ನವದೆಹಲಿ: ಚೀನಾದಲ್ಲಿ ನಡೆದ ಶೂಟಿಂಗ್ ವಿಶ್ವಕಪ್ (ISSF) ಫೈನಲ್ ಪಂದ್ಯದಲ್ಲಿ ಭಾರತೀಯ ಶೂಟಿಂಗ್ ಪಟುಗಳು 3 ಚಿನ್ನದ ಪದಕಗಳನ್ನು ಜಯಿಸುವ ಮೂಲಕ ಭಾರತದ ಕೀರ್ತಿ ಪತಾಕೆಯನ್ನು ಹಾರಿಸಿದ್ದಾರೆ.
ಮನು ಭಾಕರ್, ದಿವ್ಯಾಂಶ್ ಪನ್ವರ್, ಎಲವೆನಿಲ್ ವಲರಿವನ್ ಅವರು ಬಂಗಾರದ ಪದಕಗಳನ್ನು ಗೆದ್ದಿದ್ದಾರೆ.
ಮಹಿಳೆಯರ 10 ಮೀಟರ್ ಏರ್ ಪಿಸ್ತೂಲ್ ವಿಭಾಗದಲ್ಲಿ ಮನು ಭಾಕರ್ ಅವರು ಚಿನ್ನದ ಪದಕವನ್ನು ಜಯಿಸಿದ್ದಾರೆ. 10 ಮೀಟರ್ ಏರ್ ರೈಫಲ್ ವಿಭಾಗದಲ್ಲಿ ಎಲವೆನಿಲ್ ವಲರಿವನ್ ಬಂಗಾರ ಜಯಿಸಿದ್ದಾರೆ ಮತ್ತು ಪುರುಷರ 10 ಮೀಟರ್ ಏರ್ ರೈಫಲ್ ವಿಭಾಗದಲ್ಲಿ ದಿವ್ಯಾಂಶ್ ಪನ್ವರ್ ಬಂಗಾರ ಜಯಿಸಿದ್ದಾರೆ.
ಭಾರತಕ್ಕೆ ಪದಕ ಜಯಿಸಿದ ಶೂಟಿಂಗ್ ಪಟುಗಳನ್ನು ಕ್ರೀಡಾ ಸಚಿವ ಕಿರಣ್ ರಿಜಿಜು ಅವರು ಅಭಿನಂದಿಸಿದ್ದಾರೆ.
ಟ್ವಿಟ್ ಮಾಡಿರುವ ಅವರು, “ಚೀನಾದಲ್ಲಿ ಜರುಗಿದ ಶೂಟಿಂಗ್ ವರ್ಲ್ಡ್ ಕಪ್ ಫೈನಲ್ ಪಂದ್ಯದಲ್ಲಿ ಭಾರತ 3 ಬಂಗಾರ ಜಯಿಸಿದೆ. ಮನು ಬಾಕೆರ್, ಎಲವೆನಿಲ್ ವಲರಿವನ್ ಮತ್ತು ದಿವ್ಯಾಂಶ್ ಪನ್ವರ್ ಅವರು ಕ್ರಮವಾಗಿ ಮಹಿಳೆಯರ 10 ಮೀ ಏರ್ ಪಿಸ್ತೂಲ್, 10 ಮೀ ಏರ್ ರೈಫಲ್ ಮತ್ತು ಪುರುಷರ 10 ಮೀ ಏರ್ ರೈಫಲ್ನಲ್ಲಿ ಬಂಗಾರ ಜಯಿಸಿದ್ದಾರೆ. ಅವರಿಗೆ ಅಭಿನಂದನೆಗಳು” ಎಂದಿದ್ದಾರೆ.
India bagged 3 gold medals at the Shooting World Cup Final in China. @realmanubhaker @elavalarivan and Divyansh Panwar won gold medals each in Women’s 10m Air Pistol, 10m Air Rifle and Men’s 10m Air Rifle. Hearty Congratulations! pic.twitter.com/EOSUMkEahI
— Kiren Rijiju (@KirenRijiju) November 21, 2019
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.