ನವದೆಹಲಿ: 2019ರ ಲೋಕಸಭಾ ಚುನಾವಣೆಯ ಗೆಲುವಿನ ಬಳಿಕ ಪ್ರಧಾನಿ ನರೇಂದ್ರ ಮೋದಿಯವರು ಮಾಡಿದ ಟ್ವೀಟ್ 2019ರ ಭಾರತದ ಗೋಲ್ಡನ್ ಟ್ವೀಟ್ ಆಗಿ ಹೊರಹೊಮ್ಮಿದೆ.
ಲೋಕಸಭಾ ಚುನಾವಣೆಯ ಫಲಿತಾಂಶ ಹೊರಬಿದ್ದ ಬಳಿಕ, ಬಿಜೆಪಿಯ ಅಭೂತಪೂರ್ವ ಗೆಲುವನ್ನು ಸಂಭ್ರಮಿಸಿ ಟ್ವೀಟ್ ಮಾಡಿದ್ದ ಮೋದಿ, “ಸಬ್ ಕಾ ಸಾಥ್ + ಸಬ್ ಕಾ ವಿಕಾಸ್ + ಸಬ್ ಕಾ ವಿಶ್ವಾಸ್ = ವಿಜಯೀ ಭಾರತ್” ಜೊತೆಯಾಗಿ ಪ್ರಗತಿ ಹೊಂದೋಣ, ಜೊತೆಯಾಗಿ ಸಮೃದ್ಧಿ ಹೊಂದೋಣ. ಒಗ್ಗಟ್ಟಿನಿಂದ ಬಲಿಷ್ಠ ಮತ್ತು ಎಲ್ಲರನ್ನೂ ಒಳಗೊಂಡ ಭಾರತವನ್ನು ಕಟ್ಟೋಣ” ಎಂದು ಟ್ವೀಟ್ ಮಾಡಿದ್ದರು.
ಈ ಟ್ವೀಟ್ ಅನ್ನು ಭಾರತದ ” ಗೋಲ್ಡನ್ ಟ್ವೀಟ್ ಆಫ್ 2019″ ಎಂದು ಟ್ವಿಟರ್ ಇಂಡಿಯಾ ಘೋಷಿಸಿದೆ.
This year’s Golden Tweet (or the most Retweeted Tweet) was @narendramodi‘s Tweet after winning the #loksabhaelections2019.
This also happened to be the most Liked Tweet this year https://t.co/qQ1pC17g7U
— Twitter India (@TwitterIndia) December 10, 2019
ಮೋದಿ ಅವರು ಮಾಡಿದ್ದ ಈ ಟ್ವೀಟ್, 4,20,000ಕ್ಕೂ ಅಧಿಕ ಲೈಕ್ ಪಡೆದುಕೊಂಡಿತ್ತು, 1,17,100 ಮರುಹಂಚಿಕೆ(ರಿಟ್ವೀಟ್)ಗಳನ್ನು ಕಂಡಿತ್ತು. 2019ರ ಮೇ 23ರ ಮಧ್ಯಾಹ್ನ ಈ ಟ್ವೀಟ್ ಅನ್ನು ಪ್ರಕಟಿಸಲಾಗಿತ್ತು.
ಹ್ಯಾಶ್ಟ್ಯಾಗ್ಗಳ ಪೈಕಿ #ಲೋಕಸಭಾಎಲೆಕ್ಷನ್2019 ಹೆಚ್ಚು ಟ್ವೀಟ್ ಆದ ಹ್ಯಾಶ್ ಟ್ಯಾಗ್ ಆಗಿದೆ.
ಭಾರತೀಯ ಕ್ರಿಕೆಟ್ ತಂಡದ ನಾಯಕ ವಿರಾಟ್ ಕೊಹ್ಲಿ ಅವರು, ಮಾಜಿ ನಾಯಕ ಮಹೇಂದ್ರ ಸಿಂಗ್ ಧೋನಿ ಅವರ ಜನ್ಮದಿನಕ್ಕೆ ಶುಭಾಶಯ ಕೋರಿ ಮಾಡಿದ ಟ್ವೀಟ್ ಅತಿ ಹೆಚ್ಚು ಬಾರಿ ರೀಟ್ವೀಟ್ ಆದ ಟ್ವೀಟ್ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.