ನವದೆಹಲಿ: 2019ರ ನವೆಂಬರ್ 9 ರ “ಏಕಲ್ ವಿದ್ಯಾಲಯ ಫೌಂಡೇಶನ್ (ಇವಿಎಫ್)” ನ ವಾರ್ಷಿಕೋತ್ಸವ ದಿನವು ಐತಿಹಾಸಿಕವಾಗಿದೆ. ಯಾಕೆಂದರೆ ಈ ದಿನ ಏಕಲ್ ಶಾಲೆಗಳು 1,00,000 ಶಾಲಾ ಮೈಲಿಗಲ್ಲುಗಳನ್ನು ತಲುಪಿದೆ.
ಈಗಾಗಲೇ 99,200 ‘ಏಕಲ್’ ವಿದ್ಯಾಲಯಗಳಿವೆ. ನ್ಯೂಯಾರ್ಕ್ ನಗರದಲ್ಲಿ ನಡೆದ ‘ಫ್ಯೂಚರ್ ಆಫ್ ಇಂಡಿಯಾ’ ಗಾಲಾದಲ್ಲಿ ಇದರ ಮುಖ್ಯಸ್ಥ ಮೋಹನ್ ವಾಂಚೂ ಅವರು, 5 ವರ್ಷದೊಳಗೆ 800 ಶಾಲೆಗಳನ್ನು ನಿರ್ಮಾಣ ಮಾಡಲು ಹಣ ಸಂಗ್ರಹಿಸುವುದಾಗಿ ಘೋಷಣೆ ಮಾಡಿದ್ದಾರೆ. ಹೀಗಾಗಿ ‘ಏಕಲ್’ ಶಾಲೆಯ ಸಂಖ್ಯೆಯು 1 ಲಕ್ಷವನ್ನು ತಲುಪುತ್ತಿದೆ.
ಶೀಘ್ರದಲ್ಲೇ 800 ಶಾಲೆಗಳು ನಿರ್ಮಾಣವಾಗಲಿದ್ದು, ಇದರಿಂದ 25,000 ವಿದ್ಯಾರ್ಥಿಗಳಿಗೆ ವಿದ್ಯೆ ಸಿಗಲಿದೆ.
ಗಾಲಾದಲ್ಲಿ $3.1 ಮಿಲಿಯನ್ ಹಣವನ್ನು ಶಾಲೆಗಳ ನಿರ್ಮಾಣಕ್ಕಾಗಿ ಸಂಗ್ರಹಿಸಲಾಗಿದೆ. ಇದು ಲಾಸ್ ಏಂಜಲೀಸ್ ಗಾಲಾದಲ್ಲಿ ಸಂಗ್ರಹಿಸಲಾದ $ 2 ಮಿಲಿಯನ್ಗೆ ಹೆಚ್ಚುವರಿಯಾಗಿದೆ.
ಏಕಲ್ ಅಭಿಯಾನ್ ಲಾಭರಹಿತ ಸಂಸ್ಥೆಯಾಗಿದ್ದು, ಗ್ರಾಮೀಣ ಪ್ರದೇಶಗಳಲ್ಲಿ ಮತ್ತು ಭಾರತದ ಬುಡಕಟ್ಟು ಗ್ರಾಮಗಳಲ್ಲಿ ಶಿಕ್ಷಣ ಮತ್ತು ಗ್ರಾಮ ಅಭಿವೃದ್ಧಿಯಲ್ಲಿ ತೊಡಗಿಸಿಕೊಂಡಿದೆ. ಇದು ಭಾರತದ ಅತಿದೊಡ್ಡ ತಳಮಟ್ಟದ, ಸರ್ಕಾರೇತರ ಶಿಕ್ಷಣ ಉಪಕ್ರಮವಾಗಿದ್ದು, 96,000ಕ್ಕೂ ಅಧಿಕ ಹಳ್ಳಿಗಳಲ್ಲಿ 2.6 ದಶಲಕ್ಷಕ್ಕೂ ಹೆಚ್ಚು ಮಕ್ಕಳಿಗೆ ಉಚಿತ ಶಿಕ್ಷಣವನ್ನು ನೀಡುತ್ತಿದೆ.
ಹೆಸರೇ ಸೂಚಿಸುವಂತೆ, ಏಕಲ್ ಅಭಿಯಾನ್ ಕಾರ್ಯಾಚರಣೆಯ ಮಾದರಿಯು ಏಕ-ಶಿಕ್ಷಕ ಆಧಾರಿತ ಶಾಲೆಯಾಗಿದೆ. “ಏಕ್ ಶಿಕ್ಷಕ್, ಏಕ್ ವಿದ್ಯಾಲಯ” ಎಂಬ ಘೋಷಣೆಯೊಂದಿಗೆ ಇದು ಕಾರ್ಯನಿರ್ವಹಣೆ ಮಾಡುತ್ತಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.