ನವದೆಹಲಿ : ಅಯೋಧ್ಯೆಯಲ್ಲಿ ರಾಮಮಂದಿರ ನಿರ್ಮಾಣ ಮಾಡುವ ಕಾರ್ಯದಲ್ಲಿ ಮುಸ್ಲಿಮರು ಕೂಡ ಕೈಜೋಡಿಸಬೇಕು ಎಂದು ಮುಘಲ್ ದೊರೆ ಬಹಾದುರ್ ಶಾಹ್ ಜಫರ್ನ ವಂಶಸ್ಥ ಎಂದು ಹೇಳಲಾದ ಯಾಕೂಬ್ ಹಬಿಬುದ್ದಿನ್ ಟುಸಿ ಹೇಳಿದ್ದಾರೆ.
ಅಯೋಧ್ಯದ ಬಗ್ಗೆ ಸುಪ್ರೀಂ ಕೋರ್ಟ್ ನೀಡಿರುವ ತೀರ್ಪನ್ನು ಐತಿಹಾಸಿಕ ಎಂದು ಬಣ್ಣಿಸಿರುವ ಅವರು, ಎಲ್ಲರೂ ಸಂತೋಷದಿಂದ ಈ ತೀರ್ಪನ್ನು ಸ್ವೀಕಾರ ಮಾಡಬೇಕು ಎಂದಿದ್ದಾರೆ. ಅಲ್ಲದೆ ಭಾತೃತ್ವದ ಸಂಕೇತವಾಗಿ ಮುಸ್ಲಿಮರು ಕೂಡ ರಾಮಮಂದಿರ ನಿರ್ಮಾಣ ಕಾರ್ಯದಲ್ಲಿ ಕೈಜೋಡಿಸಬೇಕು ಎಂದು ಕರೆ ನೀಡಿದ್ದಾರೆ.
“ಅಯೋಧ್ಯೆಯಲ್ಲಿ ರಾಮಮಂದಿರ ನಿರ್ಮಾಣ ಮಾಡಲು ಹಿಂದೂಗಳು ಮತ್ತು ಮುಸ್ಲಿಮರು ಒಟ್ಟುಗೂಡಬೇಕು. ಈ ಮೂಲಕ ಜಾತ್ಯತೀತತೆ ಮತ್ತು ಧಾರ್ಮಿಕ ಭಾತೃತ್ವದ ಉದಾಹರಣೆಯನ್ನು ಜಗತ್ತಿಗೆ ನೀಡಬೇಕು” ಎಂದಿದ್ದಾರೆ.
ಅಯೋಧ್ಯೆಯಲ್ಲಿ ರಾಮಮಂದಿರ ನಿರ್ಮಾಣ ಮಾಡುವುದಕ್ಕೆ ಚಿನ್ನದ ಇಟ್ಟಿಗೆಯನ್ನು ನೀಡುವುದಾಗಿ ಯಾಕೂಬ್ ಅವರು ಈ ಹಿಂದೆ ಘೋಷಣೆ ಮಾಡಿದ್ದರು, ಅದರಂತೆ ಚಿನ್ನದ ಇಟ್ಟಿಗೆಯನ್ನು ಪ್ರಧಾನಿ ಮೋದಿ ಅವರಿಗೆ ಹಸ್ತಾಂತರ ಮಾಡುವುದಾಗಿ ಯಕೂಬ್ ಪುನರುಚ್ಚರಿಸಿದ್ದಾರೆ.
“ನೀಡಿದ ಭರವಸೆಯಂತೆ ನಾನು ಬಂಗಾರದ ಇಟ್ಟಿಗೆಯನ್ನು ನೀಡಲಿದ್ದೇನೆ. ದೇಗುಲಕ್ಕೆ ಅಡಿಗಲ್ಲು ಹಾಕುವ ಸಂದರ್ಭದಲ್ಲಿ ಪ್ರಧಾನಿಯವರಿಗೆ ಇಟ್ಟಿಗೆಯನ್ನು ಹಸ್ತಾಂತರ ಮಾಡಲಿದ್ದೇನೆ” ಎಂದಿದ್ದಾರೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.