ನವದೆಹಲಿ: ಅಮೆರಿಕಾದ ಬಿಲಿಯನೇರ್ ಹೂಡಿಕೆದಾರ ರೇ ಡಾಲಿಯೊ ಅವರು ಪ್ರಧಾನಿ ನರೇಂದ್ರ ಮೋದಿಯವರನ್ನು “ವಿಶ್ವದ ಅತ್ಯುತ್ತಮ ನಾಯಕರಲ್ಲಿ ಒಬ್ಬರು” ಎಂದು ಶ್ಲಾಘಿಸಿದ್ದಾರೆ.
ಸಂದರ್ಶನವೊಂದರಲ್ಲಿ, ಅಮೆರಿಕದ ಹೂಡಿಕೆ ನಿರ್ವಹಣಾ ಸಂಸ್ಥೆ ಬ್ರಿಡ್ಜ್ವಾಟರ್ ಅಸೋಸಿಯೇಟ್ಸ್ನ ಸಂಸ್ಥಾಪಕರಾದ ಡಾಲಿಯೊ ಅವರು ಪ್ರಧಾನಮಂತ್ರಿಯೊಂದಿಗೆ ಮಧ್ಯಸ್ಥಿಕೆ, ವಿಶ್ವ ಮತ್ತು ಭಾರತದ ಬಗ್ಗೆ ಚರ್ಚೆ ನಡೆಸಿದರು.
ಟ್ವೀಟ್ನಲ್ಲಿ, ಡಾಲಿಯೊ ಅವರು “ಪ್ರಧಾನಿ ಮೋದಿಯವರು ವಿಶ್ವದ ಅತ್ಯುತ್ತಮ ನಾಯಕರು ಮತ್ತು ಇಡೀ ದೇಶವನ್ನು ಒಗ್ಗೂಡಿಸಿದ ಕೀರ್ತಿಗೆ ಪಾತ್ರರಾಗಿದ್ದಾರೆ” ಎಂದಿದ್ದಾರೆ.
“ಬಡತನದಲ್ಲಿರುವವರಿಂದ ಹಿಡಿದು ಶ್ರೀಮಂತ ಉದ್ಯಮ ಮುಖಂಡರವರೆಗೆ ಪೂರ್ಣ ಪ್ರಮಾಣದ ಜನರಿಗೆ ಸಹಾಯ ಮಾಡುವ ಮೂಲಕ ಅವರು ದೇಶವನ್ನು ಒಟ್ಟುಗೂಡಿಸಿದ ರೀತಿ ಮೋದಿಯ ಬಗ್ಗೆ ನಾನು ಹೆಚ್ಚು ಪ್ರಭಾವಿತನಾಗಿರುವ ಅಂಶವಾಗಿದೆ” ಎಂದು ಡಾಲಿಯೊ ಟ್ವೀಟ್ ಮಾಡಿದ್ದಾರೆ.
100 ಮಿಲಿಯನ್ ಶೌಚಾಲಯಗಳನ್ನು ನಿರ್ಮಿಸಲು ಸರ್ಕಾರ ಮಾಡುತ್ತಿರುವ ಪ್ರಯತ್ನಗಳನ್ನು ಡಾಲಿಯೊ ಶ್ಲಾಘಿಸಿದರು, ಇದರಿಂದಾಗಿ ರೋಗಗಳು ಕಡಿಮೆಯಾಗುತ್ತವೆ ಮತ್ತು ಸಾವಿರಾರು ಜೀವಗಳನ್ನು ಉಳಿಸಲಾಗುತ್ತಿದೆ ಎಂದರು.
“ಭಾರತದ ನಿರ್ದೇಶನದ ಬಗೆಗಿನ ತನ್ನ ಮಿಶನ್ ಭಾಗವಾಗಿ ಮೋದಿಯವರು ಮೂಲಭೂತ ಸೌಲಭ್ಯಗಳು ಮತ್ತು ಅತ್ಯಾಧುನಿಕ ಡಿಜಿಲ್ ತಂತ್ರಜ್ಞಾನಗಳನ್ನು ಪೂರೈಸುವ ಮೂಲಕ ಮೋದಿಯವರು ದೇಶವನ್ನು ಒಟ್ಟುಗೂಡಿಸಿದ್ದಾರೆ. ಉದಾಹರಣೆ, ಸರ್ಕಾರವು 100 ಮಿಲಿಯನ್ ಶೌಚಾಲಯಗಳನ್ನು ನಿರ್ಮಾಣ ಮಾಡಿ, ಇದರಿಂದ 300,000 ಜನರ ಪ್ರಾಣ ಉಳಿದಿದೆ” ಎಂದರು.
ಕ್ರಾಂತಿಕಾರಿ ಬದಲಾವಣೆಗಳನ್ನು ತರಲು ಸಾಧ್ಯವಿರುವಂತಹ ಜನಾದೇಶವನ್ನು ಮೋದಿಯವರು ಹೊಂದಿದ್ದಾರೆ ಎಂದು ಡಾಲಿಯೊ ಹೇಳಿದ್ದಾರೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.