ ಪೌರತ್ವ ತಿದ್ದುಪಡಿ ಮಸೂದೆಯನ್ನು ಅಂಗೀಕರಿಸಿದ ಎಂಬುದು ನಿಜಕ್ಕೂ ಸಂತೋಷಕರವಾದ ಸುದ್ದಿ. ಮಸೂದೆಯ ಪರವಾಗಿ ಮತ ಚಲಾಯಿಸಿದ ಎಲ್ಲ ಸಂಸದರಿಗೂ ನಾನು ಅಭಿನಂದನೆಗಳನ್ನು ತಿಳಿಸುತ್ತೇನೆ. ಈ ಮಸೂದೆಯು ವರ್ಷಾನುಗಟ್ಟಲೆಯಿಂದ ಧಾರ್ಮಿಕ ದೌರ್ಜನ್ಯವನ್ನು ಅನುಭವಿಸಿದ ಜನರ ನೋವನ್ನು ದೂರ ಮಾಡಲಿದೆ” ಎಂದಿದ್ದಾರೆ.
A landmark day for India and our nation’s ethos of compassion and brotherhood!
Glad that the #CAB2019 has been passed in the #RajyaSabha. Gratitude to all the MPs who voted in favour of the Bill.
This Bill will alleviate the suffering of many who faced persecution for years.
— Narendra Modi (@narendramodi) December 11, 2019
ಪೌರತ್ವ ತಿದ್ದುಪಡಿ ಮಸೂದೆಯನ್ನು ರಾಜ್ಯಸಭೆಯಲ್ಲಿ 125 ಪರ ಮತ್ತು 105 ವಿರುದ್ಧ ಮತಗಳ ಮೂಲಕ ಅಂಗೀಕರಿಸಲಾಯಿತು. ಈ ಮಸೂದೆಯು ಪಾಕಿಸ್ಥಾನ, ಅಫ್ಘಾನಿಸ್ಥಾನ ಮತ್ತು ಬಾಂಗ್ಲಾದೇಶದ ಧಾರ್ಮಿಕ ಅಲ್ಪಸಂಖ್ಯಾತರಿಗೆ ಭಾರತದ ಪೌರತ್ವವನ್ನು ನೀಡುವ ಉದ್ದೇಶವನ್ನು ಒಳಗೊಂಡಿದೆ.
ಈ ಮಸೂದೆಯನ್ನು ಬಿಜೆಪಿ, ಜೆಡಿಯು, ಎಐಎಡಿಎಂಕೆ, ಬಿಜೆಡಿ, ಟಿಡಿಪಿ, ಶಿರೋಮಣಿ ಅಕಾಲಿದಳ ಮತ್ತು ವೈಎಸ್ಆರ್ ಕಾಂಗ್ರೆಸ್ ಪಕ್ಷಗಳು ಬೆಂಬಲಿಸಿವೆ. ಮಸೂದೆಗೆ ಸಂಬಂಧಿಸಿದಂತೆ ರಾಜ್ಯಸಭೆಯಲ್ಲಿ 6 ಗಂಟೆಗಳ ಚರ್ಚೆ ನಡೆದಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.