ನವದೆಹಲಿ: ಭಾರತದಾದ್ಯಂತ 1 ಲಕ್ಷ ಶಾಲೆಗಳನ್ನು ನಿರ್ಮಾಣ ಮಾಡಿರುವ ಏಕಲ ವಿದ್ಯಾಲಯ ಸಂಘಟನೆಗೆ ಪ್ರಧಾನಿ ನರೇಂದ್ರ ಮೋದಿ ಅವರು ಅಭಿನಂದನೆಗಳನ್ನು ಸಲ್ಲಿಸಿದ್ದಾರೆ. ಗ್ರಾಮೀಣ ಮತ್ತು ಬುಡಕಟ್ಟು ಮಕ್ಕಳಲ್ಲಿ ಶಿಕ್ಷಣವನ್ನು ಉತ್ತೇಜಿಸುವ ಸಲುವಾಗಿ ‘ಏಕಲ ಸ್ಕೂಲ್ ಅಭಿಯಾನ್’ ಮೂಲಕ ಅವಿರತ ಪರಿಶ್ರಮ ಪಡುತ್ತಿರುವ ಸಂಘಟನೆಯನ್ನು ಅವರು ಶ್ಲಾಘಿಸಿದ್ದಾರೆ.
ವಿಡಿಯೋ ಕಾನ್ಫರೆನ್ಸ್ ಮೂಲಕ ಗುಜರಾತಿನಲ್ಲಿ ಜರುಗಿದ ಏಕಲ ವಿದ್ಯಾಲಯ ಸಂಘಟನಾ ಸಮಾರಂಭವನ್ನು ಉದ್ದೇಶಿಸಿ ಮಾತನಾಡಿದ ಅವರು, 2.8 ಮಿಲಿಯನ್ ಗ್ರಾಮೀಣ ಮತ್ತು ಬುಡಕಟ್ಟು ಮಕ್ಕಳು ಶಿಕ್ಷಣಕ್ಕೆ ಒಳಪಡುವಂತೆ ಮಾಡುವ ಮೂಲಕ ಮತ್ತು ಭಾರತದ ಮತ್ತು ನೇಪಾಳದ ಕುಗ್ರಾಮ ಪ್ರದೇಶಗಳಲ್ಲಿ ಶಿಕ್ಷಣವನ್ನು ಪ್ರಚುರಪಡಿಸಲು ಶ್ರಮಿಸುವ ಮೂಲಕ ಏಕಲ ವಿದ್ಯಾಲಯ ಸಂಘಟನೆಯು ರಾಷ್ಟ್ರ ನಿರ್ಮಾಣ ಕಾರ್ಯದಲ್ಲಿ ತನ್ನನ್ನು ತೊಡಗಿಸಿಕೊಂಡಿದೆ ಎಂದಿದ್ದಾರೆ.
ಸಂಘಟನೆಯು ಗಾಂಧೀ ಶಾಂತಿ ಪ್ರಶಸ್ತಿಯನ್ನು ಪಡೆದುಕೊಂಡಿದೆ ಎಂಬುವುದನ್ನು ಸ್ಮರಿಸಿದ ಮೋದಿ, ಸಂಘಟನೆಯ ಸಾಮಾಜಿಕ ಸೇವೆ ಬಗೆಗಿನ ಬದ್ಧತೆಯೂ ಇಡೀ ದೇಶಕ್ಕೆ ಸ್ಪೂರ್ತಿದಾಯಕ, ಮಾದರಿಯಾಗಿದೆ ಎಂದಿದ್ದಾರೆ.
Through a video message, addressed the Ekal Vidyalaya Sangathan. Congratulated them on crossing 1 lakh schools across India. This team is doing exceptional work to further education, especially among rural and tribal areas. https://t.co/fMcwBUtsnk
— Narendra Modi (@narendramodi) December 6, 2019
ಕೇಂದ್ರ ಸರಕಾರವು ಭಾರತದಲ್ಲಿ ಉತ್ತಮ ಶಿಕ್ಷಣವನ್ನು ರೂಪಿಸಲು ಮತ್ತು ಕೌಶಲ್ಯ ಅಭಿವೃದ್ಧಿಯನ್ನು ವೃದ್ಧಿಸಲು ಅತ್ಯಂತ ಉತ್ಸಾಹದಿಂದ ಕಾರ್ಯೋನ್ಮುಖಗೊಂಡಿದೆ ಎಂದಿದ್ದಾರೆ.
“ಬುಡಕಟ್ಟು ಮಕ್ಕಳಿಗೆ ಸ್ಕಾಲರ್ಶಿಪ್ ಯೋಜನೆ, ಏಕಲವ್ಯ ಮೊಡೆಲ್ ರೆಸಿಡೆನ್ಷಿಯಲ್ ಸ್ಕೂಲ್, ಪೋಷಣ್ ಅಭಿಯಾನ್, ಮಿಷನ್ ಇಂದ್ರಧನುಷ್, ಬುಡಕಟ್ಟು ಹಬ್ಬಗಳ ಸಂದರ್ಭದಲ್ಲಿ ಶಾಲಾ ಮಕ್ಕಳಿಗೆ ರಜೆ ಮುಂತಾದ ಸರ್ಕಾರದ ಕಾರ್ಯಕ್ರಮಗಳು ಶಾಲೆಗಳಲ್ಲಿ ಮಕ್ಕಳ ಶಾಲೆ ತೊರೆಯುವಿಕೆ ಸಮಸ್ಯೆಯ ಪ್ರಮಾಣವನ್ನು ಕಡಿಮೆ ಮಾಡುತ್ತಿದೆ ಮತ್ತು ಈ ಕಾರ್ಯಕ್ರಮಗಳು ಮಕ್ಕಳ ಸಮಗ್ರ ಅಭಿವೃದ್ಧಿಯಲ್ಲಿ ಸಾಕಷ್ಟು ಕೊಡುಗೆಗಳನ್ನು ನೀಡುತ್ತಿವೆ” ಎಂದಿದ್ದಾರೆ.
2022ರ ವೇಳೆಗೆ ಭಾರತ 75ನೇ ಸ್ವಾತಂತ್ರ್ಯ ದಿನಾಚರಣೆಯನ್ನು ಆಚರಿಸುವ ವೇಳೆ, ಸಂಘಟನೆಯು ತನ್ನ ಶಾಲೆಯ ಮಕ್ಕಳಿಗೆ ವಿವಿಧ ಛದ್ಮವೇಷ ಸ್ಪರ್ಧೆ, ಸಂಗೀತ ಸ್ಪರ್ಧೆ, ಚರ್ಚೆ ಮತ್ತು ಸಂವಾದಗಳು, ಭಾರತದ ಸ್ವಾತಂತ್ರ್ಯ ಚಳುವಳಿಯಲ್ಲಿ ಬುಡಕಟ್ಟು ಸಮುದಾಯದ ಪಾತ್ರ ಮುಂತಾದವುಗಳ ಬಗ್ಗೆ ಕಾರ್ಯಕ್ರಮಗಳನ್ನು ಆಯೋಜನೆಗಳಿಸಬೇಕು ಎಂದು ಮೋದಿ ಕರೆ ನೀಡಿದ್ದಾರೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.