ನವದೆಹಲಿ: ಭಾರತದ ಸ್ಟಾರ್ಟ್ಅಪ್ ಪರಿಸರ ವ್ಯವಸ್ಥೆಯು 2019ರ 3.9- 4.3 ಲಕ್ಷ ನೇರ ಉದ್ಯೋಗಗಳಿಂದ 2025ರ ವೇಳೆಗೆ 12.5 ಲಕ್ಷ ನೇರ ಉದ್ಯೋಗಗಳನ್ನು ಸೃಷ್ಟಿಸುವ ಸಾಮರ್ಥ್ಯವನ್ನು ಹೊಂದಲಿದೆ ಎಂದು ಇಂಡಸ್ಟ್ರಿ ಬಾಡಿ ನ್ಯಾಷನಲ್ ಅಸೋಸಿಯೇಶನ್ ಆಫ್ ಸಾಫ್ಟ್ವೇರ್ ಆ್ಯಂಡ್ ಸರ್ವೀಸಸ್ ಕಂಪನೀಸ್ (Nasscom) ತನ್ನ ಹೊಸ ವರದಿಯಲ್ಲಿ ತಿಳಿಸಿದೆ.
ಭಾರತದಲ್ಲಿ ಸ್ಟಾರ್ಟ್ಅಪ್ ಪರಿಸರ ವ್ಯವಸ್ಥೆಯಿಂದ ಸೃಷ್ಟಿಸಲ್ಪಟ್ಟ ಪರೋಕ್ಷ ಉದ್ಯೋಗಗಳ ಸಂಖ್ಯೆ ಈ ವರ್ಷ 14-16 ಲಕ್ಷ ಉದ್ಯೋಗಗಳಿಂದ 2025 ರ ವೇಳೆಗೆ 39-44 ಲಕ್ಷಕ್ಕೆ ಏರಬಹುದು ಎಂದು “ಭಾರತದ ಟೆಕ್ ಸ್ಟಾರ್ಟ್ ಅಪ್ ಪರಿಸರ ವ್ಯವಸ್ಥೆ” ಎಂಬ ಶೀರ್ಷಿಕೆಯ ತನ್ನ ವರದಿಯಲ್ಲಿ Nasscom) ತಿಳಿಸಿದೆ.
“ಹೊಸ ಪದವೀಧರರು ಮಹಾನಗರ ಅಲ್ಲದ ನಗರಗಳಲ್ಲಿ ಉಳಿಯಲು ಆಯ್ಕೆ ಮಾಡುತ್ತಿರುವುದರಿಂದ ಭಾರತದ ಪ್ರತಿಭೆಗಳ ನೆಲೆಯು ದೊಡ್ಡ ನಗರಗಳನ್ನು ಮೀರಿ ವಿಸ್ತರಿಸುತ್ತಿದೆ. ಈ ಯುವಕರು ಇಂಟರ್ನೆಟ್ ಮೂಲಕ ತಂತ್ರಜ್ಞಾನಗಳಿಗೆ ಹೆಚ್ಚು ಮುಕ್ತವಾಗಿದ್ದಾರೆ. ಇದು ಸ್ಟಾರ್ಟ್ಅಪ್ ಕಂಪನಿಗಳಿಗೆ ಕಡಿಮೆ ವೆಚ್ಚದಲ್ಲಿ ಗುಣಮಟ್ಟದ ಪ್ರತಿಭೆಗಳನ್ನು ನೇಮಿಸಿಕೊಳ್ಳಲು ಅನುವು ಮಾಡಿಕೊಡುತ್ತದೆ. ಉತ್ತಮ ಪ್ರಗತಿ ಮತ್ತು ಬೆಳವಣಿಗೆಗೆ ಇದು ಆಧಾರವಾಗಿದೆ” ಎಂದು ವರದಿ ಹೇಳಿದೆ.
2025ರ ವೇಳೆಗೆ ಭಾರತದ ಸ್ಟಾರ್ಟ್ಅಪ್ ಪರಿಸರ ವ್ಯವಸ್ಥೆಯು ಸುಮಾರು ನಾಲ್ಕು ಪಟ್ಟು ಬೆಳೆಯುವ ಸಾಮರ್ಥ್ಯವನ್ನು ಹೊಂದಿದೆ ಎಂದು ವರದಿ ತಿಳಿಸುತ್ತದೆ.
“ಅಗ್ರಿಟೆಕ್, ಏರೋಸ್ಪೇಸ್, ಡಿಫೆನ್ಸ್ ಮತ್ತು ಸ್ಪೇಸ್ ಮುಂತಾದ ಕ್ಷೇತ್ರಗಳಲ್ಲಿ ಗಮನಾರ್ಹ ಸುಧಾರಣೆಯೊಂದಿಗೆ ಎಡ್ಟೆಕ್, ರಿಟೇಲ್& ರಿಟೇಲ್ ಟೆಕ್, ಎಚ್ಆರ್ ಮತ್ತು ಹೆಲ್ತ್ಟೆಕ್ ಟೆಕ್ನಾಲಜಿ ಸ್ಟಾರ್ಟ್ಅಪ್ಗಳಲ್ಲಿ ಹೆಚ್ಚಿನ ಚಟುವಟಿಕೆ ನಡೆಯಲಿದೆ” ಎಂದು ಜಾಗತಿಕ ನಿರ್ವಹಣೆ ಮತ್ತು ಕಾರ್ಯತಂತ್ರದ ಕಂಪನಿ ಝಿನ್ನೋವ್ ಸಹಯೋಗದೊಂದಿಗೆ Nasscom ಹೊರತಂದ ವರದಿ ತಿಳಿಸಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.