ನವದೆಹಲಿ: ಜಮ್ಮು ಕಾಶ್ಮೀರದ ಬ್ಲಾಕ್ ಡೆವಲಪ್ಮೆಂಟ್ ಕೌನ್ಸಿಲ್ ಚುನಾವಣೆಯಲ್ಲಿ ವಿಜೇತರಾದ ಅಭ್ಯರ್ಥಿಗಳನ್ನು ಅಭಿನಂದಿಸಿರುವ ಪ್ರಧಾನಿ ನರೇಂದ್ರ ಮೋದಿ, ಈ ಚುನಾವಣೆಯು ಹೊಸ ಉದಯ ಮತ್ತು ಯುವ ನಾಯಕತ್ವವನ್ನು ಪ್ರತಿಬಿಂಬಿಸುತ್ತದೆ ಎಂದಿದ್ದಾರೆ.
ಜಮ್ಮು ಕಾಶ್ಮೀರ, ಲಡಾಖ್ ಕೇಂದ್ರಾಡಳಿತ ಪ್ರದೇಶಗಳಲ್ಲಿ ನಡೆದ ಚುನಾವಣೆ ಅತ್ಯಂತ ಶಾಂತಿಯುತವಾಗಿತ್ತು, ಮಾತ್ರವಲ್ಲದೇ ಅತ್ಯಧಿಕ ಅಂದರೆ ಶೇ.98ರಷ್ಟು ಮತದಾನವಾಗಿತ್ತು. 370ನೇ ವಿಧಿಯನ್ನು ರದ್ದುಪಡಿಸಿದ ಬಳಿಕ ನಡೆದ ಮೊದಲ ಸ್ಥಳಿಯ ಚುನಾವಣೆ ಇದಾದ ಕಾರಣ ಮತದಾನ ಪ್ರಕ್ರಿಯೆ ಅತ್ಯಂತ ಕುತೂಹಲವನ್ನು ಕೆರಳಿಸಿತ್ತು.
ಈ ಬಗ್ಗೆ ಟ್ವಿಟ್ ಮಾಡಿರುವ ಮೋದಿ, “ಜಮ್ಮು, ಕಾಶ್ಮೀರ, ಲೇಹ್ ಮತ್ತು ಲಡಾಕ್ನಲ್ಲಿ ನಡೆದ BDC ಚುನಾವಣೆಗಳು ಅತ್ಯಂತ ಶಾಂತಿಯುತವಾಗಿ ನಡೆದಿವೆ ಎಂಬ ವಿಚಾರ ಹಂಚಿಕೊಳ್ಳಲು ನನಗೆ ಸಂತೋಷವಾಗುತ್ತಿದೆ. ಯಾವುದೇ ಹಿಂಸೆ ಇಲ್ಲದೆ ಚುನಾವಣೆ ಜರುಗಿದೆ. ಇದು ಪ್ರಜಾಪ್ರಭುತ್ವದ ಬಗ್ಗೆ ಜನರ ಅಚಲ ನಂಬಿಕೆ ಮತ್ತು ತಳಮಟ್ಟದ ಆಡಳಿತಕ್ಕೆ ಅವರು ನೀಡುವ ಮಹತ್ವವನ್ನು ತೋರಿಸುತ್ತದೆ ”ಎಂದು ಪ್ರಧಾನಿ ಮೋದಿ ಹೇಳಿದ್ದಾರೆ.
“ಆಗಸ್ಟ್ 5 ರಂದು ತೆಗೆದುಕೊಂಡ ಮಹತ್ವಪೂರ್ಣ ನಿರ್ಧಾರದಿಂದಾಗಿ ಜಮ್ಮು ಕಾಶ್ಮೀರ ಜನತೆಗೆ ತಮ್ಮ ಹಕ್ಕನ್ನು ಚಲಾಯಿಸಲು ಸಾಧ್ಯವಾಯಿತು. ಈ ಬಗ್ಗೆ ಭಾರತದ ಸಂಸತ್ತು ಹೆಮ್ಮೆ ಪಟ್ಟುಕೊಳ್ಳುತ್ತದೆ” ಎಂದಿದ್ದಾರೆ. ಗೆದ್ದ ಅಭ್ಯರ್ಥಿಗಳಿಗೆ ಅಭಿನಂದನೆಗಳನ್ನು ಸಲ್ಲಿಸಿದ್ದಾರೆ.
I am delighted to share that the BDC polls in Jammu, Kashmir, Leh and Ladakh were conducted in a very peaceful manner. There was no violence.
This shows the people’s unwavering faith in democracy and the importance they accord to grassroots level governance.
— Narendra Modi (@narendramodi) October 25, 2019
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.