ನವದೆಹಲಿ: ಭಾರತದಲ್ಲಿ ಈ ಬಾರಿ ಆಚರಿಸಲಾದ ದೀಪಾವಳಿ ಹಬ್ಬ ಚೀನಾಗೆ ದೊಡ್ಡ ಮಟ್ಟದ ಹೊಡೆತವನ್ನೇ ನೀಡಿದೆ. ಈ ದೀಪಾವಳಿಯಲ್ಲಿ ಚೀನಾದ ವಸ್ತುಗಳ ಮಾರಾಟದಲ್ಲಿ ಶೇ.60ರಷ್ಟು ಇಳಿಮುಖವಾಗಿದೆ ಎಂದು ಸಮೀಕ್ಷೆ ತಿಳಿಸಿದೆ.
ದೀಪಾವಳಿ ಹಬ್ಬದ ಸಂದರ್ಭದಲ್ಲಿ ದೇಶದ 21 ನಗರಗಳಲ್ಲಿ ಕಾನ್ಫೆಡರೇಶನ್ ಆಫ್ ಆಲ್ ಇಂಡಿಯಾ ಟ್ರೇಡರ್ಸ್ (ಸಿಎಐಟಿ) ನಡೆಸಿದ ಸಮೀಕ್ಷೆಯಲ್ಲಿ ಚೀನಾದ ಉತ್ಪನ್ನಗಳ ಮಾರಾಟದಲ್ಲಿ 60% ಕುಸಿತ ಕಂಡುಬಂದಿದೆ ಎಂಬುದು ತಿಳಿದು ಬಂದಿದೆ.
ಒಂದು ಅಂದಾಜಿನ ಪ್ರಕಾರ, 2018 ರಲ್ಲಿ ದೀಪಾವಳಿಯ ಸಂದರ್ಭದಲ್ಲಿ ಮಾರಾಟವಾದ ಚೀನಿ ಉತ್ಪನ್ನಗಳ ಮೌಲ್ಯ ಸುಮಾರು 8000 ಕೋಟಿ ರೂಪಾಯಿ ಆಗಿದ್ದರೆ, ಈ ವರ್ಷ ದೀಪಾವಳಿಯಲ್ಲಿ ಚೀನಾದ ಸರಕುಗಳ ಮಾರಾಟ ಸುಮಾರು 3200 ಕೋಟಿ ರೂಪಾಯಿ ಆಗಿದೆ.
ಚೀನಿ ಉತ್ಪನ್ನಗಳ ಮಾರಾಟದಲ್ಲಿನ ಈ ಭಾರಿ ಕುಸಿತವು ಭಾರತೀಯ ಉದ್ಯಮಿಗಳ ಖರೀದಿ ಮನಸ್ಥಿತಿ ಮತ್ತು ಭಾರತೀಯ ಗ್ರಾಹಕರ ಬದಲಾಗುತ್ತಿರುವ ಖರೀದಿ ನಡವಳಿಕೆಯನ್ನು ಪ್ರತಿಬಿಂಬಿಸುತ್ತದೆ.
ಸಿಎಐಟಿ ಕಳೆದ ವರ್ಷ ಚೀನಿ ಉತ್ಪನ್ನಗಳ ಬಹಿಷ್ಕಾರಕ್ಕಾಗಿ ರಾಷ್ಟ್ರವ್ಯಾಪಿ ಅಭಿಯಾನವನ್ನು ಪ್ರಾರಂಭಿಸಿತು, ಇದರಿಂದಾಗಿ ಕಳೆದ ವರ್ಷ ಚೀನಾದ ಸರಕುಗಳ ಮಾರಾಟದಲ್ಲಿ ಸುಮಾರು 30% ನಷ್ಟು ಕುಸಿತ ಕಂಡಿತ್ತು. ಈ ವರ್ಷ ಇನ್ನಷ್ಟು ಹೆಚ್ಚು ಕುಸಿತ ಕಂಡಿದೆ. ಸಿಎಐಟಿಯ ಸಮೀಕ್ಷೆಯ ಪ್ರಕಾರ, ಚೀನಿ ಉತ್ಪನ್ನಗಳ ಮಾರಾಟದಲ್ಲಿ, ವಿಶೇಷವಾಗಿ ಉಡುಗೊರೆ ವಸ್ತುಗಳು, ವಿದ್ಯುತ್ ಗ್ಯಾಜೆಟ್ಗಳು, ಅಲಂಕಾರಿಕ ದೀಪಗಳು, ಅಡಿಗೆ ವಸ್ತುಗಳು, ಪ್ಲಾಸ್ಟಿಕ್ ವಸ್ತುಗಳು, ದೇವರುಗಳ ಮೂರ್ತಿ, ಮನೆ ಅಲಂಕಾರಿಕ ವಸ್ತುಗಳು, ಆಟಿಕೆಗಳು, ಎಲೆಕ್ಟ್ರಾನಿಕ್ ವಸ್ತುಗಳು, ವಾಲ್ ಹ್ಯಾಂಗಿಂಗ್ಗಳ ಮಾರಾಟದಲ್ಲಿ ದೊಡ್ಡ ಕುಸಿತ ಕಂಡುಬಂದಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.