ಸೂರತ್: ಗುಜರಾತಿನ ಸೂರತ್ ಜಿಲ್ಲೆಯಲ್ಲಿರುವ ಬದ್ರಿ ನಾರಾಯಣ ದೇಗುಲವು ವಿದ್ಯುತ್ ಅನ್ನು ಉಳಿತಾಯ ಮಾಡುವ ಸಲುವಾಗಿ ಸೌರಶಕ್ತಿಯನ್ನು ಬಳಕೆ ಮಾಡುತ್ತಿದೆ. ಈ ಮೂಲಕ ವಿದ್ಯುತ್ಗೆ ವ್ಯಯವಾಗುವ ಹಣವನ್ನು ಉಳಿತಾಯ ಮಾಡುತ್ತಿದೆ. ಹೇಗೆ ಉಳಿತಾಯವಾದ ಹಣವನ್ನು ಬಡ ಮಕ್ಕಳ ಶಿಕ್ಷಣದ ಖರ್ಚಿಗಾಗಿ ನೀಡುತ್ತಿದೆ.
ವಿದ್ಯುತ್ ಬಿಲ್ ಸಿಕ್ಕಾಪಟ್ಟೆ ಹೆಚ್ಚಾದ ಹಿನ್ನೆಲೆಯಲ್ಲಿ ಸೌರಶಕ್ತಿಗೆ ನಾವು ಬದಲಾಗಿದ್ದಾಗಿ ಬದ್ರಿ ನಾರಾಯಣ ದೇಗುಲದ ಆಡಳಿತ ಮಂಡಳಿ ಹೇಳಿದೆ.
“ಸೌರಶಕ್ತಿಗೆ ಬದಲಾದ ನಮ್ಮ ಉದ್ದೇಶ ಹಣವನ್ನು ಉಳಿತಾಯ ಮಾಡುವುದಾಗಿದೆ. ಹಿಂದೆ 1.5 ಲಕ್ಷದಿಂದ 2 ಲಕ್ಷ ರೂಪಾಯಿಗಳವರೆಗೆ ವಿದ್ಯುತ್ ಬಿಲ್ ಬರುತ್ತಿತ್ತು. ಆದರೆ ಈಗ ನಮ್ಮ ವಿದ್ಯುತ್ ಬಿಲ್ ರೂ. 10 ರಿಂದ 12 ಸಾವಿರ ಆಗಿದೆ. ಪ್ರತಿ ತಿಂಗಳು ಉಳಿತಾಯವಾಗುವ ಹಣವನ್ನು ದೇಗುಲದ ವತಿಯಿಂದ ನಡೆಸಲಾಗುವ ಕಾಲೇಜು ಮತ್ತು ಸಂಸ್ಕೃತ ಶಾಲೆಗಳಿಗೆ ನೀಡಲಾಗುತ್ತಿದೆ” ಎಂದು ದೇಗುಲದ ಆಡಳಿತ ಮಂಡಳಿ ಸದಸ್ಯ ಚಂದ್ರ ಹೇಳಿದ್ದಾರೆ.
ದೇಗುಲದ ಟೆರೇಸ್ ಮೇಲೆ 50 ಕಿಲೋ ವ್ಯಾಟ್ ಸಾಮರ್ಥ್ಯದ ಘಟಕವನ್ನು 25 ಲಕ್ಷ ರೂಪಾಯಿಗಳ ವೆಚ್ಚದಲ್ಲಿ ನಿರ್ಮಾಣ ಮಾಡಲಾಗಿದೆ ಎಂದು ಅವರು ಹೇಳಿದ್ದಾರೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.