ನವದೆಹಲಿ: ಗವರ್ನ್ಮೆಂಟ್ ಇ-ಮಾರ್ಕೆಟ್ಪ್ಲೇಸ್ (GeM) ಪೋರ್ಟಲ್ನಲ್ಲಿನ ಗ್ರಾಸ್ ಮರ್ಚಂಡೈಸ್ ವ್ಯಾಲ್ಯೂ (GMV) 36,000 ಕೋಟಿ ರೂಗಳನ್ನು ದಾಟಿದೆ ಎಂದು ಸಿಇಓ ತಲ್ಲೀನ್ ಕುಮಾರ್ ಮಾಹಿತಿ ನೀಡಿದ್ದಾರೆ.
2.95 ಲಕ್ಷ ಮಾರಾಟಗಾರರು ಮತ್ತು ಸೇವಾ ಪೂರೈಕೆದಾರರು ಈಗಾಗಲೇ GeM ಅನ್ನು ಸರ್ಕಾರಿ ಪೋರ್ಟಲ್ನೊಂದಿಗೆ ನೋಂದಾಯಿಸಿಕೊಂಡಿದ್ದಾರೆ, ಈ ಮೂಲಕ ನೋಂದಾಯಿತ ಸುಮಾರು 40 ಸಾವಿರ ಖರೀದಿದಾರ ಸಂಸ್ಥೆಗಳೊಂದಿಗೆ ಸಂಪರ್ಕ ಸಾಧಿಸಿದ್ದಾರೆ.
ಮಾರಾಟಗಾರರಲ್ಲಿ, 58,101ಕ್ಕೂ ಹೆಚ್ಚು ಎಂಎಸ್ಎಂಇಗಳನ್ನು ಪೋರ್ಟಲ್ನಲ್ಲಿ ನೋಂದಾಯಿಸಲಾಗಿದೆ ಮತ್ತು GeMನಲ್ಲಿನ ಸಂಪೂರ್ಣ ವಹಿವಾಟು ಮೌಲ್ಯದ ಶೇಕಡಾ 50ರಷ್ಟು ಎಂಎಸ್ಎಂಇಗಳಿಂದ ಬಂದಿವೆ. 3000 ಕ್ಕೂ ಹೆಚ್ಚು ಸ್ಟಾರ್ಟ್ಅಪ್ಗಳು ಸಹ GeMನಲ್ಲಿ ನೋಂದಾಯಿಸಿಕೊಂಡಿವೆ ಮತ್ತು ಅವರು ಇಲ್ಲಿಯವರೆಗೆ 522 ಕೋಟಿ ರೂ.ಗಳ ಆರ್ಡರ್ಗಳನ್ನು ಸ್ವೀಕರಿಸಿದ್ದಾರೆ ಎಂದು ಪತ್ರಿಕಾ ಪ್ರಕಟಣೆ ತಿಳಿಸಿದೆ.
ಅನುಷ್ಠಾನಗೊಳ್ಳುತ್ತಿರುವ ಬೆಳವಣಿಗೆಗಳ ಬಗ್ಗೆ ಮಾಹಿತಿ ನೀಡಿದ ಸಿಇಓ, ಮಾರಾಟಗಾರರ ನೋಂದಣಿಗೆ ತೆಗೆದುಕೊಳ್ಳುವ ಸರಾಸರಿ ಸಮಯವು 20 ದಿನಗಳಿಂದ 2 ದಿನಗಳಿಗೆ ಇಳಿದಿದೆ ಮತ್ತು ಸಾಮಾನ್ಯವಾಗಿ ಸರ್ಕಾರಿ ಘಟಕಗಳು ಮತ್ತು ಸಿಪಿಎಸ್ಯುಗಳು GeMನಿಂದ ಹೆಚ್ಚು ಖರೀದಿ ಮಾಡುತ್ತಿವೆ ಎಂದಿದ್ದಾರೆ.
ಸರ್ಕಾರಿ ಪೋರ್ಟಲ್ಗೆ ಸ್ವ-ಸಹಾಯ ಗುಂಪುಗಳು (ಎಸ್ಎಚ್ಜಿ) ಮತ್ತು ಕುಶಲಕರ್ಮಿಗಳನ್ನು ಸಂಪರ್ಕಿಸಲು ಪ್ರಯತ್ನಗಳು ನಡೆಯುತ್ತಿದೆ ಎಂದ ಅವರು, ಅವರುಗಳ ಅನನ್ಯ ಉತ್ಪನ್ನಗಳಿಗೆ ಉತ್ತಮ ಮೌಲ್ಯವನ್ನು ದೊರಕಿಸಿಕೊಡಲು ಎಂಪೋರಿಯಮ್ ಉತ್ಪನ್ನಗಳಾಗಿ ವರ್ಗೀಕರಿಸಲಾಗುವುದು ಎಂದಿದ್ದಾರೆ.
GeM ಸಂಪೂರ್ಣ ಆನ್ಲೈನ್ ಮಾರುಕಟ್ಟೆಯಾಗಿದ್ದು, ಎಲ್ಲಾ ಬೋನಾಫೈಡ್ ಮಾರಾಟಗಾರರಿಗೆ ತಮ್ಮನ್ನು ನೋಂದಾಯಿಸಿಕೊಳ್ಳಲು ಮತ್ತು ವೇದಿಕೆಯಲ್ಲಿ ವಹಿವಾಟು ನಡೆಸಲು ಅನುವು ಮಾಡಿಕೊಡುತ್ತದೆ. ಎಲ್ಲಾ ಪರಿಶೀಲನೆಗಳು ಮತ್ತು ವಹಿವಾಟುಗಳನ್ನು ಆನ್ಲೈನ್ ಏಕೀಕರಣದ ಮೂಲಕ ನಗದುರಹಿತ, ಸಂಪರ್ಕವಿಲ್ಲದ ಮತ್ತು ಕಾಗದರಹಿತ ರೀತಿಯಲ್ಲಿ ಮಾಡಲಾಗುತ್ತದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.