ನವದೆಹಲಿ: ಕೆನಡಾದ ಪ್ರಧಾನಿ ಜಸ್ಟಿನ್ ಟ್ರುಡೊ ಅವರ 37 ಸದಸ್ಯರ ಹೊಸ ಕ್ಯಾಬಿನೆಟ್ ಬುಧವಾರ ರಚನೆಯಾಗಿದ್ದು, ನಾಲ್ಕು ಭಾರತೀಯ ಮೂಲದವರನ್ನು ಇದು ಒಳಗೊಂಡಿದೆ. ಟ್ರೂಡೊ ಸಂಪುಟ ಪುನರ್ ರಚನೆಯ ವೇಳೆ ತನ್ನ ಹಿಂದಿನ ಮೂವರು ಸಿಖ್ ಮಂತ್ರಿಗಳನ್ನು ಉಳಿಸಿಕೊಂಡಿದ್ದರೆ ಮತ್ತು ಸಂಸದೆ ಅನಿತಾ ಆನಂದ್ ಅವರನ್ನು ಸೇರಿಸಿಕೊಂಡಿದ್ದಾರೆ. ಈ ಮೂಲಕ ಅನಿತಾ ಅವರು ಕೆನಡಾದಲ್ಲಿ ಮಂತ್ರಿಯಾದ ಮೊದಲ ಹಿಂದೂ ಮಹಿಳೆ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ.
50 ವರ್ಷದ ಅನಿತಾ ಆನಂದ್ ಅವರಿಗೆ ಪಬ್ಲಿಕ್ ಸರ್ವಿಸ್ ಆ್ಯಂಡ್ ಪ್ರೊಕ್ರ್ಯೂಮೆಂಟ್ ಸಚಿವಾಲಯವನ್ನು ನೀಡಲಾಗಿದೆ, ಇವರ ತಂದೆ ತಾಯಿ ಭಾರತೀಯ ಮೂಲದವರಾಗಿದ್ದಾರೆ, ಟೊರ್ಯಾಂಟೋ ಯೂನಿವರ್ಸಿಟಿಯಲ್ಲಿ ಇವರು ಪ್ರೊಫೆಸರ್ ಆಗಿ ಕಾರ್ಯನಿರ್ವಹಿಸಿದ್ದಾರೆ. ಕಾರ್ಪೋರೇಟ್ ಗವರ್ನೆನ್ಸ್ ಮತ್ತು ಶೇರ್ ಹೋಲ್ಡರ್ಸ್ ರೈಟ್ಸ್ ಬಗ್ಗೆ ಇವರಿಗೆ ವಿಶೇಷ ಪರಿಣಿತಿ ಇದೆ.
ಟ್ರೂಡೊ ಸರ್ಕಾರದ ಪ್ರಮುಖ ಸಿಖ್ ಮುಖಂಡ ಹರ್ಜಿತ್ ಸಿಂಗ್ ಸಜ್ಜನ್ ಅವರು ರಕ್ಷಣಾ ಸಚಿವರಾಗಿ ಮುಂದುವರೆದಿದ್ದಾರೆ.
ಮಿಸ್ಸಿಸೌಗಾ-ಮಾಲ್ಟನ್ನ ಒಂಟಾರಿಯೊ ಸವಾರಿ (ಚುನಾವಣಾ ಜಿಲ್ಲೆ) ಯನ್ನು ಪ್ರತಿನಿಧಿಸುವ ನವದೀಪ್ ಸಿಂಗ್ ಬೈನ್ಸ್ ಅವರಿಗೆ ಇನ್ನೋವೇಶನ್ ಆ್ಯಂಡ್ ಸೈನ್ಸ್ ಆ್ಯಂಡ್ ಇಂಡಸ್ಟ್ರೀ ಸಚಿವಾಲಯದ ಉಸ್ತುವಾರಿ ವಹಿಸಲಾಗಿದೆ. ವಾಟರ್ಲೂ ಸಂಸದ ಬರ್ದಿಶ್ ಚಾಗರ್ ಅವರಿಗೆ ಇನ್ಕ್ಲೂಶನ್ ಆ್ಯಂಡ್ ಡೈವರ್ಸಿಟಿ ಆ್ಯಂಡ್ ಯೂತ್ ಸಚಿವಾಲಯವನ್ನು ನೀಡಲಾಗಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.