ನವದೆಹಲಿ: ಪಾಕಿಸ್ಥಾನವು ಜಗತ್ತನ್ನು ಭಾರತದ ವಿರುದ್ಧ ಎತ್ತಿ ಕಟ್ಟಲು ಪ್ರಯತ್ನಿಸುತ್ತಿದೆ. ತನ್ನ ರಾಯಭಾರ ಕಛೇರಿಗಳ ಮೂಲಕ ವಿವಿಧ ದೇಶಗಳಲ್ಲಿ ಕಾಶ್ಮೀರ ವಿಭಾಗಗಳನ್ನು ತೆರೆಯುತ್ತಿದೆ. ಈ ವಿಭಾಗಗಳ ಮೂಲಕ ಅಲ್ಲಿನ ಸ್ಥಳಿಯ ಜನರನ್ನು ಕಾಶ್ಮೀರದ ವಿಷಯದಲ್ಲಿ ಒಟ್ಟುಗೂಡಿಸಿ ಭಾರತದ ವಿರುದ್ಧ ಪ್ರತಿಭಟಿಸುವಂತೆ ಮಾಡುತ್ತಿದೆ. ಈ ಬಗ್ಗೆ ಎಚ್ಚೆತ್ತುಕೊಂಡಿರುವ ಭಾರತ ಇಂತಹ ವಿಭಾಗಗಳ ವಿರುದ್ಧ ಕ್ರಮ ತೆಗೆದುಕೊಳ್ಳುವಂತೆ ಆಯಾ ದೇಶಗಳಿಗೆ ಸೂಚನೆಯನ್ನು ನೀಡಿದೆ.
“ಪಾಕಿಸ್ಥಾನ ಸರ್ಕಾರವು ಕಾಶ್ಮೀರ ವಿಭಾಗಳನ್ನು ವಿಶ್ವದ ತನ್ನ ಎಲ್ಲಾ ರಾಯಭಾರ ಕಛೇರಿಗಳಲ್ಲಿ ಸ್ಥಾಪಿಸಿದೆ ಎಂಬ ವಿಷಯ ನಮಗೆ ತಿಳಿದಿದೆ. ಈ ವಿಭಾಗಗಳ ಮುಖ್ಯ ಉದ್ದೇಶ ಸ್ಥಳೀಯ ಜನರನ್ನು ಪ್ರಚೋದಿಸುವುದು. ಸುಳ್ಳು ಪ್ರಚಾರದ ಮೂಲಕ ಅವರನ್ನು ಮೂಲಭೂತವಾದಿಗಳನ್ನಾಗಿ ಮಾಡುವುದು ಮತ್ತು ಭಾರತದ ವಿರುದ್ಧ ಛೂ ಬಿಡುವುದು”ಎಂದು ವಿದೇಶಾಂಗ ವ್ಯವಹಾರಗಳ ವಕ್ತಾರ ರವೀಶ್ ಕುಮಾರ್ ಹೇಳಿದ್ದಾರೆ.
“ಹಿಂಸಾಚಾರವನ್ನು ಬಹಿರಂಗವಾಗಿ ಪ್ರಚೋದಿಸುವ ಇಂತಹ ವಿಭಾಗಗಳು ತುಂಬಾ ಅಪಾಯಕಾರಿ ಎಂದು ಕಾಶ್ಮೀರ ವಿಭಾಗಗಳನ್ನು ತೆರೆಯಲಾಗಿರುವ ದೇಶಗಳು ಅರ್ಥ ಮಾಡಿಕೊಳ್ಳುತ್ತವೆ ಎಂದು ಭಾವಿಸಿದ್ದೇನೆ. ತಮ್ಮ ನೆಲದಲ್ಲಿ ಕಾರ್ಯನಿರ್ವಹಣೆ ಮಾಡುವ ಇಂತಹ ವಿಭಾಗಗಳನ್ನು ಅವು ಮುಚ್ಚಬೇಕು ಮತ್ತು ಅವುಗಳ ವಿರುದ್ಧ ಸೂಕ್ತ ಕ್ರಮ ತೆಗೆದುಕೊಳ್ಳಬೇಕು” ಎಂದು ಅವರು ಒತ್ತಾಯಿಸಿದ್ದಾರೆ.
ಕಾಶ್ಮೀರ ವಿಷಯವನ್ನು ಅಂತಾರಾಷ್ಟ್ರೀಕರಣಗೊಳಿಸುವ ತನ್ನ ನಟೋರಿಯಸ್ ಪ್ರಯತ್ನದ ಭಾಗವಾಗಿ ಪಾಕಿಸ್ಥಾನ ಜಗತ್ತಿನಾದ್ಯಂತ ಕಾಶ್ಮೀರ ವಿಭಾಗಗಳನ್ನು ತೆರೆಯುತ್ತಿದೆ. ಪಾಕಿಸ್ಥಾನದ ಇಂತಹ ಪ್ರಯತ್ನಗಳನ್ನು ಭಾರತ ವಿಫಲಗೊಳಿಸಲು ಸರ್ವ ಸನ್ನದ್ಧವಾಗಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.